‘ಬೇಬಿ ಜಾನ್’ ಸಿನಿಮಾ (Baby John) ಬಳಿಕ ವರುಣ್ ಧವನ್ ‘ಹೇ ಜವಾನಿ ತೋ ಇಶ್ಕ್ ಹೋನಾ ಹೇ’ ಚಿತ್ರದ ಶೂಟಿಂಗ್ ಬ್ಯುಸಿಯಾಗಿದ್ದಾರೆ. ಇದೀಗ ವರುಣ್ ನಟನೆಯ ಹೊಸ ಚಿತ್ರಕ್ಕೆ ‘ಕೆಜಿಎಫ್’ (KGF) ನಟಿ ಮೌನಿ ರಾಯ್ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ‘ಹಿಟ್ಲರ್ ಕಲ್ಯಾಣ’ ಖ್ಯಾತಿಯ ಶೌರ್ಯ ಶಶಾಂಕ್
ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ನಟಿಸೋ ಮೌನಿ ರಾಯ್ (Mouni Roy) ಇದೀಗ ವರುಣ್ ಧವನ್ ಜೊತೆ ಸಿನಿಮಾ ಮಾಡ್ತಿದ್ದಾರೆ. ‘ಹೇ ಜವಾನಿ ತೋ ಇಶ್ಕ್ ಹೋನಾ ಹೇ’ ಚಿತ್ರದಲ್ಲಿ ಮೌನಿ ಕೂಡ ಪವರ್‌ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ.
View this post on Instagram
ಇದೀಗ ಚಿತ್ರದ ಸೆಟ್‌ನಲ್ಲಿ ನಟ ವರುಣ್ ಮತ್ತು ಮೃಣಾಲ್ ಠಾಕೂರ್ (Mrunal Thakur) ಜೊತೆ ಪಾಲ್ಗೊಂಡಿರುವ ವಿಡಿಯೋವನ್ನು ಮೌನಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ತಿಳಿದುಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ:17 ವರ್ಷದ ಬಳಿಕ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್
ಈ ಚಿತ್ರದಲ್ಲಿ ವರುಣ್ ಜೊತೆ ಪೂಜಾ ಹೆಗ್ಡೆ(Pooja Hegde), ಮೃಣಾಲ್ ಠಾಕೂರ್, ಚಂಕಿ ಪಾಂಡೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ವರುಣ್ ತಂದೆ ಡೇವಿಡ್ ಧವನ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.