– ಜನರ ಜಾತಿಗಣತಿ ಆಗಬೇಕು, ಅಧಿಕಾರಿಗಳ ಗಣತಿ ಆಗಬಾರದು; ರಾಗಾ
– ಪಹಲ್ಗಾಮ್ ದಾಳಿಯಲ್ಲಿ ಮೃತರಾದವರಿಗೆ ಹುತಾತ್ಮರ ದರ್ಜೆ, ಗೌರವ ನೀಡಬೇಕು
ನವದೆಹಲಿ: ಕೇಂದ್ರ ಸರ್ಕಾರದ ಜಾತಿ ಜನಗಣತಿ (Caste Census) ನಿರ್ಧಾರ ತಡವಾದರೂ ನಾನು ಇದನ್ನೂ ಸ್ವಾಗತ ಮಾಡುತ್ತೇನೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದರು.
ದೆಹಲಿಯಲ್ಲಿ (Delhi) ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯ ಸಮಯದಲ್ಲೇ ಜಾತಿ ಜನಗಣತಿ ಯಾಕೆ ಘೋಷಣೆ ನಿರ್ಧಾರ ಯಾಕೆ ಮಾಡಿದ್ದಾರೆ ಎನ್ನುವುದು ನಂಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಇದು ಜನರ ಜಾತಿಗಣತಿ ಆಗಬೇಕು, ಅಧಿಕಾರಿಗಳ ಗಣತಿ ಆಗಬಾರದು. ಇದನ್ನು ಹೇಗೆ ಮಾಡ್ತಾರೆ ಎಂದು ಹೇಳಬೇಕು ಎಂದರು. ಇದನ್ನೂ ಓದಿ: ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ: ಸಿದ್ದರಾಮಯ್ಯ
ಪ್ರಧಾನಿ ಮೋದಿ ಅವರು ಕೇವಲ 4 ಜಾತಿಗಳು ಎಂದಿದ್ದರು. ಈಗ ಏಕಾಏಕಿ ಜಾತಿಗಣತಿ ಬಗ್ಗೆ ಘೋಷಣೆ ಮಾಡಿದ್ದಾರೆ. ಕೇವಲ ಮೀಸಲಾತಿ ಪ್ರಾಮುಖ್ಯತೆ ನೀಡುವುದಲ್ಲ. ಪ್ರತಿಯೊಬ್ಬರಿಗೆ ನ್ಯಾಯ ಸಿಗುವಂತೆ ಮಾಡಬೇಕಾಗಿದೆ ಹೇಳಿದರು. ಇದನ್ನೂ ಓದಿ: ನಿಮ್ಗೆ ಹುಚ್ಚು ಹಿಡಿದಿದ್ಯಾ? – ಪಾಕಿಸ್ತಾನದಲ್ಲಿ ಈಗ ಸೇನೆ Vs ಪೊಲೀಸ್ ಕಿತ್ತಾಟ
ಜಾತಿಗಣತಿ ಹಾಗೂ ಜನಗಣತಿಗೆ ಅವಧಿ, ಸಮಯ ನಿರ್ಧಾರ ಮಾಡಬೇಕು. ಬಜೆಟ್‌ನಲ್ಲಿ ಹಣವನ್ನು ನಿಗದಿಪಡಿಸಬೇಕು. ಬಜೆಟ್‌ನ್ನು ಹಣ ತೆಗೆದಿರಿಸುವ ಬಗ್ಗೆ ಮಾಹಿತಿ ನೀಡಬೇಕು. ನಮ್ಮ ಆಗ್ರಹ, ಒತ್ತಡಕ್ಕೆ ಪ್ರಧಾನಿ ಮೋದಿ ಅವರು ಸ್ಪಂದಿಸಿದಕ್ಕೆ ಅವರಿಗೆ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದರು.
