ನವದೆಹಲಿ: ನಮ್ಮ ಹೋರಾಟ ಮುಗಿಯುವುದಿಲ್ಲ, ಒಬ್ಬ ಭಯೋತ್ಪಾದಕನನ್ನೂ ಬಿಡುವುದಿಲ್ಲ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಗುಡುಗಿದ್ದಾರೆ.
ಪಹಲ್ಗಾಮ್ ದಾಳಿಯ (Pahalgam Terror Attack) ನಂತರ ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಮಾತನಾಡಿ ಉಗ್ರರನ್ನು ಸಂಹಾರ ಮಾಡುತ್ತೇವೆ ಎಂದು ತಿಳಿಸಿದರು.
ಯಾರಾದರೂ ಹೇಡಿತನದ ದಾಳಿ ಮಾಡಿ ಅದು ತಮಗೆ ಸಿಕ್ಕಿದ ದೊಡ್ಡ ಗೆಲುವು ಎಂದು ಭಾವಿಸಿದರೆ ಒಂದು ವಿಷಯವನ್ನು ಅರ್ಥಮಾಡಿಕೊಳ್ಳಿ. ಕೇಂದ್ರದಲ್ಲಿ ಇರುವುದು ನರೇಂದ್ರ ಮೋದಿ ಸರ್ಕಾರ. ಯಾರನ್ನೂ ಬಿಡುವುದಿಲ್ಲ. ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ ಮತ್ತು ಆ ಸಂಕಲ್ಪ ಈಡೇರುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸ್ತೀರಾ? – ಪಹಲ್ಗಾಮ್ ಅರ್ಜಿದಾರರ ವಿರುದ್ಧ ಸುಪ್ರೀಂ ಕೆಂಡಾಮಂಡಲ
#PahalgamTerroristAttack | Delhi: Union Home Minister Amit Shah says, “Har vyakti ko chun chun ke jawab bhi milega, jawab bhi diya jayega…”
“This is the Narendra Modi government; no one will be spared. It is our resolve to uproot terrorism from every inch of this country and… pic.twitter.com/TPVZPJCcDK
— ANI (@ANI) May 1, 2025
ಭಯೋತ್ಪಾದನೆಯನ್ನು ಹರಡುವ ಎಲ್ಲರಿಗೂ ಇದು ಯುದ್ಧದ ಅಂತ್ಯವಲ್ಲ. ಪ್ರತಿಯೊಬ್ಬ ಉಗ್ರನಿಗೂ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು.
140 ಕೋಟಿ ಭಾರತೀಯರು ಮಾತ್ರವಲ್ಲದೇ ಇಡೀ ಜಗತ್ತು ಈ ಹೋರಾಟದಲ್ಲಿ ಭಾರತದೊಂದಿಗೆ ನಿಂತಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ವಿಶ್ವದ ಎಲ್ಲಾ ದೇಶಗಳು ಒಗ್ಗೂಡಿ ಭಾರತದ ಜನರೊಂದಿಗೆ ನಿಂತಿವೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವವರೆಗೆ, ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು. ಇದನ್ನೂ ಓದಿ: ಯುದ್ಧ ಬೇಡ, ಯಾರೂ ಉದ್ಧಾರ ಆಗಲ್ಲ: ರಮ್ಯಾ
#WATCH | Delhi: Union Home Minister Amit Shah says, “Under the leadership of Prime Minister Narendra Modi, we have given a strong reply to everything, be it the North East, the areas of Left Wing Extremism or the shadow of terrorism in Kashmir. If someone thinks that by carrying… pic.twitter.com/SdXGuDrJqQ
— ANI (@ANI) May 1, 2025
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ನಾವು ಎಲ್ಲದಕ್ಕೂ ಬಲವಾದ ಉತ್ತರ ನೀಡಿದ್ದೇವೆ, ಅದು ಈಶಾನ್ಯವಾಗಿರಬಹುದು, ಎಡಪಂಥೀಯ ನಕ್ಸಲ್ ವಾದದ ಪ್ರದೇಶಗಳಾಗಿರಬಹುದು ಅಥವಾ ಕಾಶ್ಮೀರದಲ್ಲಿ ಭಯೋತ್ಪಾದನೆಯ ನೆರಳಾಗಿರಬಹು. ಯಾರನ್ನೂ ನಾವು ಬಿಡುವುದಿಲ್ಲ. ಈ ದೇಶದ ಪ್ರತಿಯೊಂದು ಇಂಚಿನಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು ನಮ್ಮ ಸಂಕಲ್ಪ ಎಂದು ಗುಡುಗಿದರು.