– ಲಷ್ಕರ್ ಎ ತೈಬಾ ಜೊತೆಗೂ ಗುರುತಿಸಿಕೊಂಡಿದ್ದ
– ಸ್ಥಳೀಯರಲ್ಲದವರನ್ನ ಕೊಲ್ಲಲೆಂದೇ ಭಾರತಕ್ಕೆ ಬಂದಿದ್ದ ಮೂಸಾ
ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಪೈಶಾಚಿಕ ಕೃತ್ಯದ (Pahalgam Terrorist Attack) ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅನೇಕ ರಹಸ್ಯಗಳನ್ನು ಬಯಲಿಗೆಳೆಯುತ್ತಿದೆ. ಈ ನಡುವೆ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಪಾಕಿಸ್ತಾನಿ ಭಯೋತ್ಪಾದಕ ಹಾಶೀಮ್ ಮೂಸಾ (Hashim Musa), ಪಾಕ್‌ನ ವಿಶೇಷ ಪಡೆಗಳಲ್ಲಿ ಪ್ಯಾರಾ-ಕಮಾಂಡೋ ಆಗಿದ್ದ ಅನ್ನೋ ಸ್ಫೋಟಕ ಮಾಹಿತಿಯನ್ನ ಎನ್‌ಐಎ ಬಹಿರಂಗಪಡಿಸಿದೆ.
ಪಾಕಿಸ್ತಾನಿ ದಾಳಿಕೋರರಿಗೆ ಸಹಾಯ ಮಾಡಿದ ಶಂಕಿತ 15 ಕಾಶ್ಮೀರಿ ಭೂಗತ ಕಾರ್ಮಿಕರ (OGWs) ವಿಚಾರಣೆಯ ಸಮಯದಲ್ಲಿ ಮೂಸಾನ ಮಿಲಿಟರಿ ಹಿನ್ನೆಲೆ ಬಹಿರಂಗವಾಗಿದೆ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ
ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಉಗ್ರ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಈ ಹಿಂದೆ ಕಾಶ್ಮೀರದಲ್ಲಿ ನಡೆದ ದಾಳಿಗಳಲ್ಲೂ ISI ಕೈವಾಡವಿತ್ತು ಎಂದಿದ್ದಾರೆ. ಸದ್ಯ ದಾಳಿಯ ಸ್ಥಳವನ್ನು ಗುರುತಿಸಲಾಗಿದೆ. ಬೈಸರನ್ ಸುತ್ತಮುತ್ತಲಿನ ಕಾಡುಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಪ್ಯಾರಾ ಕಮಾಂಡೊ (Pakistani Para Commando) ಆಗಿದ್ದ ಮೂಶಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿದೆ ಎಂದು ತನಿಖಾ ತಂಡದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಭಾರತ – ಪಾಕ್ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ
ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನು. ಆತನನ್ನು ಪಾಕಿಸ್ತಾನದ ವಿಶೇಷ ಪಡೆಗಳು LeTಗೆ ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ. SSG ಕಮಾಂಡೋಗಳು ಯುದ್ಧದಲ್ಲಿ ಪರಿಣತಿ ಹೊಂದಿದವರು. ಅವರು ಗುಪ್ತ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ತರಬೇತಿ ಪಡೆದಿದ್ದಾರೆ. ಅವರಿಗೆ ದೈಹಿಕ ಮತ್ತು ಮಾನಸಿಕ ತರಬೇತಿ ನೀಡಲಾಗುತ್ತದೆ. ಅಲ್ಲದೇ, ದಾಳಿ ನಡೆಸುವ ತಂತ್ರಗಾರಿಕೆ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. SSG ಕಮಾಂಡೋಗಳು ಅತ್ಯಾಧುನಿಕ ಆಯುಧಗಳನ್ನು ಬಳಸಲು ಸಮರ್ಥರು. ಅವರು ಯಾವುದೇ ಆಯುಧಗಳಿಲ್ಲದೆ ಹೊಡೆದಾಟ ನಡೆಸಿ ಜಯಿಸುವಲ್ಲಿಯೂ ಪರಿಣತಿ ಹೊಂದಿದ್ದಾರೆ.
ಜೊತೆಗೆ ಈ ದಾಳಿಯಲ್ಲಿ ಪಾಕಿಸ್ತಾನ ಸೇನೆ ಮತ್ತು ಐಎಸ್‌ಐ ನೇರವಾಗಿ ಭಾಗಿಯಾಗಿರುವುದು ಕಂಡುಬಂದಿದೆ. ಅಲ್ಲದೇ, 2024ರ ಅಕ್ಟೋಬರ್‌ನಲ್ಲಿ ಗಂಡರ್‌ಬಾಲ್‌ನ ಗಗಂಗಿರ್‌ನಲ್ಲಿ ಆರು ಮಂದಿ ಸ್ಥಳೀಯರಲ್ಲದವರು ಹಾಗೂ ಓರ್ವ ವೈದ್ಯನನ್ನ ಹತ್ಯೆ ಮಾಡಲಾಗಿತ್ತು. ನಂತರ ಬಾರಾಮುಲ್ಲಾದ ಬುಟಾ ಪತ್ರಿ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೇನಾ ಸಿಬ್ಬಂದಿಯನ್ನ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ದಾಳಿಯೂ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅನೇಕ ಕೃತ್ಯಗಳಲ್ಲಿ ಮೂಸಾನ ಕೈವಾಡವಿದೆ ಎಂಬುದು ಎನ್‌ಐಎ ತನಿಖೆಯಲ್ಲಿ ತಿಳಿದುಬಂದಿದೆ.
ದಟ್ಟ ಕಾಡಿನಲ್ಲಿ 22 ಗಂಟೆ ಕಾಲ್ನಡಿಗೆಯಲ್ಲೇ ಬಂದಿದ್ದ ಉಗ್ರರು
ಮೂಲಗಳ ಪ್ರಕಾರ, ಶಸ್ತ್ರಸಜ್ಜಿತ ಭಯೋತ್ಪಾದಕರು ಬೈಸರನ್ (Baisaran) ಕಣಿವೆ ಪ್ರದೇಶಕ್ಕೆ ತಲುಪಲು ದಟ್ಟ ಕಾಡಿನೊಳಗೆ ಸುಮಾರು 20-22 ಗಂಟೆಗಳ ಕಾಲ ನಡೆದುಕೊಂಡೇ ಬಂದಿದ್ದರು. ದಾಳಿಯಲ್ಲಿ AK-47 ಮತ್ತು ಅಮೆರಿಕ ನಿರ್ಮಿತ M4 ರೈಫಲ್‌ಗಳನ್ನ ಬಳಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Pahalgam Attack | AK-47, M4 ರೈಫಲ್ ಹೊತ್ತು, ದಟ್ಟ ಕಾಡಿನಲ್ಲಿ 22 ಗಂಟೆ ನಡೆದುಕೊಂಡೇ ಬಂದಿದ್ದ ಉಗ್ರರು