17 ಆವೃತ್ತಿ ಕಳೆದರೂ ಒಂದೇ ಒಂದು ಬಾರಿ ಕಪ್ ಗೆದ್ದಿಲ್ಲ.. ಪ್ರತೀ ಸೀಸನ್‌ನಲ್ಲೂ ಕಪ್ ಗೆಲ್ಲುವ ಲೆಕ್ಕಾಚಾರ.. ಕೊನೆಗೆ ಕಣ್ಣೀರ ವಿದಾಯ… ಆದಾಗ್ಯೂ ಆರ್‌ಸಿಬಿ ಅಭಿಮಾನಿಗಳ (RCB Fans) ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಪ್ರತಿಬಾರಿಯೂ ಹೊಸ ಉರುಪಿನೊಂದಿಗೆ ನಿರೀಕ್ಷೆಗಿಂತಲೂ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಅದೇ ರೀತಿ ನಿನ್ನೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಬೆಂಕಿ ಬಿರುಗಾಳಿಯ ಹಗ್ಗಜಗ್ಗಾಟ ಜೋರಾಗಿಯೇ ಇತ್ತು. ಪಂದ್ಯದ ಕೊನೇ ಎಸೆತದವರೆಗೂ ರೋಚಕತೆಯಿಂದ ಕೂಡಿತ್ತು. ಆದ್ರೆ ಪಂದ್ಯ ಗೆದ್ದ ಬಳಿಕ ರೊಚ್ಚಿಗೆದ್ದ ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಫ್ಯಾನ್ಸ್‌ಗಳಿಗೆ (CSK Fans) ಸಿಕ್ಕಾಪಟ್ಟೆ ಟಾಂಗ್ ಕೊಡಲು ಶುರು ಮಾಡಿದ್ದಾರೆ.
View this post on Instagram
ಕೆಲವರು ರಸ್ತೆಯಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಮೆಟ್ರೋ ಟ್ರೈನ್‌ಗಳಲ್ಲಿ (Metro Train) ಸಿಎಸ್‌ಕೆ ಫ್ಯಾನ್ಸ್‌ಗಳನ್ನ ಕೆಣಕಿದ್ದಾರೆ. ಕೆಲವರು ಹದ್ದು ಮೀರಿ ವರ್ತಿಸಿದ್ದು ಪೊಲೀಸರಿಂದ ಗೂಸಾ ಸಹ ತಿಂದಿದ್ದಾರೆ. ಈ ಕುರಿತ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಚೆನ್ನೈ ಎಡವಟ್ಟಿನಿಂದ ಆರ್‌ಸಿಬಿಗೆ ಗೆಲುವು – ಬಿಸಿ ಬಿಸಿ ಚರ್ಚೆಗೆ ಗ್ರಾಸವಾದ DRS
View this post on Instagram
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ವಿಡಿಯೋನಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಸಿನಿಮಾ ಹಾಡೊಂದಕ್ಕೆ ಹೋಲಿಕೆ ಮಾಡಿ ಸಿಎಸ್‌ಕೆ ಮತ್ತು ಅಭಿಮಾನಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ʻಮರಳಿ ಬಾರದ ಊರಿಗೆ ಸಿಎಸ್‌ಕೆ ಹೋಗಯ್ತೆ.. ಹೋಗಯ್ತೆ ತಮಿಳ್ ನಾಡಿಗೆ, ಧೋನಿ ಹಾರ್ಟು ರಿಚ್ಚು, ಸಿಎಸ್‌ಕೆ ಫ್ಯಾನ್ಸ್‌ಗೆ ಹಿಡಿತು ಹುಚ್ಚು… ಇನ್ಮೇಲೆ ವಿಸಿಲ್ ಪೋಡು ಅನ್ನಂಗಿಲ್ಲ…. ಡೋಂಟ್ವರಿ ಸಿಎಸ್‌ಕೆ ಬೇಬಿಮಾ, ಇನ್ಮೆಲ್ ವಿಸಿಲ್ ಪೋಡೊ ಅನ್ನೋದೆಲ್ಲ ಬಿಟ್ಬಿಡಮ್ಮ.. ಅಂತ ಹಾಡು ಹೇಳಿ ಕಿಚಾಯಿಸಿದ್ದಾರೆ. ಇದನ್ನೂ ಓದಿ: IPL 2025 | ಆರ್‌ಸಿಬಿಗೆ 2 ರನ್‌ಗಳ ರೋಚಕ ಜಯ – 16 ವರ್ಷಗಳ ಬಳಿಕ ಹೊಸ ಮೈಲುಗಲ್ಲು
