- 9 ಜನ ಜಿಪ್‌ಲೈನ್ ಮಾಡಿದ್ದರೂ ಬಾಯ್ಬಿಟ್ಟಿರದ ಆಪರೇಟರ್ – ಆ ವೇಳೆ ʻಅಲ್ಲಾಹು ಅಕ್ಬರ್ʼ ಎಂದಿದ್ದೇಕೆ?
ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೂ (Pahalgam Terror Attack) ಕೆಲವೇ ಕ್ಷಣಗಳ ಮುನ್ನ ಜಿಪ್‌ಲೈನ್ ಆಪರೇಟರ್ ಮುಜಾಮಿಲ್ ʻಅಲ್ಲಾಹು ಅಕ್ಬರ್ʼ (Allahu Akbar) ಎಂದು ಕೂಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಜಾಮಿಲ್ ಆವರ ತಂದೆ ಪ್ರತಿಕ್ರಿಯಿಸಿದ್ದು, ನಾವು ಮುಸ್ಲಿಮರು, ಬಿರುಗಾಳಿ ಬೀಸಿದ್ರೂ ಸಹ ʻಅಲ್ಲಾಹು ಅಕ್ಬರ್ʼ ಅಂತೀವಿ. ಇದು ನಮ್ಮ ಬಾಯಲ್ಲಿ ಸ್ವಾಭಾವಿಕವಾಗಿ ಬರುವಂತಹದ್ದಾಗಿದೆ ಎಂದು ಅವರು ಹೇಳಿದ್ದಾರೆ.
ಗುಂಡು ಹಾರಿಸುವ ಮೊದಲು ಮುಜಾಮಿಲ್ ಮೂರು ಬಾರಿ ʻಅಲ್ಲಾಹು ಅಕ್ಬರ್ʼ ಎಂದು ಕೂಗಿದರು ಎಂದು ಗುಜರಾತ್‌ನ ಪ್ರವಾಸಿ ರಿಷಿ ಭಟ್ ಆರೋಪಿಸಿದ್ದರು. ಇದರಿಂದ ಉಗ್ರರ ದಾಳಿಯ ಬಗ್ಗೆ ಮುಜಾಮಿಲ್‌ಗೆ ಮೊದಲೇ ತಿಳಿದಿರಬಹುದು ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಾದ ಬಳಿಕ ಎನ್‌ಐಎ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಭಾರತದಿಂದ ಪಾಕ್‌ಗೆ ಮೆಡಿಸಿನ್ ಬಂದ್ – ಔಷಧವಿಲ್ಲದೆ ಕೆಲಸ ತೊರೆಯಲು ಮುಂದಾಗ್ತಿರೋ ವೈದ್ಯರು!
VIDEO | Anantnag: “I have not watched the video… We are Muslims, even if the storm comes we say ‘Allahu Akbar’,” says father of zipline operator Muzammil who was seen saying ‘Allahu Akbar’ in a video which was recorded during Pahalgam terror attack.
(Full video available on… pic.twitter.com/22uOZKFoj3
— Press Trust of India (@PTI_News) April 29, 2025
ರಿಷಿ ಭಟ್ ಆರೋಪವೇನು? ನನ್ನ ಮುಂದೆ ಒಂಬತ್ತು ಜನರು ಜಿಪ್‌ಲೈನ್ ಮಾಡಿದ್ದರು. ಆದರೆ ಆಪರೇಟರ್ ಒಂದು ಮಾತನ್ನೂ ಹೇಳಲಿಲ್ಲ. ನಾನು ಜಿಪ್‌ಲೈನ್ ಮಾಡುವಾಗ ಅವರು ʻಅಲ್ಲಾಹು ಅಕ್ಬರ್ʼ ಎಂದು ಕೂಗಿದ್ದರು. ಇದಾದ ಬಳಿಕ ಗುಂಡು ಹಾರಿಸಲಾಗಿತ್ತು ಎಂದಿದ್ದರು.
ಇದರ ನಡುವೆ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಜಿಪ್‌ಲೈನರ್‌ನ ಅಲ್ಲಾಹು ಅಕ್ಬರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಲವು ಜನರು ತುಂಬಾ ಕೋಮುವಾದಿಗಳಾಗಿದ್ದಾರೆ. ಹಿಂದೂಗಳು ʻಜೈ ಶ್ರೀ ರಾಮ್ʼ ಎಂದು ಹೇಳುವಂತೆ, ಮುಸ್ಲಿಮರು ʻಅಲ್ಲಾಹು ಅಕ್ಬರ್ʼಹೇಳುತ್ತಾರೆ ಮತ್ತು ನಾವು ಯಾವುದೇ ತೊಂದರೆಯಲ್ಲಿದ್ದಾಗ, ʻಅಲ್ಲಾಹು ಅಕ್ಬರ್ʼ ಎಂದು ಹೇಳುತ್ತೇವೆ ಎಂದಿದ್ದಾರೆ.
ರಿಷಿ ಭಟ್ ಜಿಪ್‌ಲೈನ್ ಮಾಡುವಾಗ ಮಾಡಿದ್ದ ಸೆಲ್ಫಿ ವೀಡಿಯೋದಲ್ಲಿ ʻಅಲ್ಲಾಹು ಅಕ್ಬರ್ʼ ಎಂದಿರುವುದು ಕೇಳಿಸಿದೆ. ಅಲ್ಲದೇ ಗುಂಡೇಟಿನ ಸದ್ದು ಕೇಳಿಸಿದ್ದು, ಜನ ಅಲ್ಲಿಂದ ಓಡುತ್ತಿರುವುದನ್ನು ನೋಡಬಹುದಾಗಿದೆ. ಅಲ್ಲದೇ ಓರ್ವ ವ್ಯಕ್ತಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದು ಸಹ ಸೆರೆಯಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಹೊಸ ಬಾಬ್ರಿ ಮಸೀದಿಗೆ ಪಾಕ್ ಸೈನಿಕರು ಮೊದಲ ಇಟ್ಟಿಗೆ ಇಡುವ ಕಾಲ ದೂರವಿಲ್ಲ: ನಾಲಿಗೆ ಹರಿಬಿಟ್ಟ ಪಾಕ್ ಸಂಸದೆ