ಕಲಬುರಗಿ: ರಾಜ್ಯದಲ್ಲೀಗ ಮತ್ತೆ ನೀಟ್ ಪರೀಕ್ಷೆಯಲ್ಲಿ ಅಧಿಕಾರಿಗಳು ವಿದ್ಯಾರ್ಥಿ ಧರಿಸಿದ್ದ ಜನಿವಾರ ತೆಗೆಸಿರುವ ಘಟನೆ ಕಲಬುರಗಿಯ (Kalaburagi) ಖಾಸಗಿ ಶಾಲೆಯಲ್ಲಿ ನಡೆದಿದೆ.
ಇಂದು ರಾಜ್ಯದಾದ್ಯಂತ ನೀಟ್ ಪರೀಕ್ಷೆ (NEET Exam) ನಡೆದಿದ್ದು, ಶ್ರೀಪಾದ್ ಪಾಟೀಲ್ ನೀಟ್ ಪರೀಕ್ಷೆಗೆ ಹಾಜರಾಗಿದ್ದ. ಶ್ರೀಪಾದ್ ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಅಧಿಕಾರಿಗಳು ಜನಿವಾರ ತೆಗೆದು ಬರುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ನನಗೆ ನ್ಯಾಯ ಬೇಕು – ಪಾಕ್ ಯುವತಿಯನ್ನು ಮದುವೆಯಾಗಿ ವಜಾಗೊಂಡಿದ್ದ ಯೋಧನಿಂದ ಮೋದಿಗೆ ಮನವಿ
ಈ ವೇಳೆ ಶ್ರೀಪಾದ್ ಅಧಿಕಾರಿಗಳ ಸೂಚನೆಯಂತೆ ಜನಿವಾರ ತೆಗೆದು ಪರೀಕ್ಷೆಗೆ ಹಾಜರಾಗಿದ್ದಾನೆ. ಈ ಘಟನೆಯನ್ನು ಖಂಡಿಸಿ ಪರೀಕ್ಷಾ ಕೇಂದ್ರದ ಮುಂದೆ ಬ್ರಾಹ್ಮಣ ಸಮಾಜದವರು (Brahmin Community) ಪ್ರತಿಭಟನೆ ನಡೆಸಿದ್ದಾರೆ. ಇನ್ನೇನು ಕೆಲವೇ ನಿಮಿಷದಲ್ಲಿ ನೀಟ್ ಪರೀಕ್ಷೆ ಮುಗಿಯುತ್ತದೆ. ಹೀಗಾಗಿ ಜನಿವಾರ ತೆಗೆಸಿದ ಅಧಿಕಾರಿಯನ್ನ ನಮ್ಮ ವಶಕ್ಕೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡ್ರ ಮಗನೇ ಅಲ್ಲ: ಹೆಚ್.ಡಿ ರೇವಣ್ಣ
ಪರೀಕ್ಷಾ ಕೇಂದ್ರದ ಎದುರು ಟೈರ್ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ಹಾಕಿದ್ದು, ಪ್ರತಿಭಟನೆ ಎಬಿವಿಪಿ ಕಾರ್ಯಕರ್ತರು ಸಾಥ್ ನೀಡಿದರು. ಇದನ್ನೂ ಓದಿ: ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಒಂದು ವಿಶೇಷಪಡೆ ಅಗತ್ಯ: ಸಿಎಂ
ಕಳೆದ ಏಪ್ರಿಲ್ ಸಿಇಟಿ ಪರೀಕ್ಷೆಯಲ್ಲೂ ಇಂತಹದೊಂದು ಪ್ರಕರಣ ನಡೆದಿದ್ದು, ಇದು ರಾಜ್ಯದಾದ್ಯಂತ ಬ್ರಾಹ್ಮಣ ಸಮಾಜದ ಆಕ್ರೋಶಕ್ಕೆ ಕಾರಣವಾಗಿತ್ತು.