ರಾಮನಗರ: ಮುತ್ತಪ್ಪ ರೈ (Muttappa Rai) ಪುತ್ರ ಮೇಲಿನ ಫೈರಿಂಗ್ ಪ್ರಕರಣ ಸಂಬಂಧ ರಿಕ್ಕಿ ರೈಗೂ ಬಿಡದಿ ಪೊಲೀಸರು (Bidadi Police) ನೋಟಿಸ್ ನೀಡಿದ್ದಾರೆ.
ಈಗಾಗಲೇ ಆಸ್ಪತ್ರೆಯಲ್ಲೇ ರಿಕ್ಕಿ ರೈ (Ricky Rai) ಹೇಳಿಕೆ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅವಶ್ಯಕತೆ ಇದ್ದು ಖುದ್ದು ಠಾಣೆಗೆ ಹಾಜರಾಗುವಂತೆ ರಿಕ್ಕಿ ರೈಗೆ ಬುಧವಾರ ನೋಟಿಸ್ ನೀಡಿದ್ದಾರೆ. ಫೈರಿಂಗ್‌ನ ವೇಳೆ ರಿಕ್ಕಿ ರೈ ಕೈ ಹಾಗೂ ಮೂಗಿನ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಇದನ್ನೂ ಓದಿ: ಸತ್ತವರು ವಾಪಸ್ ಬರಲ್ಲ ಅಂತ ಬಿಟ್ರೆ ನಾಳೆ ನಿಮ್ಮನೆಗೂ ಉಗ್ರರು ಬರ್ತಾರೆ: ಸಿಎಂ ವಿರುದ್ಧ ಶಿವಾಚಾರ್ಯಶ್ರೀ ಕಿಡಿ
2 ಆಪರೇಷನ್‌ಗಳಿಗೆ ಒಳಗಾಗಿದ್ದ ರಿಕ್ಕಿ ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಂಧಿತ ಗನ್‌ಮ್ಯಾನ್ ವಿಠ್ಠಲ್ ಫೈರಿಂಗ್ ಮಾಡಿರುವ ಶಂಕೆ ಇದ್ದು, ಘಟನೆ ಸಂಬಂಧ ವಿಚಾರಣೆಯಲ್ಲಿ ವಿಠ್ಠಲ್ ಯಾವುದೇ ಸತ್ಯ ಬಾಯ್ಬಿಡುತ್ತಿಲ್ಲ. ಹೀಗಾಗಿ ರಿಕ್ಕಿ ರೈ ಹಾಗೂ ಆರೋಪಿ ವಿಠ್ಠಲ್ ಮುಖಾಮುಖಿ ವಿಚಾರಣೆ ನಡೆಸಲು ಪೊಲೀಸರ ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: PublicTV Explainer: ಪುಲ್ವಾಮಾ to ಪಹಲ್ಗಾಮ್ ದಾಳಿ; ಭಾರತ ಕೆಂಡ – ಉಗ್ರರನ್ನು ಓಲೈಸುವ ಪಾಕಿಸ್ತಾನ ತೆತ್ತ ಬೆಲೆ ಏನು?
ಅಲ್ಲದೇ ಎಫ್‌ಎಸ್‌ಎಲ್ ವರದಿಗಾಗಿ (Forensic Science Laboratory Report) ಕಾಯುತ್ತಿರುವ ಪೊಲೀಸರು, ವಶಪಡಿಸಿಕೊಂಡ 7 ಗನ್‌ಗಳಲ್ಲಿ ಯಾವ ಗನ್‌ಗೆ ಸ್ಥಳದಲ್ಲಿ ಸಿಕ್ಕ ಬುಲೆಟ್ ಮ್ಯಾಚ್ ಆಗುತ್ತೆ ಎಂಬ ಮಾಹಿತಿ ತಿಳಿದು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲು ಮುಂದಾಗಿದ್ದಾರೆ.