ಉಡುಪಿ: ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ಕೃತ್ಯ ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ (Sunil Kumar) ಆರೋಪಿಸಿದ್ದಾರೆ.
ವಿಧಾನಸೌಧದಲ್ಲೂ ಪಾಕ್ ಪರ ಘೋಷಣೆಯಾಯ್ತು. ಈಗ ಕ್ರಿಕೆಟ್ ಅಂಗಳದಲ್ಲೂ ಪಾಕ್ ಪ್ರೇಮ.
ಅದರೆ ಇಂಥ ದೇಶ ವಿರೋಧಿಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ. ಕ್ರಿಕೆಟ್ ಮೈದಾನದಲ್ಲಿ ಪಾಕ್ ಗೆ ಜೈ ಎಂದವರ ಕೃತ್ಯ ಖಂಡಿಸಿದ ಹಿಂದು ಯುವಕರಿಗೆ ಪೊಲೀಸ್ ಕಿರುಕುಳವನ್ನು ಸಮಾಜ ಖಂಡಿಸುತ್ತದೆ. 2/2@siddaramaiah @DrGparameshwar
— Sunil Kumar Karkala (@karkalasunil) April 30, 2025
ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಭಾರತದ ವಿರುದ್ಧ ಪಾಕಿಸ್ತಾನ ಯುದ್ಧದ ಬೆದರಿಕೆ ಹಾಕುತ್ತಿದೆ. ದೇಶದೊಳಗಿನ ಶತ್ರುಗಳು ಇದಕ್ಕಿಂತ ಹೆಚ್ಚು ಅಪಾಯಕಾರಿ. ಈ ದೇಶದ ಉಪ್ಪು ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಈ ಮನಃಸ್ಥಿತಿ ಬಾಹ್ಯ ಶತ್ರುಗಳಿಗಿಂತ ಕೆಟ್ಟದು ಎಂದು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈಕಾರ ಹಾಕೋರಿಗೆ ಚಪ್ಪಲಿಯಿಂದ ಹೊಡೆಯಿರಿ – ಯತ್ನಾಳ್
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತದ ವಿರುದ್ಧ ಪಾಕಿಸ್ತಾನ ಯುದ್ಧದ ಬೆದರಿಕೆ ಹಾಕುತ್ತಿದೆ. ಆದರೆ ದೇಶದೊಳಗಿನ ಶತ್ರುಗಳು ಇದಕ್ಕಿಂತ ಹೆಚ್ಚು ಅಪಾಯಕಾರಿ. ಈ ದೇಶದ ಉಪ್ಪು ತಿಂದು ಪಾಕಿಸ್ತಾನ ಜಿಂದಾಬಾದ್ ಎನ್ನುವ ಮನಃಸ್ಥಿತಿ ಬಾಹ್ಯ ಶತ್ರುಗಳಿಗಿಂತ ಕೆಟ್ಟದು
ಮಸೀದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಿಸಿದ್ದಾಯ್ತು, 1/2
— Sunil Kumar Karkala (@karkalasunil) April 30, 2025
ಮಸೀದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಿಸಿದ್ದಾಯ್ತು. ವಿಧಾನಸೌಧದಲ್ಲೂ ಪಾಕ್ ಪರ ಘೋಷಣೆಯಾಯ್ತು. ಈಗ ಕ್ರಿಕೆಟ್ ಅಂಗಳದಲ್ಲೂ ಪಾಕ್ ಪ್ರೇಮ. ಇಂತಹ ದೇಶ ವಿರೋಧಿಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಖಂಡಿಸಿದ್ದಾರೆ.
ಕ್ರಿಕೆಟ್ ಮೈದಾನದಲ್ಲಿ ಪಾಕ್‌ಗೆ ಜೈ ಎಂದವರ ಕೃತ್ಯ ಖಂಡಿಸಲಾಗಿದೆ. ಖಂಡಿಸಿದ ಹಿಂದೂ ಯುವಕರಿಗೆ ಪೊಲೀಸ್ ಕಿರುಕುಳವನ್ನು ಸಮಾಜ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಕಾನ್ಸ್‌ಟೇಬಲ್ ತಾಯಿ ಗಡೀಪಾರಿಲ್ಲ