ಮೊಬೈಲ್‌ನಲ್ಲಿ ಮಾತಾಡ್ತ ರೈಲ್ವೇ ಟ್ರ್ಯಾಕ್‌ ಮೇಲೆ ಹೋದ ಎಂಬಿಎ ವಿದ್ಯಾರ್ಥಿನಿ ರೈಲಿಗೆ ಬಲಿ

Public TV
1 Min Read
indian railways southern railway 1

ದಾವಣಗೆರೆ: ಯುವತಿಯೊಬ್ಬಳು ರೈಲ್ವೇ ಹಳಿ ದಾಟುತ್ತಿದ್ದಾಗ ರೈಲು (Train) ಡಿಕ್ಕಿಯಾಗಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಹರಿಹರ (Harihara) ನಿಲ್ದಾಣದಲ್ಲಿ ನಡೆದಿದೆ.

ಮೃತಳನ್ನು ಬಳ್ಳಾರಿ ಮೂಲದ ಶ್ರಾವಣಿ (23) ಎಂದು ಗುರುತಿಸಲಾಗಿದೆ. ಯುವತಿ ಮೊಬೈಲ್‍ನಲ್ಲಿ ಮಾತನಾಡುತ್ತಾ, ರೈಲು ಬರುವುದನ್ನು ಗಮನಿಸದೇ ರೈಲ್ವೇ ಹಳಿ ದಾಟಲು ಯತ್ನಿಸಿದ್ದಾಳೆ. ಈ ವೇಳೆ ರೈಲು ಆಕೆಗೆ ಡಿಕ್ಕಿಯಾಗಿದೆ. ಪರಿಣಾಮ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಇದನ್ನೂ ಓದಿ: ಸಂಧಾನಕ್ಕೆಂದು ಕರೆದು ದಂಪತಿ ಕತ್ತು ಸೀಳಿ ಬರ್ಬರ ಹತ್ಯೆ – 2 ವರ್ಷದ ಮಗುವಿನ ಎದುರೇ ಕೊಲೆ

ಶ್ರಾವಣಿ ಮೈಸೂರಿನಲ್ಲಿ (Mysuru) ಎಂಬಿಎ ಓದುತ್ತಿದ್ದಳು. ಹರಿಹರಕ್ಕೆ ಶುಭ ಕಾರ್ಯಕ್ಕೆ ಸಂಬಂಧಿಕರ ಮನೆಗೆ ಬಂದಿದ್ದಳು. ರಾತ್ರಿ ಮೈಸೂರಿಗೆ ಹೋಗಲು ರೈಲು ನಿಲ್ದಾಣಕ್ಕೆ ಬಂದು, ಹಳಿ ದಾಟುತ್ತಿರುವಾಗ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಹಾಸನ | ತಾಲೂಕು ಕಚೇರಿ ಸಿಬ್ಬಂದಿ ಅನುಮಾನಾಸ್ಪದ ಸಾವು – ಪತ್ನಿ, ಕುಟುಂಬಸ್ಥರ ವಿರುದ್ಧವೇ ಕೊಲೆ ಆರೋಪ

Share This Article