– ಕಾಂಗ್ರೆಸ್ ಸರ್ಕಾರ ಇದ್ದಾಗ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಸಾಮಾನ್ಯ
– ಸಿದ್ದರಾಮಯ್ಯ 5 ವರ್ಷ ಜಾತ್ರೆ ಮಾಡ್ತಿದ್ದಾರೆ
ಹುಬ್ಬಳ್ಳಿ: ಮಹದಾಯಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ತಪ್ಪು ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಮಹದಾಯಿ ಬಗ್ಗೆ ಕಾಂಗ್ರೆಸ್‌ನವರು ಏನು ಮಾಡಿದ್ದೀರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಪ್ರಶ್ನಿಸಿದರು.
ಮಹದಾಯಿ(Mahadayi) ವಿಚಾರದಲ್ಲಿ ಕೇಂದ್ರದ ನಿರ್ಲಕ್ಷ್ಯ ಎಂಬ ಸಿಎಂ ಆರೋಪ ಕುರಿತು ಮಾತನಾಡಿದ ಅವರು, ನಮ್ಮ ಯಾವ ಪ್ರಶ್ನೆಗೂ ಸಿಎಂ ಉತ್ತರ ಕೊಡುತ್ತಿಲ್ಲ. ನಮ್ಮ ಪ್ರಶ್ನೆಗಳನ್ನು ಡೈವರ್ಟ್ ಮಾಡ್ತಿದ್ದಾರೆ. 1970ರಿಂದ ಮಹದಾಯಿ ವಿಚಾರ ವೇಗ ಪಡೆದಿದೆ. 1980ರಿಂದ 2025ರವರಗೆ ರಾಜ್ಯದಲ್ಲಿ ಅತಿ ಹೆಚ್ಚು ನಿಮ್ಮದೇ ಸರ್ಕಾರವಿತ್ತು. ಯಾಕೆ ಅವರು ಮಹದಾಯಿ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಳಿದರು. ಇದನ್ನೂ ಓದಿ: ಬಾಲಿವುಡ್‌ನ ಖ್ಯಾತ ನಿರ್ಮಾಪಕನ ಜೊತೆ ಶ್ರೀಲೀಲಾ- ಶುರುವಾಯ್ತು ಚರ್ಚೆ
ಮಹದಾಯಿಗೆ ಸಮಗ್ರ ಯೋಜನಾ ವರದಿ(ಡಿಪಿಆರ್) ಕೊಡಿಸಿದ್ದೇವೆ. ಪರಿಸರ ಅನುಮತಿ ಕೂಡಾ ಕೊಡಿಸಿದ್ದೇವೆ. ಆದರೆ ಸಮಸ್ಯೆ ಬಂದಿರೋದು ವನ್ಯಜೀವಿ ಮಂಡಳಿಯದ್ದು. ಈ ವಿಷಯ ಸುಪ್ರೀಂ ಕೋರ್ಟ್ನಲ್ಲಿದೆ. ಗೋವಾ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿದೆ. ಇಲ್ಲಿಯವರೆಗೆ ಮಹದಾಯಿ ಬಗ್ಗೆ ನೀವು ಏನು ಮಾಡಿದ್ದೀರಿ ಹೇಳಿ ಎಂದರು. ಇದನ್ನೂ ಓದಿ: ಒಳ ಮೀಸಲಾತಿಗಾಗಿ ಇಂದಿನಿಂದ ಸಮೀಕ್ಷೆ, 2 ತಿಂಗಳಲ್ಲಿ ಜಾರಿ – ಯಾವ ಹಂತದಲ್ಲಿ ಏನು?
ಕೆಪಿಎಸ್ಸಿ ಪರೀಕ್ಷೆ ಕುರಿತು ಮಾತನಾಡಿ, ಕೆಪಿಎಸ್ಸಿ ಪರೀಕ್ಷೆಯಲ್ಲಿ ಎಂಬತ್ತು ಪ್ರಶ್ನೆಗಳೇ ತಪ್ಪು ಇದ್ದವು. ನಾವು ಪ್ರಶ್ನೆ ಮಾಡಿದ್ರೆ ಅವರಿಗೆ ಮೆಣಸಿನಕಾಯಿ ಹೊಡೆದಂಗೆ ಆಗುತ್ತದೆ. ಅವರು ಬಂಡತನದ ಪರಮಾವಧಿ ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ 5 ವರ್ಷ ಜಾತ್ರೆ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ರನ್ನ ದೂರವಿಡಲು ಏನೇನೋ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಮಾರ್ಗದರ್ಶನ ನೀಡಿಲ್ಲ. ಕೇಂದ್ರ ಸರ್ಕಾರ ಪರೀಕ್ಷೆ ನಡೆಸಿದ್ರು ಅದನ್ನು ನಡೆಸೋದು ರಾಜ್ಯ ಸರ್ಕಾರ. ಈ ಬಗ್ಗೆ ದೂರು ಕೂಡಾ ದಾಖಲು ಮಾಡಲಾಗಿದೆ ಅಂತ ಹೇಳಿದ್ದಾರೆ ಎಂದರು. ಇದನ್ನೂ ಓದಿ: ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್
ಪಾಕಿಸ್ತಾನ(Pakistan) ಬಗ್ಗೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೇಂದ್ರ ತಗೆದುಕೊಳ್ಳುತ್ತದೆ. ಇದರಿಂದ ಈಗಾಗಲೇ ಪಾಕಿಸ್ತಾನ ಒದ್ದಾಡುತ್ತಿದೆ. ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಖಂಡಿತ ಆಗುತ್ತದೆ. ಕಾಲಮಿತಿ ಹಾಕಿ ಹೀಗೆ ಮಾಡಬೇಕು ಅಂತ ಹೇಳಲು ಆಗಲ್ಲ. ಪ್ರಧಾನಿ, ರಕ್ಷಣಾ ಮಂತ್ರಿಗಳು ಸ್ಪಷ್ಟ ಭರವಸೆ ನೀಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ಜಮೀರ್ ಅಹ್ಮದ್(Zameer Ahmed) ಮೊದಲು ಶಾಂತ ರೀತಿಯಿಂದ ಇದ್ರೆ ಸಾಕು. ದೇಶದಲ್ಲಿ ನಮ್ಮ ಮಿಲಿಟರಿ ಪಡೆ ಕ್ರಮ ಕೈಗೊಳ್ಳುತ್ತದೆ. ಅವರು ಶಾಂತಿ ಮತ್ತು ಸಮಾಧಾನದಿಂದ ಇದ್ದರೆ ಸಾಕು ಎಂದು ಹೇಳಿದರು. ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿ ನಾಪತ್ತೆ
ರಾಜ್ಯದಲ್ಲಿ ಕಾಂಗ್ರೆಸ್(Congress) ಸರ್ಕಾರ ಇದ್ದಾಗ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಆಗೋದು, ಕೊಲೆ ಮಾಡೋದು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರ ಕೂಡಾ ಕೊಲೆಗಡುಕರನ್ನು ರಕ್ಷಣೆ ಮಾಡುತ್ತದೆ ಎಂದು ಕಿಡಿಕಾರಿದರು.