ಮ್ಯಾಚ್ ಮಾತ್ರ ಸೂಪರ್ ಆಗಿತ್ತು. ಯಶ್ ದಯಾಳ್ ಕೊನೇ ಓವರ್‌ನಲ್ಲಿ ನೋಬಾಲ್ ಹಾಕಿದಾಗ ನನಗೆ ಹೆವಿ ಟೆನ್ಶನ್ ಆಗಿತ್ತು, ಅಲ್ಲೊಬ್ಬ ತಲಾ ತಲಾ ಪುಡಿ ಪುಡಿ ಅಂತ ಕೂಗ್ತಾ ಇದ್ದ.. ಅವೆಲ್ಲ ಮಸ್ತ್ ಆಗಿತ್ತು. ಏನೇ ಆಗಲಿ ನಮಗೆ ನಂ.7 ಗಿಂತ ನಂ.18 ಮುಖ್ಯ. ಬೆಂಗಳೂರಿನ ಭಗವಂತ ಕಿಂಗ್ ಕೊಹ್ಲಿ ಅಂತ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಸ್ಫೋಟಕ ಫಿಫ್ಟಿ – ಕನ್ನಡಿಗ ಕೆ.ಎಲ್ ರಾಹುಲ್ ದಾಖಲೆ ಸರಿಗಟ್ಟಿದ ರೊಮಾರಿಯೊ ಶೆಫರ್ಡ್
ಮಧ್ಯರಾತ್ರಿಯಲ್ಲೂ ಕುಗ್ಗದ ಅಭಿಮಾನಿಗಳ ಉತ್ಸಾಹ
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ಬಾರಿ ಬಗ್ಗು ಬಡಿದ ರಾಯಲ್ ಪಡೆಗೆ ಅಭಿಮಾನಿಗಳು ಮಧ್ಯರಾತ್ರಿ ನೀಡಿದ ಸ್ವಾಗತ ನೋಡಿ ಖುದ್ದು ಆರ್‌ಸಿಬಿ ಆಟಗಾರರೇ ರೋಮಾಂಚನಗೊಂಡಿದ್ದರು. ರಸ್ತೆಯುದ್ದಕ್ಕೂ ಕಾದು ನಿಂತಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಮಧ್ಯರಾತ್ರಿಯವರೆಗೆ ಕಾದು ನಿಂತು ತೋರಿದ ಈ ಅಭಿಮಾನಕ್ಕೆ ಆರ್‌ಸಿಬಿ ಆಟಗಾರರು ಪುಳಕಿತರಾಗಿದ್ದಾರೆ. ಅಷ್ಟೇ ಅಲ್ಲದೇ ಈ ಕ್ರೇಝ್ ನೋಡಿ ರೋಮಾಂಚನಗೊಂಡ ಕೃನಾಲ್ ಪಾಂಡ್ಯ, ಈ ಸಲ ಇವರಿಗಾಗಿ ನಾವು ಕಪ್ ಗೆಲ್ಲಲೇಬೇಕು ಎಂದು ಶಪಥ ಮಾಡಿದ್ದಾರೆ. ಇದೀಗ ಆರ್‌ಸಿಬಿ ಅಭಿಮಾನಿಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಆರ್‌ಸಿಬಿಗೆ ಮುಂದಿನ ಎದುರಾಳಿಗಳು ಯಾರು?
ಲೀಗ್ ಹಂತದಲ್ಲಿ ಆರ್‌ಸಿಬಿ ತಂಡಕ್ಕೆ ಉಳಿದಿರುವುದು ಕೇವಲ 3 ಮ್ಯಾಚ್ಗಳು ಮಾತ್ರ. ಈ ಪಂದ್ಯಗಳಲ್ಲಿ ಆರ್‌ಸಿಬಿ ಲಕ್ನೋ ಸೂಪರ್ ಜೈಂಟ್ಸ್ (ಮೇ 9), ಸನ್ರೈಸರ್ಸ್ ಹೈದರಾಬಾದ್ (ಮೇ 13) ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (ಮೇ 17) ತಂಡಗಳನ್ನು ಎದುರಿಸಲಿದೆ. ಆದ್ರೆ ಈಗಾಗಲೇ ಬಹುತೇಕ ಪ್ಲೇ ಆಫ್ ಹಾದಿಯನ್ನು ಖಚಿತಪಡಿಸಿಕೊಂಡಿರುವ ಆರ್‌ಸಿಬಿ ಇನ್ನೊಂದು ಪಂದ್ಯ ಗೆದ್ದರೆ ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಡಲಿದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಅಬ್ಬರದ ಆಟ – ಆರ್‌ಸಿಬಿ ಪರ ಸಿಕ್ಸರ್‌ನಿಂದಲೇ ದಾಖಲೆ ಬರೆದ ಕಿಂಗ್ ಕೊಹ್ಲಿ