ಧಾರವಾಡ: ಕಳೆದ 5 ವರ್ಷಗಳಿಂದ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ (Rahul Gandhi) ಒತ್ತಾಯಿಸುತ್ತಲೇ ಬಂದಿದ್ದರೂ ಕೇಂದ್ರ ಸರ್ಕಾರ ಮಾಡಿರಲಿಲ್ಲ. ಈಗ ಬಿಹಾರ ಚುನಾವಣೆ ಬಂದಿರುವುದರಿಂದ ಹೊಸದು ಏನಾದರೊಂದು ಮಾಡಬೇಕು ಎಂದು ಕೇಂದ್ರ ಸರ್ಕಾರ ಈಗ ಜನಗಣತಿ, ಜಾತಿ ಜನಗಣತಿಯನ್ನು ಮುಂದೆ ತಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ (Santhosh Lad) ಹೇಳಿದರು.
ಧಾರವಾಡದಲ್ಲಿ (Dharwad) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊದಲು ಕೇಂದ್ರದವರು ಜನಗಣತಿ (Caste Census) ಮಾಡುವುದಿಲ್ಲ ಎಂದು ಹೇಳಿದ್ದರು. ರಾಜ್ಯ ಸರ್ಕಾರ ಜಾತಿ ಜನಗಣತಿ ಮಾಡಿದಾಗ ಅದಕ್ಕೆ ಕೇಂದ್ರದವರು ಟಿಪ್ಪಣಿ ಕೊಡುತ್ತಿದ್ದರು. ನಾವು ಹಿಂದುಳಿದ ಜಾತಿಗಳಿಗೆ 54 ಪ್ಯಾರಾ ಮೀಟರ್ ಸೆಟ್ ಮಾಡಿದ್ದೇವೆ. ಓಬಿಸಿಯವರು ಎಷ್ಟು ಜನ ಇದ್ದಾರೆ ಎಂದು ಬಿಜೆಪಿಯವರು ಕೇಳುತ್ತಿದ್ದರು. ಈಗ ಬಿಹಾರ ಚುನಾವಣೆ (Bihar Election) ಬಂದಿರುವುದರಿಂದ ಏನಾದರೊಂದು ಚರ್ಚೆಗೆ ತರಬೇಕು ಎಂದು ಜನಗಣತಿ ತಂದು ಕಾಂಗ್ರೆಸ್ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಕಿಡಿಕಾರಿದರು. ಇದನ್ನೂ ಓದಿ: ಜನಗಣತಿಯೊಂದಿಗೆ ಜಾತಿ ಗಣತಿ ಮೋದಿ ಅವರ ದಿಟ್ಟ ನಿರ್ಧಾರ: ಹೆಚ್‌ಡಿಕೆ
ಕೇಂದ್ರದಲ್ಲಿ ಬಿಜೆಪಿ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಅಲ್ಲಿ ಅವರು ಗಣತಿ ಮಾಡಲಿ. ಇಲ್ಲಿ ನಾವು ಮಾಡುತ್ತೇವೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡಬೇಡಿ ಎಂದು ಹೇಳುವ ಅಧಿಕಾರ ಇಲ್ಲ. ನಾವು ಗಣತಿ ಮಾಡಬೇಕು ಎಂದು ಉದ್ದೇಶಿಸಿದ್ದೆವು ಆ ಪ್ರಕಾರ ಮಾಡಿದ್ದೇವೆ. ಕೇಂದ್ರದವರು ಈಗ ಗಣತಿ ಮಾಡಲು ಮುಂದೆ ಬಂದಿದ್ದಾರೆ ಮಾಡಲಿ. ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಓಬಿಸಿ ಬಗ್ಗೆ ಮಾತನಾಡಿದ್ದಾರೆ. ಇದು ರಾಹುಲ್ ಗಾಂಧಿ ಅವರಿಗೆ ಸಿಕ್ಕ ಜಯ ಎಂದು ನಾನು ಭಾವಿಸುತ್ತೇನೆ ಎಂದರು. ಇದನ್ನೂ ಓದಿ: ಕೇಂದ್ರದ ಜಾತಿ ಜನಗಣತಿ ನಿರ್ಧಾರವನ್ನ ಸ್ವಾಗತ ಮಾಡ್ತೇನೆ: ರಾಹುಲ್ ಗಾಂಧಿ
ಓಬಿಸಿ ಯಾರು ಎಂದು ಹೇಗೆ ಕಂಡು ಹಿಡಿಯುತ್ತಾರೆ. ಕೇಂದ್ರ ಸರ್ಕಾರ ಇದನ್ನು ಕಂಡು ಹಿಡಿಯುತ್ತಾ? ಓಬಿಸಿ ಎನ್ನುವುದು ಸ್ಟೇಟ್ ಸಬ್ಜೆಕ್ಟ್ ಆಗುತ್ತದೆ. ಕೇಂದ್ರಕ್ಕೆ ಓಬಿಸಿ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಇರುವ ಓಬಿಸಿ ಮಹಾರಾಷ್ಟ್ರದಲ್ಲಿ (Maharashtra) ಬೇರೆ ಇರುತ್ತಾರೆ. ನಾವು ಪ್ಯಾರಾಮೀಟರ್ ಫಿಕ್ಸ್ ಮಾಡಿ ಮಾಡಿದ್ದೇವೆ. ಅದಕ್ಕೆ ಬಿಜೆಪಿಯವರು ವಿರುದ್ಧವಾಗಿ ಹೋಗುತ್ತಾರೆ ಎಂದು ನಾವು ಏನೂ ಮಾಡಲು ಆಗೋದಿಲ್ಲ. ಕೇಂದ್ರ ಸರ್ಕಾರ ಏಕೆ ವಿರುದ್ಧ ಹೋಗುತ್ತಿದೆಯೋ ಗೊತ್ತಿಲ್ಲ. ನಾವು ಮಾಡಿರುವ ಗಣತಿ ಸಮರ್ಪಕವಾಗಿದೆ. ಬೇಕಾದರೆ ಅವರು ಚೆಕ್ ಮಾಡಲಿ. ಸಲಹೆ ಕೊಡಲಿ ಎಂದು ಹೇಳಿದರು. ಇದನ್ನೂ ಓದಿ: ಮಧ್ಯರಾತ್ರಿ ಸುದ್ದಿಗೋಷ್ಠಿ- ಪಾಕ್ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ
ತಮಿಳುನಾಡಿನಲ್ಲಿ (TamilNadu) ಗಣತಿ ಮಾಡಿ 69% ಮೀಸಲಾತಿ ತೆಗೆದುಕೊಂಡಿದ್ದಾರೆ. ಮೊನ್ನೆ ಬಿಹಾರದವರು ಮಾಡಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಬಿಜೆಪಿಯವರದ್ದು ಈಗ ಒನ್, ಟು, ತ್ರಿ ಆಲ್ ಇಂಡಿಯಾ ಫ್ರೀ ಎಂಬಂತೆ ನಿಲುವು ಇದೆ. ರಾಜ್ಯ ಸರ್ಕಾರಕ್ಕೆ ಗಣತಿ ಮಾಡಬೇಡಿ ಎಂದು ಹೇಳುವ ಅಧಿಕಾರ ಕೇಂದ್ರಕ್ಕೆ ಇಲ್ಲ. ನನ್ನ ಪ್ರಕಾರ ಗಣತಿ ಮಾಡುವ ಅಧಿಕಾರ ಎಲ್ಲ ರಾಜ್ಯಗಳಿಗೂ ಇದೆ ಎಂದರು.