ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್ (Suman Talwar) ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಮನ್ ಈಗ ಸೀರಿಯಲ್‌ವೊಂದರಲ್ಲಿ ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಯುದ್ಧವು ದೇಶದ ಖ್ಯಾತಿಗೆ ಒಳ್ಳೆಯದಲ್ಲ: ‘ಆಪರೇಷನ್ ಸಿಂಧೂರ’ ಬಗ್ಗೆ ಸಂಜನಾ ಗಲ್ರಾನಿ ಪೋಸ್ಟ್
ಮೂಲತಃ ಮಂಗಳೂರಿನವರಾಗಿರುವ ಸುಮನ್ ತಲ್ವಾರ್ ಅವರು ಸೌತ್‌ನಲ್ಲಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡಿರುವವರು. ಈಗ ‘ಸ್ನೇಹದ ಕಡಲಲ್ಲಿ’ ಸೀರಿಯಲ್‌ನಲ್ಲಿ ನಾಯಕ ಚಂದು ಗೌಡ (Chandu Gowda) ತಂದೆಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ಮಾದವ್ ಅರಸ್ ಎಂಬ ರೋಲ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮೇ 12ರಿಂದ ರಾತ್ರಿ 8:30ಕ್ಕೆ ಪ್ರಸಾರವಾಗಲಿದೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪ್ರಾಣವನ್ನೇ ಪಣಕ್ಕಿಟ್ಟು ರಕ್ಷಿಸುವ ನಮ್ಮ ಸೈನಿಕರಿಗೆ ಥ್ಯಾಂಕ್ಯೂ ಎಂದ ರಶ್ಮಿಕಾ ಮಂದಣ್ಣ
ರಮ್ಯಾ ಕೃಷ್ಣ ಜೊತೆ ನೀಲಾಂಬರಿ, ಬಿಂದಾಸ್, ಅರ್ಜುನ್, ಅಂಜದ ಗಂಡು, ವಜ್ರಕಾಯ, ಭರಾಟೆ ಸೇರಿದಂತೆ ಹಲವು ಕನ್ನಡದ ಸಿನಿಮಾಗಳಲ್ಲಿ ಸುಮನ್ ತಲ್ವಾರ್ ನಟಿಸಿದ್ದಾರೆ.