ನಮ್ಮ ಪಕ್ಷ ಸಮೀಕ್ಷೆಗೆ ಆಗ್ರಹಿಸಿ ದೇಶದಲ್ಲೆಡೆ ಅಭಿಯಾನ ಆರಂಭಿಸಿದ್ದೆವು. ಜಾತಿಗಣತಿಯಿಂದಾಗಿ ಅಭಿವೃದ್ದಿಗೆ ಹಲವು ದಾರಿಗಳು ತೆರಯುತ್ತವೆ. ಕರ್ನಾಟಕದ ಜಾತಿಗಣತಿ ಮುಂದಿನ ದಿನಗಳಲ್ಲಿ ಮಾದರಿಯಾಗಲಿದೆ. ಪ್ರಧಾನಿ ಮೋದಿ ಕೈಗೊಂಡ ನಿರ್ಧಾರ ಮಹತ್ವದಾಗಿದೆ ಎಂದರು. ಇದನ್ನೂ ಓದಿ: ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಕೇಂದ್ರ ಸರ್ಕಾರ
ದಲಿತರು ಆದಿವಾಸಿಗಳಿಗೆ ಅವಕಾಶ ಸಿಗುತ್ತಿಲ್ಲ. 90% ಜನರು ಅವಕಾಶ ವಂಚಿತರಿದ್ದಾರೆ. ಗಿಗ್ ವರ್ಕರ್‌ಗಳಿಗೆ ನಾವು ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾನೂನು ತರುತ್ತಿದ್ದೇವೆ ಎಂದು ತಿಳಿಸಿದರು.
ಪಹಲ್ಗಾಮ್ ದಾಳಿಯಲ್ಲಿ (Pahalgam Attack) ಮೃತಪಟ್ಟವರ ಮನೆಗಳಿಗೆ ತೆರಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿದ್ದೇನೆ. ಉಗ್ರರು (Terrorists) ಮಾನವೀಯತೆ ಇಲ್ಲದೇ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ. ಇದು ಹೇಗೆ ಆಯ್ತು ಅಂತಾ ಕೇಳಲ್ಲ. ಯಾರು ಇದನ್ನು ಮಾಡಿದ್ದಾರೆ. ಎಲ್ಲಿದ್ದಾರೆ, ಯಾರೇ ಆಗಿದ್ದರು ಅವರಿಗೆ ಸೂಕ್ತ ತಿರುಗೇಟು ನೀಡಬೇಕು. ಭಾರತದ ಜೊತೆಗೆ ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ನೆನಪಿರಬೇಕು ಎಂದರು. ಇದನ್ನೂ ಓದಿ: ನಾವು ಬಿರುಗಾಳಿ ಬೀಸಿದ್ರೂ ʻಅಲ್ಲಾಹು ಅಕ್ಬರ್ʼ ಅಂತೀವಿ – ಪಹಲ್ಗಾಮ್ ಜಿಪ್‌ಲೈನ್ ಆಪರೇಟರ್ ತಂದೆ
ಇದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಪಕ್ಷಗಳ ಸಭೆಯಲ್ಲಿ ನಾವು ಹೇಳಿದ್ದೇವೆ. ವಿಪಕ್ಷಗಳು ಸರ್ಕಾರಕ್ಕೆ 100% ಬೆಂಬಲ ನೀಡಿದ್ದೇವೆ. ನರೇಂದ್ರ ಮೋದಿ (Narendra Modi) ಅವರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಕೃತ್ಯ ಮಾಡಿದವರು ಬೆಲೆ ತೆರಬೇಕು. ಇದನ್ನು ಸಂತ್ರಸ್ತರ ಕುಟುಂಬ ಸಂದೇಶ ನೀಡಲು ಹೇಳಿದ್ದಾರೆ. ದಾಳಿಯಲ್ಲಿ ಮೃತರಾದವರಿಗೆ ಹುತಾತ್ಮರ ದರ್ಜೆ, ಗೌರವ ನೀಡಬೇಕು ಎಂದು ಕೇಂದ್ರಕ್ಕೆ ಆಗ್ರಹಿಸಿದರು.
ಮೋದಿ ಅವರು ಸಮಯ ವ್ಯರ್ಥ ಮಾಡಬಾರದು. ಇಂತಹ ದಾಳಿಗಳನ್ನು ಸಹಿಸಲ್ಲ ಎನ್ನುವ ಸಂದೇಶ ನೀಡಬೇಕು. ಗೊಂದಲಗಳಲ್ಲಿ ನಿರ್ಧಾರ ಕೈಗೊಳ್ಳಬಾರದು. ಸ್ಪಷ್ಟವಾದ ನಿಲುವು ತೆಗೆದುಕೊಳ್ಳಬೇಕು. ಉಗ್ರರ ದಾಳಿ ವಿರುದ್ಧ ಪ್ರಧಾನಿ ಅವರು ಕೈಗೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಅವರ ಎಲ್ಲಾ ನಿರ್ಧಾರಕ್ಕೂ ವಿಪಕ್ಷಗಳು ಕೈಜೋಡಿಸುತ್ತೇವೆ ಎಂದು ಬೆಂಬಲ ಸೂಚಿಸಿದರು.