ಇಸ್ಲಾಮಾಬಾದ್: ಒಂದು ವೇಳೆ ಭಾರತ- ಪಾಕಿಸ್ತಾನದ (India-Pakistan) ಮಧ್ಯೆ ಯುದ್ಧ ಸಂಭವಿಸಿದರೆ ನಾನು ಇಂಗ್ಲೆಂಡಿಗೆ (England) ಪಲಾಯನ ಮಾಡುತ್ತೇನೆ ಎಂದು ಪಾಕ್ ಸಂಸದ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.
ಒಂದು ವೇಳೆ ಯುದ್ಧ ನಡೆದರೆ ಗನ್ ಹೊತ್ತುಕೊಂಡು ಗಡಿಗೆ ಹೋಗುತ್ತೀರಾ ಎಂದು ಸಂಸದ ಶೇರ್ ಅಫ್ಜಲ್ ಖಾನ್ ಮಾರ್ವತ್ (Sher Afzal Khan Marwat) ಅವರಿಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ.
ಈ ಪ್ರಶ್ನೆಗೆ, ಒಂದು ವೇಳೆ ಯುದ್ಧ ನಡೆದರೆ ನಾನು ಇಂಗ್ಲೆಂಡ್‌ಗೆ (England) ಪಲಾಯನ ಮಾಡುತ್ತೇನೆ ಎಂದು ಉತ್ತರಿಸಿದರು. ಇದನ್ನೂ ಓದಿ: ಪಾಕ್‌ಗೆ ಸೇನಾ ಮಾಹಿತಿ ರವಾನೆ – ಇಬ್ಬರು ಅರೆಸ್ಟ್
“The stance of Khyber Pakhtunkhwa political leader Sher Afzal Marwat regarding the Pakistan-India war.” pic.twitter.com/MIer9a9Rzi
— نقطةNUQTA (@NUQTA31) April 30, 2025
ಎರಡು ದೇಶಗಳ ಮಧ್ಯೆ ಇರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ನರೇಂದ್ರ ಮೋದಿ (Narendra Modi) ಹಿಂದೆ ಸರಿಯಬೇಕು ಎಂದು ಭಾವಿಸುತ್ತೀರಾ ಎಂದು ಕೇಳಿದ್ದಕ್ಕೆ, ನಾನು ಹೇಳಿದ್ದಕ್ಕೆ ಅವರು ಹಿಂದೆ ಸರಿಯಲು ಮೋದಿ ನನ್ನ ಚಿಕ್ಕಮ್ಮನ ಮಗನೇ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮೊದಲೇ ಉಗ್ರರ ದಾಳಿ ಬಗ್ಗೆ ಎಚ್ಚರಿಸಿದ್ದ ಗುಪ್ತಚರ ಇಲಾಖೆ
ಅಫ್ಜಲ್ ಖಾನ್ ಮಾರ್ವತ್ ಉತ್ತರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನಿ ರಾಜಕಾರಣಿಗಳು ಸಹ ತಮ್ಮ ಸೈನ್ಯವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಮಾರ್ವತ್ ಈ ಹಿಂದೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸದಸ್ಯರಾಗಿದ್ದರು. ಪಕ್ಷ ಮತ್ತು ನಾಯಕತ್ವದ ಬಗ್ಗೆ ಪದೇ ಪದೇ ಟೀಕೆ ಮಾಡುತ್ತಿದ್ದ ಕಾರಣ ಇಮ್ರಾನ್ ಖಾನ್ ಮಾರ್ವತ್ ಅವರನ್ನು ಪ್ರಮುಖ ಹುದ್ದೆಗಳಿಂದ ತೆಗೆದು ಹಾಕಿದ್ದರು.