ಸಾಂಬಾದಲ್ಲಿ ಹಲವು ಪಾಕ್ ಉಗ್ರರ ಹತ್ಯೆ

Public TV
1 Min Read
terrorist

ನವದೆಹಲಿ: ಸಾಂಬಾದಲ್ಲಿ ಹಲವು ಪಾಕ್‌ ಉಗ್ರರ ಹತ್ಯೆ ಮಾಡಲಾಗಿದೆ ಎಂದು ಭಾರತದ ಗಡಿ ಭದ್ರತಾ ಪಡೆ ತಿಳಿಸಿದೆ.

ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ ಎಂದು ಹೇಳಿದೆ.

ಸಾಂಬಾದ ಅಂತರರಾಷ್ಟ್ರೀಯ ಗಡಿಯಲ್ಲಿ ಅನೇಕ ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜಮ್ಮು, ರಾಜಸ್ಥಾನ ಮತ್ತು ಪಂಜಾಬ್‌ನ ಅಮೃತಸರ ಸೇರಿ ಹಲವೆಡೆ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಮಿಸೈಲ್‌, ಡ್ರೋನ್‌ ದಾಳಿ ನಡೆಸಿತು. ಭಾರತೀಯ ಸೇನೆ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದೆ. ಪಾಕ್‌ನ ಎಲ್ಲಾ ಮಿಸೈಲ್‌ಗಳನ್ನು ಹೊಡೆದುರುಳಿಸಿದೆ.

Share This Article