– ಕೇಂದ್ರ ಸರ್ಕಾರಕ್ಕೆ ಜನಗಣತಿ, ಜಾತಿಗಣತಿ ಮಾಡಲು ಇಷ್ಟ ಇಲ್ಲ
ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಜನಗಣತಿ ಮಾಡಲು ಇಷ್ಟವಿಲ್ಲ. ಆದರೂ ಜನರ ಒತ್ತಡಕ್ಕೆ ಈಗ ಜನಗಣತಿ ಜೊತೆಗೆ ಜಾತಿಗಣತಿ (Caste Census) ಮಾಡುವ ಘೋಷಣೆ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಸರ್ಕಾರದ ವತಿಯಿಂದ ನಡೆದ ಪೌರ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಾತಿಗಣತಿ ಆಗಬೇಕು ಅಂತ ರಾಹುಲ್ ಗಾಂಧಿ ಇಡೀ ದೇಶದಲ್ಲಿ ಓಡಾಟ ಮಾಡಿದರು. ಏಪ್ರಿಲ್ 16, 2023 ರಂದು ನಾನೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಜಾತಿಗಣತಿ ಮಾಡುವಂತೆ ಮನವಿ ಮಾಡಿದ್ದೆ. ಆದರೆ ನಾವು ಮನವಿ ಮಾಡಿದಾಗ ಮಾಡದೇ ಮೋದಿ ಅವರು ಬುಧವಾರ ವಿಶೇಷ ಕ್ಯಾಬಿನೆಟ್ ಮಾಡಿ ಜಾತಿಗಣತಿ ಮಾಡೋ ಘೋಷಣೆ ಮಾಡಿ ತಾವು ಕ್ರೆಡಿಟ್ ಪಡೆಯೋದಕ್ಕೆ ಮುಂದಾಗಿದೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: Haveri | ರಸ್ತೆ ಮಧ್ಯೆ ಬಸ್ ನಿಲ್ಲಿಸಿ ನಮಾಜ್ – ಡ್ರೈವರ್ ಅಮಾನತು
ಜಾತಿಗಣತಿಯನ್ನ ನೆಹರು ಅವರು ವಿರೋಧ ಮಾಡಿದ್ರು ಅಂತ ಬಿಜೆಪಿ ಅಪ ಪ್ರಚಾರ ಮಾಡ್ತಿದೆ. ನೆಹರು ಇನ್ನ ವಿರೋಧ ಮಾಡಿರಲಿಲ್ಲ. ಅಂಬೇಡ್ಕರ್ ಮಾಡಿದ್ದ ಹಿಂದೂ ಕೋಡ್ ಬಿಲ್ ಜಾರಿ ಮಾಡಿದ್ದು ನೆಹರು ಅಂತ ಬಿಜೆಪಿಗೆ ತಿರುಗೇಟು ಕೊಟ್ರು. ಬಡವರ ಪರ ಕೆಲಸ ಮಾಡೋದು ಕಾಂಗ್ರೆಸ್ ಮಾತ್ರ. ಬಿಜೆಪಿಗೆ ಬಡವರ ಮೇಕೆ ಅನುಕಂಪ ಇಲ್ಲ ಅಂತ ಕಿಡಿಕಾರಿದರು. ಇದನ್ನೂ ಓದಿ: ನಮ್ಮ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸ್ತೀರಾ? – ಪಹಲ್ಗಾಮ್ ಅರ್ಜಿದಾರರ ವಿರುದ್ಧ ಸುಪ್ರೀಂ ಕೆಂಡಾಮಂಡಲ
ಈಗ ಗಣತಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ನಾವು ಬೇಡಿಕೆ ಇಡುತ್ತಿದ್ದೇವೆ. ಖಾಸಗಿ ಕಂಪನಿಗಳಲ್ಲೂ ಎಸ್‌ಸಿ-ಎಸ್ಟಿ ಮೀಸಲಾತಿ ಜಾರಿ ಮಾಡಬೇಕು. 50% ಮೀಸಲಾತಿ ಪ್ರಮಾಣವನ್ನ ಹೆಚ್ಚಳ ಮಾಡಬೇಕು ಎಂದು ಕೇಂದ್ರ ಬಿಜೆಪಿಗೆ ಆಗ್ರಹಿಸಿದರು. ಇದನ್ನೂ ಓದಿ: ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು – 26 ಕುಟುಂಬಕ್ಕೆ ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ
ಕೇಂದ್ರ ಸರ್ಕಾರ ಜನಗಣತಿ ಮಾಡಲು ಕಡಿಮೆ ಹಣ ಇಟ್ಟಿದೆ. ಇಷ್ಟು ಹಣದಿಂದ ಹೇಗೆ ಗಣತಿ ಮಾಡಲು ಸಾಧ್ಯ?ಕರ್ನಾಟಕದಲ್ಲಿ ಗಣತಿ ಮಾಡಲು 160 ಕೋಟಿ ಹಣ ಇಡಲಾಗಿತ್ತು. ಬಿಜೆಪಿ ಅವರಿಗೆ ಗಣತಿ ಮಾಡೋ ಮನಸು ಇರಲಿಲ್ಲ. ಈಗಲೂ ಇಲ್ಲ. ಆದರೆ ಈಗ ಒತ್ತಡಕ್ಕೆ ಘೋಷಣೆ ಮಾಡಿದ್ದಾರೆ ಅಷ್ಟೇ. ಮೋದಿ ಸರ್ಕಾರ ಕಾರ್ಮಿಕರಿಗೆ ಏನು ಮಾಡಿಲ್ಲ. ಮೋದಿ ಸರ್ಕಾರ ಕಾರ್ಮಿಕ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿ, ತನಿಖೆಗೆ ಸಹಕರಿಸಿ: ಪಾಕ್‌ಗೆ ಬುದ್ದಿಮಾತು ಹೇಳಿದ ಅಮೆರಿಕ