ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Pahalgam Terror Attack) ಪ್ರತಿಕಾರ ಬೇಕು ಎಂದು ಇಡೀ ದೇಶ ಕೇಳುತ್ತಿದೆ. ಈ ನಡುವೆ ಊಹೆಗೂ ಮೀರಿದ ಪ್ರತಿಕಾರ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಘಟನೆ ನಡೆದು ಹತ್ತು ದಿನಗಳು ಕಳೆದರೂ ಮೋದಿ ಸೈಲೆಂಟ್ ಆಗಿ ಕೆಲಸ ಮಾಡುತ್ತಿದ್ದು, ಮೀಟಿಂಗ್‌ಗಳಿಗೆ ಸೀಮಿತವಾಗಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಅವರ ಮುಂದಿನ ಹೆಜ್ಜೆ ಸಾಕಷ್ಟು ನಿಗೂಢತೆ ಮೂಡಿಸಿದೆ.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದು ಹತ್ತು ದಿನಗಳು ಕಳೆದಿದೆ. ಇಡೀ ದೇಶ ಪ್ರತಿಕಾರದ ನಿರೀಕ್ಷೆಯಲ್ಲಿದೆ. ಸೇನೆ ಭಯೋತ್ಪಾದಕ ಬುಡ ಸುಟ್ಟು ಹಾಕುವುದು ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಆದರೆ ಪ್ರತಿಕಾರದ ಭರವಸೆ ನೀಡಿದ್ದ ಪ್ರಧಾನಿ ಮೋದಿ ಮಾತ್ರ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಫೈರಿಂಗ್ ಕೇಸ್ – ವಿಚಾರಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ನೋಟಿಸ್
ಈ ಹಿಂದೆ 2016ರ ಸೆಪ್ಟೆಂಬರ್ 18ರಂದು ಉರಿ ಮತ್ತು ಫೆ.14 2019ರಂದು ಪುಲ್ವಾಮ ದಾಳಿ ನಡೆದ 12 ದಿನಗಳ ಅಂತರದಲ್ಲಿ ಪಾಕಿಸ್ತಾನ ಪೋಷಿತ ಭಯೋತ್ಪಾದಕರ ನೆಲೆಗಳಿಗೆ ಬಾಂಬ್ ಸ್ಫೋಟಿಸುವ ಮೂಲಕ ಬಿಸಿ ಮುಟ್ಟಿಸಿತ್ತು. ಆದರೆ ಈಗ ಪಹಲ್ಗಾಮ್ ದಾಳಿಯಾಗಿ ಹತ್ತು ದಿನಗಳ ನಡೆದರೂ ಮೋದಿ ಮೌನವಾಗಿದ್ದಾರೆ. ಸೇನಾ ಮುಖ್ಯಸ್ಥರು ಮತ್ತು ಹಿರಿಯ ಸಂಪುಟ ಸಹದ್ಯೋಗಿಗಳ ಜೊತೆಗೆ ಸಭೆ ನಡೆಸುತ್ತಿರುವ ಮೋದಿ ಈ ಬಾರಿ ದೊಡ್ಡ ಪ್ಲ್ಯಾನ್ ಮಾಡುತ್ತಿದ್ದಾರಾ ಎನ್ನುವ ಅನುಮಾನಗಳನ್ನು ಹುಟ್ಟು ಹಾಕಿದೆ. ಇದನ್ನೂ ಓದಿ: ಸತ್ತವರು ವಾಪಸ್ ಬರಲ್ಲ ಅಂತ ಬಿಟ್ರೆ ನಾಳೆ ನಿಮ್ಮನೆಗೂ ಉಗ್ರರು ಬರ್ತಾರೆ: ಸಿಎಂ ವಿರುದ್ಧ ಶಿವಾಚಾರ್ಯಶ್ರೀ ಕಿಡಿ
