ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ (Australia) ನಡೆದ ಚುನಾವಣೆಯಲ್ಲಿ ಆಂಥೋನಿ ಆಲ್ಬನೀಸ್ (Anthony Albanese) ಅವರ ನೇತೃತ್ವದ ಲೇಬರ್ ಪಕ್ಷವು ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ.
Congratulations @AlboMP on your resounding victory and re-election as Prime Minister of Australia! This emphatic mandate indicates the enduring faith of the Australian people in your leadership. I look forward to working together to further deepen the India-Australia…
— Narendra Modi (@narendramodi) May 3, 2025
ಈ ಮೂಲಕ ಅಲ್ಬನೀಸ್ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಯ್ಕೆಯಾಗಿದ್ದಾರೆ. ಕಳೆದ 21 ವರ್ಷಗಳಲ್ಲಿ 2ನೇ ಅವಧಿಗೆ ಆಯ್ಕೆಯಾದ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಯುವತಿಯನ್ನು ಮದ್ವೆಯಾಗಿ ಕೆಲಸ ಕಳೆದುಕೊಂಡ ಸಿಆರ್‌ಪಿಎಫ್ ಯೋಧ!
2ನೇ ಬಾರಿಗೆ ಆಯ್ಕೆಯಾದ ಅಲ್ಬನೀಸ್ ಅವರಿಗೆ ಪ್ರಧಾನಿ ಮೋದಿ (Narendra Modi) ಸಹ ಶುಭಾಶಯ ಕೋರಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿಯಾಗಿ ಪುನರ್ ಆಯ್ಕೆಯಾದ ಅಲ್ಬನೀಸ್ ಅವರಿಗೆ ಅಭಿನಂದನೆಗಳು. ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 2019ರ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರೂಫ್ ಸಿಕ್ಕಿಲ್ಲ – ʻಕೈʼ ಸಂಸದನ ಹೇಳಿಕೆಗೆ ಬಿಜೆಪಿ ತಿರುಗೇಟು
ಇನ್ನೂ ವಿಜಯೋತ್ಸವದ ಬೆನ್ನಲ್ಲೇ ಮಾತನಾಡಿರುವ ಅಲ್ಬನೀಸ್, ಇಂದು ಆಸ್ಟ್ರೇಲಿಯಾದ ಜನರು ದೇಶದ ಮೌಲ್ಯಗಳಿಗೆ ಮತ ನೀಡಿದ್ದಾರೆ. ಜಾಗತೀಕ ಅನಿಶ್ಚಿತತೆಯ ಸಂದರ್ಭದಲ್ಲಿ ಆಶಾವಾದ ಮತ್ತು ದೃಢ ನಿಶ್ಚಯವನ್ನು ಜನ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಬಳಿಕ ಫಸ್ಟ್ ಟೈಂ ಮೋದಿ ಭೇಟಿಯಾದ ಜಮ್ಮು-ಕಾಶ್ಮೀರ ಸಿಎಂ