ರಾಕಿಂಗ್ ಸ್ಟಾರ್ ಯಶ್ (Yash) ಅವರು ‘ಟಾಕ್ಸಿಕ್’ ಚಿತ್ರದ ನಡುವೆ ಇದೀಗ ‘ರಾಮಾಯಣ’ ಚಿತ್ರ ಕೈಗೆತ್ತಿಕೊಂಡಿದ್ದಾರೆ. ‘ರಾಮಾಯಣ’ (Ramayana) ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಇದನ್ನೂ ಓದಿ:ಯಶ್ ನಟನೆಯ ರಾಮಾಯಣ ಚಿತ್ರದ ಫಸ್ಟ್ ಗ್ಲಿಂಪ್ಸ್ WAVES ಶೃಂಗಸಭೆಯಲ್ಲಿ ರಿಲೀಸ್
ರಾವಣ ಪಾತ್ರಧಾರಿಯಾಗಿ ಮೊದಲ ದೃಶ್ಯದಲ್ಲಿ ಯಶ್ ನಟಿಸಿದ್ದಾರೆ. ಏ.30ರಿಂದ ಒಂದು ತಿಂಗಳುಗಳ ಕಾಲ ಯಶ್ ‘ರಾಮಾಯಣ ಪಾರ್ಟ್ 1’ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಮುಂಬೈನಲ್ಲಿಯೇ ಯಶ್ ಬೀಡು ಬೀಡಲಿದ್ದಾರೆ. ಸದ್ಯದಲ್ಲೇ ಸಾಯಿ ಪಲ್ಲವಿ (ಸೀತಾ), ರಣಬೀರ್ ಕಪೂರ್ (ರಾಮ), ಸನ್ನಿ ಡಿಯೋಲ್ (ಹನುಮಾನ್) ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಇದನ್ನೂ ಓದಿ:ಅಕ್ಷಯ ತೃತೀಯದಂದು ಬಿಡುಗಡೆಯಾಯ್ತು ‘ಟೈಮ್ ಪಾಸ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್!
ರಾವಣ ಪಾತ್ರಕ್ಕೆ ಜೀವತುಂಬಲು ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಂಡೇ ಯಶ್ ಅಖಾಡಕ್ಕೆ ಇಳಿದಿದ್ದಾರೆ. ನಟನೆಯ ಜೊತೆ ಸಹ- ನಿರ್ಮಾಪಕನಾಗಿ ಕೂಡ ಅವರು ಕೈಜೋಡಿಸಿದ್ದಾರೆ. ರಾವಣ ಪಾತ್ರಕ್ಕೆ ಬಣ್ಣ ಹಚ್ಚೋದಕ್ಕೂ ಮುನ್ನ ಇತ್ತೀಚೆಗೆ ಉಜ್ಜನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.
ಅಂದಹಾಗೆ, ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಕನ್ನಡ, ಇಂಗ್ಲಿಷ್ ಜೊತೆ ಬಹುಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ. ಮುಂದಿನ ವರ್ಷ ಜ.19ರಂದು ಚಿತ್ರ ರಿಲೀಸ್ ಆಗ್ತಿದೆ.