ಭಾರತ ಸೇನೆಯ ‘ಆಪರೇಷನ್ ಸಿಂಧೂರ’ (Operation Sindoora) ಕಾರ್ಯಾಚರಣೆಯ ಬಗ್ಗೆ ಮಲಯಾಳಂ ನಟಿ ಅಮೀನಾ (Amina Nijam) ಭಾರತದ ವಿರುದ್ಧವೇ ಮಾತನಾಡಿದ್ದಾರೆ. ನನಗೆ ನಾಚಿಕೆಯಾಗ್ತಿದೆ, ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಕೊಲ್ಲುವುದೇ ಪರಿಹಾರವಲ್ಲ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಿಂಧೂರ ಕೇವಲ ಸಂಪ್ರದಾಯವಲ್ಲ, ಅದು ಸಂಕೇತ- ಭಾರತೀಯ ಸೇನೆ ಕೊಂಡಾಡಿದ ಮೋಹನ್ ಲಾಲ್
ಹೌದು.. ದೇಶದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಕೊಲ್ಲುವುದನ್ನು ಪರಿಹಾರವಾಗಿ ಹುಡುಕಿರುವುದಕ್ಕೆ ನಾಚಿಕೆಯಾಗ್ತಿದೆ. ಆದರೆ ಇನ್ನೂ ಹಲವು ಪ್ರಶ್ನೆಗಳಿಗೆ ಉತ್ತರವೇ ಸಿಕಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಕೊಲ್ಲವುದರಿಂದ ಯುದ್ಧವು ಶಾಂತಿಯನ್ನು ತರುವುದಿಲ್ಲ. ಇದನ್ನು ನಾನು ಬೆಂಬಲಿಸುವುದಿಲ್ಲ. ಪಹಲ್ಗಾಮ್ ದಾಳಿಗೆ ಸೇಡು ತೀರಿಸಿಕೊಂಡಿದ್ದೇವೆ ಎಂದು ಯೋಚಿಸುವವ ಯೋಚನೆಯೂ ತಪ್ಪಾಗಿದೆ. ಈ ಯುದ್ಧದಿಂದ ನಷ್ಟವಾಗುತ್ತಿರೋದು ಜನರಿಗೆ ಮಾತ್ರ. ನಾನು ನನ್ ಜನರ ಒಳಿತಿಗಾಗಿ ಮಾತನಾಡುವ ಭಾರತೀಯಳು, ಅಹಂಕಾರಕ್ಕೆ ಪೆಟ್ಟು ಬಿದ್ದಾಗ ಮಾತ್ರ ಮಾತನಾಡುವವಳಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ‘ಟರ್ಬೋ’ (Turbo) ನಟಿ ಅಮೀನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?
View this post on Instagram
ಭಾರತದಲ್ಲಿದ್ದು ಭಾರತೀಯಳಾಗಿ ತನ್ನ ದೇಶದ ವಿರುದ್ಧವೇ ಮಾತನಾಡುತ್ತಿರುವ ಅಮೀನಾಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಟಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಗೃಹ ಸಚಿವ ಅಮಿತ್ ಶಾ ಅವರಿಗೆ ಅನೇಕರು ಮನವಿ ಮಾಡಿದ್ದಾರೆ.
ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ನಿನ್ನೆ ತಡರಾತ್ರಿ ಭಾರತೀಯ ವೀರ ಯೋಧರು ಉಗ್ರರ 9 ಅಡುಗುತಾಣಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.