ಬೀದರ್: ಸಂಧಾನಕ್ಕೆಂದು ಕರೆದು ದಂಪತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಜಾಫರವಾಡಿ ಗ್ರಾಮದ ಬಳಿ ನಡೆದಿದೆ.
ಜಾಫರವಾಡಿ ಗ್ರಾಮದ ವ್ಯಕ್ತಿ ರಾಜು ಕೊಳಸುರೆ (28) ಹಾಗೂ ಆತನ ಪತ್ನಿ ಶಾರಿಕಾ ಕೊಳಸುರೆ (24) ಮೃತ ದಂಪತಿ. ಗಂಡನ ಅನೈತಿಕ ಸಂಬಂಧದ ಸಂಧಾನಕ್ಕೆಂದು ಬಂದಾಗ ಗರ್ಭಿಣಿ ಪತ್ನಿ ಹೆಣವಾಗಿದ್ದಾಳೆ. 2 ವರ್ಷದ ಮಗುವಿನ ಎದುರೇ ದಂಪತಿಯನ್ನ ಆರೋಪಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಿಸಿಲಿನ ತಾಪ ಹೆಚ್ಚಳ – ಕೆರೆಯಲ್ಲಿ ಕೋತಿಗಳ ನೀರಾಟ
ಅದೇ ಗ್ರಾಮದ ಮಹಿಳೆಯೊಂದಿಗೆ ರಾಜು ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಯುವತಿ ಸಂಬಂಧಿಕರಿಂದ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ದಂಪತಿ ಕೊಲೆಯಾದ ಬಳಿಕ 2 ವರ್ಷದ ಮಗು ಅನಾಥವಾಗಿದೆ. ಕೆಲ ತಿಂಗಳಿಂದ ಗ್ರಾಮ ತೊರೆದು ದಂಪತಿ ಮುಂಬೈ ಪಟ್ಟಣದಲ್ಲಿ ವಾಸವಿದ್ದರು. ಮುಂಬೈ ಪಟ್ಟಣದಿಂದ ಸಂಧಾನಕ್ಕೆಂದು ಕರೆದು ಹತ್ಯೆ ಮಾಡಲಾಗಿದೆ. ಗ್ರಾಮದ ಹೊರವಲಯದಲ್ಲಿ ಇಬ್ಬರ ಕತ್ತು ಸೀಳಿ, ಬರ್ಬರವಾಗಿ ಹತ್ಯೆಗೈದ ಯುವತಿ ಸಂಬಂಧಿಕರು ಪೊಲೀಸರಿಗೆ ಶರಣಾಗಿದ್ದಾರೆ.
ಜಾಫರವಾಡಿ ಗ್ರಾಮದ ದತ್ತಾತ್ರೇಯ ಹಾಗೂ ತುಕಾರಾಮ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ದತ್ತಾತ್ರೇಯನ ತಂಗಿ ಜೊತೆ ಅನೈತಿಕ ಸಂಬಂಧ ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆ ಸಂಬಂಧ ಮಂಠಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಎರಡನೇ ವಿಮಾನ ನಿಲ್ದಾಣ – ಶಾಸಕ ಸ್ಥಾನ ಪಣಕ್ಕಿಟ್ಟು ರೈತರ ಪರ ನಿಲ್ತೀನಿ: ಎನ್.ಶ್ರೀನಿವಾಸ್