ನವದೆಹಲಿ: ಪಹಲ್ಗಾಮ್ ಘಟನೆಯ (Pahalgam Terror Attack) ಬಗ್ಗೆ ನ್ಯಾಯಾಂಗ ತನಿಖೆಗೆ ( Judicial Probe) ಕೋರಿ ಸಲ್ಲಿಸಲಾದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.
ವಿಚಾರಣೆ ಸಂದರ್ಭದಲ್ಲಿ ಕೋರ್ಟ್, ನೀವು ನಮ್ಮ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸಲು ಬಯಸುತ್ತೀರಾ ಎಂದು ಪ್ರಶ್ನಿಸುವ ಮೂಲಕ ಅರ್ಜಿದಾರರಿಗೆ ಚಾಟಿ ಬೀಸಿದೆ.
ಅರ್ಜಿದಾರರಾದ ಫತೇಶ್ ಕುಮಾರ್ ಶಾಹು, ಮೊಹಮ್ಮದ್ ಜುನೈದ್ ಮತ್ತು ವಿಕ್ಕಿ ಕುಮಾರ್ ಅವರು ನ್ಯಾಯಾಂಗ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ಇಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ನ್ಯಾ ಎನ್.ಕೆ. ಸಿಂಗ್ ಅವರಿಂದ ಪೀಠದಲ್ಲಿ ನಡೆಯಿತು. ಇದನ್ನೂ ಓದಿ: ಸೋನಾಮಾರ್ಗ್ ಸುರಂಗ ದಾಳಿಯಲ್ಲಿ 7 ಜನರನ್ನು ಬಲಿಪಡೆದಿದ್ದ ಉಗ್ರರ ಟೀಮ್‌ನಿಂದಲೇ ಪಹಲ್ಗಾಮ್ ದಾಳಿ
ಈ ವೇಳೆ, ಪ್ರತಿಯೊಬ್ಬ ಭಾರತೀಯರು ಭಯೋತ್ಪಾದನೆಯ ವಿರುದ್ಧ ಹೋರಾಡಲು ಕೈಜೋಡಿಸಿರುವ ನಿರ್ಣಾಯಕ ಸಮಯ ಇದು. ನಮ್ಮ ಪಡೆಗಳನ್ನು ಸ್ಥೈರ್ಯ ಕುಗ್ಗಿಸಬೇಡಿ. ಸಮಸ್ಯೆಯ ಸೂಕ್ಷ್ಮತೆಯನ್ನು ನೋಡಿ ಅರ್ಜಿ ಸಲ್ಲಿಸಿ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿತು. ಇದನ್ನೂ ಓದಿ: ಐಎಸ್ಐ ಮುಖ್ಯಸ್ಥನನ್ನು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಿದ ಪಾಕ್
ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಮೊದಲು ಜವಾಬ್ದಾರರಾಗಿರಿ. ನಿಮಗೂ ದೇಶದ ಬಗ್ಗೆ ಕರ್ತವ್ಯವಿದೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಭಯೋತ್ಪಾದನಾ ನಿಗ್ರಹ ವಿಷಯಗಳಲ್ಲಿ ಯಾವಾಗದಿಂದ ತಜ್ಞರಾಗಿದ್ದಾರೆ ಎಂದು ನ್ಯಾ.ಸೂರ್ಯ ಕಾಂತ್ ಖಾರವಾಗಿ ಪ್ರಶ್ನಿಸಿದರು.
ಈ ವೇಳೆ ಪಹಲ್ಗಾಮ್ ದಾಳಿಯ ಬಳಿಕ ಕಾಶ್ಮೀರದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಹೇಳಿದಾಗ ನ್ಯಾಯಾಧೀಶರು ಈ ವಿಚಾರವನ್ನು ಅರ್ಜಿಯಲ್ಲಿ ಎಲ್ಲಿ ಉಲ್ಲೇಖ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಈ ವಿಚಾರ ಬೇಕಾದರೆ ಹೈಕೋರ್ಟ್‌ಗೆ ಹೋಗಿ ಅರ್ಜಿ ಸಲ್ಲಿಸಿ ಎಂದು ಸೂಚಿಸಿದರು.