ಚೆನ್ನೈ: ಮೈಲಾಡುತುರೈನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಡಿಎಂಕೆ ಸಂಸದ (DMK MP) ಎ ರಾಜಾ (A Raja) ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಪಕ್ಷದ ಕಾರ್ಯಕ್ರಮದಲ್ಲಿ (Public Meeting) ವೇದಿಕೆಯಲ್ಲಿ ನಿಂತು ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಗಾಳಿ ಬೀಸುತ್ತಿತ್ತು. ಈ ವೇಳೆ ಬಲವಾದ ಗಾಳಿಯಿಂದಾಗಿ ವೇದಿಕೆಯ ಬಳಿ ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಬಿದ್ದು ಡಯಾಜ್ ಮೇಲೆ ಬಿದ್ದಿದೆ. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!
VIDEO | Tamil Nadu: DMK MP A Raja (@dmk_raja) had a miraculous escape when a light stand fell due to strong winds when he was addressing a public gathering in Mayiladuthurai last evening.#TamilNaduNews
(Full video available on PTI Videos – https://t.co/n147TvrpG7) pic.twitter.com/GQmwdSdya4
— Press Trust of India (@PTI_News) May 5, 2025
ಫೋಕಸ್ ದೀಪಗಳು ಬೀಳುವುದನ್ನು ನೋಡಿದ್ದ ರಾಜಾ ಅವರು ತಮ್ಮ ಎಡಗಡೆ ಸರಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಅವರು ಭಾಷಣ ಮಾಡುತ್ತಲೇ ಇರುತ್ತಿದ್ದರೆ ಗಾಯಗೊಳ್ಳುವ ಸಾಧ್ಯತೆ ಇತ್ತು. ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಡಯಾಜ್ ಮೇಲೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ದೊಡ್ಡ ದುರಂತ ತಪ್ಪಿಸಿದ ಭಾರತೀಯ ಸೇನೆ – 5 ಜೀವಂತ ಬಾಂಬ್ ವಶಕ್ಕೆ
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜನ್ಮದಿನ ಮತ್ತು ರಾಜ್ಯಪಾಲರ ವಿಷಯದಲ್ಲಿ ಪಕ್ಷದ ಕಾನೂನು ವಿಜಯವನ್ನು ಆಚರಿಸಲು ಡಿಎಂಕೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.