ನವದೆಹಲಿ: ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿಂದು ಬೆಳಗ್ಗೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ (Missile Attack) ನಡೆಸಿದ ಪರಿಣಾಮ ಏರ್ ಇಂಡಿಯಾ (Air India) ಸಂಸ್ಥೆಯು ಮುಂದಿನ 2 ದಿನಗಳ ಕಾಲ ಇಸ್ರೇಲ್ (Israel) ರಾಜಧಾನಿ ಟೆಲ್ ಅವಿವ್‌ಗೆ (Tel Aviv) ವಿಮಾನಯಾನವನ್ನ ಸ್ಥಗಿತಗೊಳಿಸಿದೆ.
ಕ್ಷಿಪಣಿ ದಾಳಿಯ ಕುರಿತು ಲಭ್ಯವಾಗುತ್ತಿದ್ದಂತೆ ದೆಹಲಿಯಿಂದ ಟೆಲ್ ಅವಿವ್‌ಗೆ ಹೋಗುತ್ತಿದ್ದ ವಿಮಾನವನ್ನು ಅಬುಧಾಬಿಗೆ ತಿರುಗಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿವೆ. ಇಸ್ರೇಲ್‌ಗೆ ಟಿಕೆಟ್ ಹೊಂದಿರುವವರಿಗೆ ವಿನಾಯಿತಿ ಅಥವಾ ವಿಮಾನಯಾನದ ಮರು ವೇಳಾಪಟ್ಟಿಯನ್ನು ನೀಡಲಾಗುವುದು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ
ಏರ್ ಇಂಡಿಯಾದಲ್ಲಿ, ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.