ನಟ ಧ್ರುವ ಸರ್ಜಾ (Dhruva Sarja) ಕುಟುಂಬ ಸಮೇತರಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದಾರೆ. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:‘ಜೈ ಪಾಕಿಸ್ತಾನ’ ಎಂದ ರಾಖಿ ಸಾವಂತ್- ನಟಿಯನ್ನು ದೇಶ ಬಿಟ್ಟು ಓಡಿಸಲು ಆಗ್ರಹ
ಸಿನಿಮಾ ಕೆಲಸಗಳಿಗೆ ಬ್ರೇಕ್ ಸಿಕ್ಕ ಬೆನ್ನಲ್ಲೇ ಪತ್ನಿ ಪ್ರೇರಣಾ ಜೊತೆ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ದೇವಸ್ಥಾನ ಹಾಗೂ ಉಜಿರೆಯ ಸೂರ್ಯ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ, ಧ್ರುವ ದಂಪತಿಗೆ ದವಳದ ವತಿಯಿಂದ ಗೌರವಿಸಲಾಗಿದೆ. ಇದನ್ನೂ ಓದಿ:ನಿರ್ದೇಶಕರಿಗೆ ನಾನು ಸಂಪೂರ್ಣ ಶರಣಾಗ್ತೇನೆ – ಕೇತಿಕಾ ಶರ್ಮಾ ಹೀಗೆ ಹೇಳಿದ್ದೇಕೆ ಗೊತ್ತಾ?
ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ರಿಲೀಸ್‌ಗೆ ಧ್ರುವ ಎದುರು ನೋಡಿದ್ದಾರೆ. ಇತ್ತೀಚೆಗೆ ತೆರೆಕಂಡ ಈ ಚಿತ್ರದ ಹಾಡು ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಸಾಂಗ್ ಹಿಟ್ ಆಗಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಅನೇಕರು ನಟಿಸಿದ್ದಾರೆ.