ಶ್ರೀನಗರ: ಪಾಪಿ ಪಾಕಿಸ್ತಾನ (Pakistan) ಕುತಂತ್ರ ಬಿಡ್ತಿಲ್ಲ. ಸುರಂಗ ಮಾರ್ಗ ಬಳಕೆ ಮಾಡಿ ಭಾರತಕ್ಕೆ ಉಗ್ರರನ್ನ ಕಳುಹಿಸುವ ಕುತಂತ್ರ ಮಾಡ್ತಿದ್ಯಾ ಎಂಬ ಶಂಕೆ ವ್ಯಕ್ತವಾಗಿದೆ.
ಎಲ್‌ಓಸಿ (Line Of Control) ಬಳಿ ಟನಲ್ ಸುರಂಗಗಳನ್ನು ಅಗೆದು ಆಕ್ಸಿಜನ್ ಪೈಪ್ ಅಳವಡಿಸಿ ಉಗ್ರರನ್ನ ಭಾರತಕ್ಕೆ ನುಸುಳಿಸಲು ಕುತಂತ್ರ ಮಾಡ್ತಿದೆ. ಸಂಘರ್ಷದ ವೇಳೆ ಅದೇ ಸುರಂಗ ಮಾರ್ಗದಲ್ಲಿ ಸೈನ್ಯವನ್ನ ಕಳುಹಿಸಬಹುದೆಂಬ ಅನುಮಾನ ಇದೆ. ಹಾಗಾಗಿ ಆಳವಾದ ಭೂಗತ ಟನಲ್‌ಗಳನ್ನ ಕೃತ್ಯಕ್ಕೆ ಬಳಸುವ ಸಾಧ್ಯತೆ ಬಗ್ಗೆ ತನಿಖೆ ಮಾಡಲು ಬಿಎಸ್‌ಎಫ್‌ಗೆ (Border Security Force) ನಿರ್ದೇಶನ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ. ಇದನ್ನೂ ಓದಿ: ನಾವು ಬಿರುಗಾಳಿ ಬೀಸಿದ್ರೂ ʻಅಲ್ಲಾಹು ಅಕ್ಬರ್ʼ ಅಂತೀವಿ – ಪಹಲ್ಗಾಮ್ ಜಿಪ್‌ಲೈನ್ ಆಪರೇಟರ್ ತಂದೆ
ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ ಎಚ್ಚೆತ್ತ ಭಾರತ ಪಾಕಿಸ್ತಾನವು ಒಳನುಸುಳುವಿಕೆ ಬಗ್ಗೆ ರಹಸ್ಯ ತನಿಖೆ ನಡೆಸ್ತಿದ್ದು, ನುಸುಳುವಿಕೆಗೆ ಆಳವಾದ ಸುರಂಗಗಳನ್ನು ಅಗೆಯುವಲ್ಲಿ ಪಾಕಿಸ್ತಾನ ಕುತಂತ್ರ ಫಲಿಸಿದ್ಯಾ ಇಲ್ವಾ ಎಂಬುದನ್ನ ಕಂಡುಹಿಡಿಯಲು ನಿರ್ದೇಶಿಸಲಾಗಿದೆ. ಇದನ್ನೂ ಓದಿ: ಕುಡುಪು ಕ್ರಿಕೆಟ್ ಮೈದಾನದಲ್ಲಿ ವ್ಯಕ್ತಿ ಕೊಲೆ ಕೇಸ್ – 20 ಆರೋಪಿಗಳು ಬಂಧನ
ಸುರಂಗ ಕೊರೆಯುವ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಪಾಕಿಸ್ತಾನ ಗಡಿಯಲ್ಲಿ ಈಗಾಗಲೇ ಮಾಜಿ ಸೈನಿಕರ ನಿಯೋಜನೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ನಿಗದಿಯಾಗಿದ್ದ ಮೋದಿ ರಷ್ಯಾ ಪ್ರವಾಸ ದಿಢೀರ್ ರದ್ದು!
ಜನವರಿ ಆರಂಭದಲ್ಲೇ ಸುರಂಗ ನುಸುಳಿವಿಕೆ ಬಗ್ಗೆ ಗುಪ್ತಚರ ಮಾಹಿತಿ ಇತ್ತು ಎನ್ನಲಾಗಿದೆ. ಈಗ ಪಾಕಿಸ್ತಾನದ ಗಡಿಯಲ್ಲಿ 200 ಮೀ. ಸುರಂಗ ಕೊರೆದ ಅನುಮಾನ ಇದೆ. ಅಲ್ಲದೆ ಒಳನುಸುಳುವವರಿಗೆ ಉಸಿರಾಡಲು ಆಮ್ಲಜನಕ ಪೈಪ್ ಅಳವಡಿಕೆ ಶಂಕೆ ವ್ಯಕ್ತವಾಗಿದೆ. 2001ರಿಂದ ಇಲ್ಲಿ ತನಕ 22 ಸುರಂಗಗಳನ್ನ ಪತ್ತೆ ಹಚ್ಚಿರುವ ಭಾರತ, ಪಾಕಿಸ್ತಾನದಿಂದ ಭಾರತಕ್ಕೆ ನುಸುಳಲು ಬಳಸುವ ಸುರಂಗ ಮಾರ್ಗಗಳಲ್ಲಿ ಇಲ್ಲಿ ತನಕ 25 ಕಿ.ಮೀ ಭೂಗತ ಸುರಂಗಗಳನ್ನ ಅಗೆದಿರುವ ಮಾಹಿತಿ ಇದೆ. ಇದನ್ನೂ ಓದಿ: ಪಾಕ್ ವಿರುದ್ಧ ಜಲಯುದ್ಧ – ಚೆನಾಬ್ ನದಿಯ ನೀರಿನ ಮಟ್ಟ ಭಾರೀ ಇಳಿಕೆ
2020ರಲ್ಲಿ 500 ಮೀ. ಉದ್ದ ಮತ್ತು 30 ಮೀ. ಆಳವಿದ್ದ ಸುರಂಗವನ್ನು ಭಾರತಉಡೀಸ್ ಮಾಡಲಾಗಿತ್ತು. ಪಾಕಿಸ್ತಾನ ಗಡಿಯಲ್ಲಿ ಹುಲ್ಲಿನಿಂದ ತುಂಬಿ ಉಗ್ರರನ್ನು ಮರೆಮಾಚುವ ಮೂಲಕ ಪಾಕ್ ಕುತಂತ್ರ ಬುದ್ಧಿ ತೋರಿಸಿತ್ತು.