ಹಾಸನ: ಸೆರೆ ಹಿಡಿದಿದ್ದ ಕಾಡಾನೆಯ (Elephant) ಸ್ಥಳಾಂತರಿಸುವ ವೇಳೆ ಲಾರಿ ಚಾಲಕನ ಮೇಲೆ ದಾಳಿಗೆ ಯತ್ನಿಸಿದ ಘಟನೆ ಆಲೂರು ತಾಲೂಕಿನ, ಹಳ್ಳಿಯೂರು ಗ್ರಾಮದಲ್ಲಿ ನಡೆದಿದೆ.
ಆನೆಯನ್ನು ಸೆರೆಹಿಡಿದು ಕ್ರೈನ್ ಮೂಲಕ ಲಾರಿಯ ಮೇಲೆ ಏರಿಸಲಾಗುತ್ತಿತ್ತು. ಈ ವೇಳೆ ಬೆಲ್ಟ್ ನೀಡಲು ಹೋಗುತ್ತಿದ್ದ ಲಾರಿ ಚಾಲಕ ರೆಹಮತ್ ಮೇಲೆ ಕಾಡಾನೆ ದಾಳಿಗೆ ಯತ್ನಿಸಿದೆ. ಸೊಂಡಲಿನಿಂದ ಲಾರಿ ಚಾಲಕನನ್ನು ಆನೆ ನೂಕಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇದನ್ನೂ ಓದಿ: ಸಿಟ್ಟಿಗೆದ್ದು ಅಟ್ಟಾಡಿಸಿದ ಕಾಡಾನೆ – ಓಡಿ ಓಡಿ ಪಾರಾದ ಇಟಿಎಫ್ ಸಿಬ್ಬಂದಿ!
ಹಳ್ಳಿಯೂರು ಗ್ರಾಮದ ಪಾರ್ವತಮ್ಮನ ಬೆಟ್ಟದ ಬಳಿ ಅಡಕ-ಬಡಕ ಹೆಸರಿನ ಪುಂಡಾನೆ ಇರುವುದನ್ನು ಇಟಿಎಫ್ ಸಿಬ್ಬಂದಿ ಪತ್ತೆ ಹಚ್ಚಿದ್ದರು. ಬಳಿಕ ವೈದ್ಯರು ಕಾಡಾನೆಗೆ ಅರವಳಿಕೆ ನೀಡಿದ್ದರು. ಸ್ವಲ್ಪ ದೂರ ಓಡಿ ಪ್ರಜ್ಞೆ ತಪ್ಪಿ ಬಿದ್ದ ಆನೆಯನ್ನು, ನೀರು ಹಾಕಿ ಆರೈಕೆ ಮಾಡಿ, ಕಾಲಿಗೆ ಹಗ್ಗಕಟ್ಟಿ ಕರೆತರಲಾಯಿತು.
ಕಾಡಾನೆಯನ್ನು ಕರೆತರುವಾಗ ಸಾಕಾನೆಗಳ ಬಳಿ ಪುಂಡಾಟ ಮೆರೆದಿದೆ. ಆದರೂ ಇಟಿಎಫ್ ಸಿಬ್ಬಂದಿ ಯಶಸ್ವಿಯಾಗಿ ಕಾಡಾನೆಯನ್ನು ಕರೆ ತಂದಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಕಾನೆಗಳಾದ ಕಂಜನ್, ಕರ್ನಾಟಕ ಭೀಮ, ಮಹೇಂದ್ರ, ಧನಂಜಯ, ಏಕಲವ್ಯ, ಸುಗ್ರೀವ ಭಾಗಿಯಾಗಿದ್ದವು. ಡಿಎಫ್‍ಓ ಸೌರಭ್‍ಕುಮಾರ್, ಆರ್‍ಎಫ್‍ಓ ಹೇಮಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಇದನ್ನೂ ಓದಿ: ಜೀಪ್ ರೇಸ್‍ಗೆ ಬಂದಿದ್ದ ಕೇರಳದ ವ್ಯಕ್ತಿಯನ್ನು ಅಟ್ಟಾಡಿಸಿದ ದೈತ್ಯ ಸಲಗ – ಎದೆ ಝಲ್ ಎಸಿಸುವ ದೃಶ್ಯ!