ಬೆಂಗಳೂರು: ಶಿವಾನಂದ್ ಪಾಟೀಲ್ (Shivanand Patil) ವಿಚಾರ ಹೈ ಕಮಾಂಡ್ ಗಮನಕ್ಕೆ ತರುತ್ತೇನೆ ಎಂದು ಸಚಿವ ಎಂ.ಬಿ ಪಾಟೀಲ್ (M.B Patil) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಶಿವಾನಂದ್ ಪಾಟೀಲ್ ಅವರು ರಾಜೀನಾಮೆ ಕೊಟ್ಟ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಈ ವೇಳೆ, ಅಶ್ಲೀಲ ಪದದಲ್ಲಿ ಮಾತಾಡೋದು ತಪ್ಪು ಅಂತ ಹೇಳಿದ್ದೇನೆ. ಮೊನ್ನೆ ಕೂಡ ಮೊಹಮ್ಮದ್ ಪೈಗಂಬರ್ ಬಗ್ಗೆ ಹೇಳಿಕೆ ಕೊಟ್ಟಿದ್ದು ತಪ್ಪು. ಮುಸಲ್ಮಾನರು ಸಭೆ ಮಾಡಿದ್ರೂ, ಅಲ್ಲಿ ಕೂಡ ಅಶ್ಲೀಲ ಪದ ಬಳಿಸಿದ್ದರು. ಇದಕ್ಕೆ ಮೂಲ ಕಾರಣ ಯತ್ನಾಳ್, ನೀವು ಅಭಿವೃದ್ಧಿ ಬಗ್ಗೆ ಸವಾಲು ಹಾಕಿ, ಈ ರೀತಿ ತಂದೆ ತಾಯಿ ಅಂತ ಮಾತಾಡೋದು ತಪ್ಪು ಎಂದಿದ್ದಾರೆ.
ಸುರ್ಜೇವಾಲ ಅವರು ಇಲ್ಲಿಗೆ ಬಂದಿದ್ದರು ಅವರ ಜೊತೆ ಇದ್ದೆ ಎಂದು ತಿಳಿದುಕೊಂಡು ಈ ರೀತಿ ಮಾಡಿದರು. ತಪ್ಪು ಸಂದೇಶ ಮುಸ್ಲಿಂ ಸಮುದಾಯಕ್ಕೆ ಕೊಡೋಕೆ ಹೊರಟಿದ್ದಾರೆ. ನಾನು ಈ ವಿಚಾರ ಹೈಕಮಾಂಡ್‌ಗೂ ಹೇಳ್ತೀನಿ. ಮೊದಲು ಅಲ್ಲಿ ನಮ್ಮ ತಂದೆ ಶಾಸಕರಾಗಿದ್ದರು. ಈಗ ನಾನು ಶಾಸಕ ಆಗಿದ್ದೇನೆ. ಈ ಹಿಂದೆ ಯತ್ನಾಳ್‌ಗೆ (Basangouda Patil Yatnal) ಮಾತಾಡೋಕೆ ಕಲ್ಸಿದ್ದೆ ಇವರು. ಅವ್ರು ನನ್ನ ಹೆಸರು ಪ್ರಸ್ತಾಪ ಮಾಡಿದರು. ಸೋತ ವ್ಯಕ್ತಿ ಅಂತ ಹೇಳಿಕೆ ಕೊಟ್ಟಿದ್ದಕ್ಕೆ ನಾನು ಮಾತಾಡ್ತಿದೀನಿ. ಹೈ ಕಮಾಂಡ್, ಅಧ್ಯಕ್ಷರು, ಸಿಎಂ ಎಲ್ಲರ ಗಮನಕ್ಕೆ ತರ್ತಿನಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇವರಿಗೆ ಮುಂದಿನ ದಿನದಲ್ಲಿ ವಿಜಯಪುರದಲ್ಲಿ ಸ್ಪರ್ಧೆ ಮಾಡಬೇಕು ಅಂತ ಈ ರೀತಿ ತಪ್ಪು ಸಂದೇಶ ರವಾನೆ ಮಾಡ್ತಿದ್ದಾರೆ. ಮುಸಲ್ಮಾನರ ಪ್ರತಿಭಟನೆಗೆ ನಾನು ಹೋಗಿಲ್ಲ. ಅವರಿಗೆ ಹಿಂದಿನ ದಿನ ಭೇಟಿ ಮಾಡಿ ಮಾತನಾಡಿದ್ದೆ. ಬರೋಕೆ ಆಗಲ್ಲ ಅಂತ ಹೇಳಿದ್ದೆ. ನನ್ನ ಸಹೋದರನನ್ನ ಅಲ್ಲಿಗೆ ಕಳ್ಸಿದ್ದೆ. ಬೇರೆಯವರ ತರ ನನ್ನ ಸಹೋದರ ಬೇರೆ ಪಕ್ಷದಲ್ಲಿ ಇಲ್ಲ. ಒಂದೇ ಪಕ್ಷದಲ್ಲಿ ಇದ್ದೇವೆ. ಶಿವಾನಂದ ಪಾಟೀಲ್ ಅವರೇ ಈ ರೀತಿ ಮಾಡಬೇಡಿ ಎಲ್ಲರೂ ಒಂದೇ ಪಕ್ಷದಲ್ಲಿ ಇದ್ದೀವಿ. ಒಟ್ಟಿಗೆ ಯತ್ನಾಳ್ ವಿರುದ್ಧ ಹೋರಾಟ ಮಾಡೋಣ. 15 ದಿನ ಆಗಿದೆ ಮಹಮ್ಮದ್ ಪೈಗಂಬರ್‌ಗೆ ಬೈದು ಇವಾಗ ಹೇಳ್ತಿದ್ದಾರೆ. ನೀವು ಅವಾಗ ಯಾಕೆ ಮಾತಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.