ಘಟನೆ ನಡೆದು ಹತ್ತು ದಿನಗಳು ಕಳೆದರೂ ಭಾರತದಿಂದ ಯಾವುದೇ ದೊಡ್ಡ ಮಿಲಿಟರಿ ಕಾರ್ಯಾಚರಣೆಯ ಘೋಷಣೆಯಾಗಿಲ್ಲ. ಇದಕ್ಕೆ ಹಲವು ಕಾರಣಗಳು ಇರಬಹುದು ಎನ್ನಲಾಗುತ್ತಿದೆ. ಯುದ್ಧದಿಂದ ದೇಶದ ಆರ್ಥಿಕತೆ, ಜನಜೀವನದ ಮೇಲೆ ದೀರ್ಘ ಪರಿಣಾಮ ಬೀರುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ಮೋದಿ ತಾತ್ಕಾಲಿಕ ಮೌನವಾಗಿರಬಹುದು. ಈಗಾಗಲೇ ಪಾಕ್ ವಿರುದ್ಧ ಭಾರತ ಹಲವು ಕ್ರಮಗಳನ್ನು ಕೈಗೊಂಡಿದೆ. ಸಿಂಧೂ ನದಿ ನೀರು ಒಪ್ಪಂದ ರದ್ದು, ವೀಸಾ ನಿರ್ಬಂಧ, ಪಾಕಿಸ್ತಾನದ ರಾಯಭಾರಿಗಳ ಸಂಖ್ಯೆ ಕಡಿಮೆ ಮಾಡುವುದು ಇವೆಲ್ಲ ‘ಯುದ್ಧವಿಲ್ಲದ ಯುದ್ಧ’ ತಂತ್ರವನ್ನು ಸೂಚಿಸುತ್ತವೆ. ಮಿಲಿಟರಿ ಕ್ರಮದ ಬದಲು, ಆರ್ಥಿಕ-ರಾಜತಾಂತ್ರಿಕ ಒತ್ತಡ ಹೇರಲು ಆದ್ಯತೆಯನ್ನು ನೀಡಲಾಗಿದೆ. ಇದರಿಂದ ಪಾಕಿಸ್ತಾನಕ್ಕೆ ದೀರ್ಘಕಾಲದ ಹಾನಿ ಉಂಟಾಗಬಹುದು. ಆದರೆ ತಕ್ಷಣದ ಯುದ್ಧದ ಅಪಾಯವನ್ನು ತಪ್ಪಿಸುತ್ತದೆ. ಯುದ್ಧ ಘೋಷಣೆ ಬದಲು ದಾಳಿಯ ಹಿಂದಿನ ಕುತಂತ್ರಕ್ಕೆ ಸಾಕ್ಷ್ಯ ಕಲೆ ಹಾಕುವ ಯೋಜನೆಯಿಂದ ಮೋದಿ ಮೌನವಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಪೌರ ಕಾರ್ಮಿಕರ ಬದುಕಲ್ಲಿ ಬದಲಾವಣೆ ತಂದಿದೆ: ಡಿಕೆಶಿ
ಯುದ್ದದಿಂದ ದೇಶಕ್ಕೆ ದೊಡ್ಡ ಆರ್ಥಿಕ ಪೆಟ್ಟು ಕೊಡಲಿದ್ದು, ಮೋದಿ ಸರ್ಕಾರದ ಐದು ಟ್ರಿಲಿಯನ್ ಆರ್ಥಿಕತೆ ಕನಸಿಗೆ ಭಂಗವೂ ತರಬಹುದು. ಹೀಗಾಗಿ ಯುದ್ಧ ಘೋಷಿಸುವ ಮುನ್ನ ಹಲವು ಬಾರಿ ಯೋಚನೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ರಾಜತಾಂತ್ರಿಕ ಪೆಟ್ಟು ಕೊಟ್ಟಿರುವ ಮೋದಿ ಸರ್ಕಾರ ಯುದ್ಧವನ್ನು ಕಡೆಯ ಆಯ್ಕೆ ಎಂದು ಭಾವಿಸಿದಂತೆ ಕಾಣಿಸುತ್ತಿದ್ದು, ಇದಕ್ಕಾಗಿ ಮೋದಿ ಮೌನವಾಗಿರಬಹುದು. ಇದಕ್ಕೆ ಪೂರಕವಾಗಿ ಸಭೆ ನಡೆಸುತ್ತಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಎಎಸ್‍ಪಿಗೆ ಸಿಎಂ ಕೈ ಎತ್ತಿದ್ದಾರೆ, ಏಕವಚನದಲ್ಲಿ ಕರೆದಿದ್ದಾರೆ ಎಂಬುದು ಮಾಧ್ಯಮ ಸೃಷ್ಟಿ: ರಾಜಣ್ಣ