-ಈ ಪ್ರಕರಣವನ್ನು ಧರ್ಮ ಎತ್ತಿ ಯಾಕೆ ನೋಡಬೇಕು; ಬಿಜೆಪಿ ಶಾಸಕ ಪ್ರಶ್ನೆ
ಮಂಗಳೂರು: ಕುಡುಪು (Kudupu) ಗುಂಪು ಹತ್ಯೆ ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ ಎಂದು ಮಂಗಳೂರು ಉತ್ತರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ (Dr.Y Bharath Shetty) ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ (Mangaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡುಪಿನಲ್ಲಿ ದುರಾದೃಷ್ಟಕರ ಘಟನೆ ನಡೆದಿದೆ. ಆದರೆ ಅಲ್ಲಿ ನಡೆದ ಕ್ರೈಂನ್ನು ಕ್ರೈಂ ದೃಷ್ಟಿಕೋನದಲ್ಲೇ ನೋಡಬೇಕು. ಕೆಲವರು ಮೃತಪಟ್ಟ ವ್ಯಕ್ತಿಯ ಜಾತಿ, ಧರ್ಮ ನೋಡುತ್ತಿದ್ದಾರೆ. ಅಲ್ಲದೇ ಘಟನೆಗೆ ರಾಜಕೀಯ ಬಣ್ಣ ನೀಡಲಾಗುತ್ತಿದ್ದು, ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು. ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ
ದೇಶದಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಪ್ರತೀಕಾರದ ಭಾವನೆ ಎದ್ದಿದೆ. ಇಂತಹ ಸಂದರ್ಭ ಪಾಕಿಸ್ತಾನ ಪರ ಘೋಷಣೆ ಹಾಕಿದರೆ ಯಾರೂ ಬಿಡಲ್ಲ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ಆದರೆ ಇದರಲ್ಲಿ ಘಟನೆಯನ್ನು ಜಾತಿ ಎತ್ತಿ ಯಾಕೆ ನೋಡಬೇಕು. ಇಸ್ರೇಲ್ ಯುದ್ಧ ವೇಳೆ ಎಷ್ಟು ಜನ ಕಾಂಗ್ರೆಸಿಗರು ಇಸ್ರೇಲ್ ಬಾವುಟ ಸುಡುವ ಕೆಲಸ ಮಾಡಿದ್ದಾರೆ. ಈಗ ಯಾಕೆ ಪಾಕಿಸ್ತಾನ ಧ್ವಜ ಸುಟ್ಟಿಲ್ಲ. ಯಾರೋ ಸುಟ್ಟಾಗ ಇವರಿಗೇಕೆ ಸಿಟ್ಟು. ವೈದ್ಯೆಯೊಬ್ಬಳು ಪಾಕ್ ಪರ ಕಮೆಂಟ್ ಹಾಕಿದಾಗ ಯಾಕೆ ಇವರು ಪ್ರತಿಕ್ರಿಯೆ ಕೊಟ್ಟಿಲ್ಲ. ಯುದ್ಧ ಸನ್ನಿವೇಶ ಎದುರಾಗಿರುವ ಹೊತ್ತಲ್ಲಿ ಕಾಂಗ್ರೆಸಿಗರು ಒಗ್ಗಟ್ಟು ಮುರಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಪಣ – ಸೈಲೆಂಟ್ ಪ್ಲ್ಯಾನಿಂಗ್, ಮೋದಿ ನಿಗೂಢ ನಡೆ
ಬೆಂಗಳೂರಿನಲ್ಲಿ (Bengaluru) ಗೋವಿನ ಕೆಚ್ಚಲು ಕೊಯ್ದವನೂ ಅರೆಸ್ಟ್ ಆದಾಗ ಮಾನಸಿಕ ಅಸ್ವಸ್ಥ ಎಂದಾಗಿತ್ತು. ಈಗ ಪಾಕ್ ಪರ ಘೋಷಣೆ ಕೂಗಿದ್ದಾನೆ ಎಂದಾಗ ಮಾನಸಿಕ ಅಸ್ವಸ್ಥನಾಗಿದ್ದಾನೆ. ಪಾಕ್ ಪರ ಮನಸ್ಥಿತಿ ಇದ್ದವರು, ಅಂಥ ಘೋಷಣೆ ಹಾಕೋರೆಲ್ಲ ಮಾನಸಿಕ ಅಸ್ವಸ್ಥರೇ ಆಗಿದ್ದಾರೆ. ದೇಶದಲ್ಲಿ ಇಂತಹ ಮಾನಸಿಕ ಅಸ್ವಸ್ಥರ ಗುಂಪು ಹೆಚ್ಚಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ ಕೂಗಿದ್ದವನ ಹತ್ಯೆ ಕೇಸ್ – ಮೂವರು ಪೊಲೀಸರು ಸಸ್ಪೆಂಡ್
ಈ ಪ್ರಕರಣದಲ್ಲಿ ಪೊಲೀಸರು (Police) ಕೆಲವು ಅಮಾಯಕರನ್ನು ಫಿಕ್ಸ್ ಮಾಡಲು ಹೊರಟಿದ್ದಾರೆ. ಯಾರನ್ನೋ ಫಿಕ್ಸ್ ಮಾಡಲು ಹೋದರೆ ನಾವು ಸುಮ್ಮನಿರಲು ಆಗುವುದಿಲ್ಲ. ಪೊಲೀಸರ ಮೇಲೆ ರಾಜಕೀಯ ಒತ್ತಡ ಹಾಕಿ ಕೆಲವರನ್ನು ಬಂಧಿಸಲಾಗುತ್ತಿದೆ. ಈ ಘಟನೆಯಲ್ಲಿ ಪೊಲೀಸರ ಮೇಲೆ ಒತ್ತಡ ಹಾಕದೇ ಕೆಲಸ ಮಾಡಲು ಬಿಡಿ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ, ಅವರ ಕೆಲಸ ಮಾಡಲಿ. ಮೃತಪಟ್ಟ ವ್ಯಕ್ತಿ ಮುಸ್ಲಿಂ ಎಂಬುದು 2 ದಿನಗಳ ನಂತರವೇ ಗೊತ್ತಾಗಿದ್ದು, ಮುಸ್ಲಿಂ ಅಂತಾ ಕೊಂದರು ಎನ್ನುವುದು ವೈಷಮ್ಯ ಬಿತ್ತುವ ಕೆಲಸ ಎಂದರು