ತಿರುವನಂತಪುರಂ: ರೇಬೀಸ್ (Rabies) ಲಸಿಕೆ ಪಡೆದರೂ ಚಿಕಿತ್ಸೆ ಪಡೆಯುತ್ತಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕೇರಳದಲ್ಲಿ (Kerala) ನಡೆದಿದೆ.
ಕೊಲ್ಲಂನ ಕುನ್ನಿಕೋಡ್‌ನ ನಿಯಾ ಫೈಸಲ್ ಮೃತ ಬಾಲಕಿ. ರೇಬೀಸ್ ಪತ್ತೆಯಾದ ಬಳಿಕ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಾವಿನೊಂದಿಗೆ ಕಳೆದ ಒಂದು ತಿಂಗಳೊಳಗೆ ಕೇರಳದಲ್ಲಿ ರೇಬೀಸ್ ಸೋಂಕಿನಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ ಮೂರಕ್ಕೆ ಏರಿದೆ.
ಏಪ್ರಿಲ್ 8 ರಂದು ಬಾಲಕಿ ಅಂಗಳದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿ ಕಚ್ಚಿತ್ತು. ಅಂಗಳದಲ್ಲಿದ್ದ ಬಾತುಕೋಳಿ ಮೇಲೆ ದಾಳಿ ಮಾಡಲು ಮುಂದಾಗಿದ್ದಾಗ ಬಾಲಕಿ ರಕ್ಷಿಸಲು ಹೋಗಿದ್ದಳು. ಈ ವೇಳೆ ನಾಯಿ ಬಾಲಕಿಯ ಮೊಣಕೈಗೆ ಕಚ್ಚಿತ್ತು. ಇದನ್ನೂ ಓದಿ: ಆರ್ಮಿಗೆ ಸೇರೋಕಾಗಿಲ್ಲ ಅಂತ 30ಕ್ಕೂ ಹೆಚ್ಚು ಶ್ವಾನಗಳನ್ನು ದೇಶ ಸೇವೆಗೆ ನೀಡಿದ ಅಧಿಕಾರಿ!
ಬಾಲಕಿಯನ್ನು ಕೂಡಲೇ ವಿಲಕ್ಕುಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ರೇಬೀಸ್ ಲಸಿಕೆಯ (Vaccine) ಮೊದಲ ಡೋಸ್ ನೀಡಲಾಯಿತು. ನಂತರ ಏ.11 ಮತ್ತು 15 ರಂದು ಕ್ರಮವಾಗಿ ಎರಡನೇ ಮತ್ತು ಮೂರನೇ ಡೋಸ್ ನೀಡಲಾಯಿತು. ಅಂತಿಮ ಡೋಸ್ ಅನ್ನು ಮೇ 6 ರಂದು ನೀಡಲು ನಿಗದಿಪಡಿಸಲಾಗಿತ್ತು. ಇದನ್ನೂ ಓದಿ: ಉಗ್ರರಿಗೆ ಆಹಾರ, ಆಶ್ರಯ ನೀಡಿದ್ದ ವ್ಯಕ್ತಿ ನದಿಗೆ ಹಾರಿ ನೀರಿನಲ್ಲಿ ಮುಳುಗಿ ಸಾವು
ಎರಡನೇ ಡೋಸ್ ಪಡೆದ ಕೆಲ ದಿನಗಳಲ್ಲಿ ಆಕೆಗೆ ಜ್ವರ ಬಂದಿದೆ. ನಾಯಿ ಕಚ್ಚಿದ ಮೊಣಕೈಯಲ್ಲಿ ನೋವು ಅನುಭವಿಸಲು ಪ್ರಾರಂಭಿಸಿದಳು. ನಂತರ ಆಕೆಯನ್ನು ಪುನಲೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ನಂತರ ವಿಶೇಷ ಆರೈಕೆಗಾಗಿ SAT ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಬಾಲಕಿಯನ್ನು ಕಚ್ಚಿದ್ದ ನಾಯಿಯನ್ನು ಸ್ಥಳೀಯ ನಿವಾಸಿಗಳು ಓಡಿಸಿದ್ದರೂ ಮರುದಿನ ಹತ್ತಿರದ ಹೊಲದಲ್ಲಿ ಅದು ಶವವಾಗಿ ಪತ್ತೆಯಾಗಿತ್ತು.