– ಆಸ್ಪತ್ರೆಯ ಮುಂಭಾಗ ಬಾಲಕಿ ಮೃತದೇಹವಿಟ್ಟು ಪ್ರತಿಭಟನೆ
ಹಾವೇರಿ: ಕೈ ಮೇಲೆ ಗುಳ್ಳೆ ಎದ್ದಿದೆ ಎಂದು ಆಸ್ಪತ್ರೆಗೆ ಬಂದ ಬಾಲಕಿ ವೈದ್ಯರು ನೀಡಿದ ಇಂಜೆಕ್ಷನ್‌ನಿಂದ ಮೃತಪಟ್ಟಿದ್ದಾಳೆ ಎಂದು ಆರೋಪಿ ಬಾಲಕಿ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ಮಾಡಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.
ಹಾವೇರಿ ಜಿಲ್ಲೆಯ ಬ್ಯಾಡಗಿ (Byadgi) ತಾಲೂಕು ಹೆಡ್ಡಿಗೊಂಡ ಗ್ರಾಮದ ವಂದನಾ ಶಿವಪ್ಪ ತುಪ್ಪದ(17) ಮೃತ ಬಾಲಕಿ. ಇದನ್ನೂ ಓದಿ: Pegasus Case | ದೇಶ ಸ್ಪೈವೇರ್ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ: ಸುಪ್ರೀಂ ಕೋರ್ಟ್
ವಂದನಾ ಕೈಯ ಮಣಿಕಟ್ಟಿನ ಭಾಗದಲ್ಲಿ ಗುಳ್ಳೆ ಎದ್ದಿದೆ ಎಂದು ನಗರದ ಖಾಸಗಿ ಆಸ್ಪತ್ರೆಗೆ ಆಕೆಯನ್ನು ಕುಟುಂಬಸ್ಥರು ಕರೆತಂದಿದ್ದರು. ಇದಕ್ಕೆ ಸಣ್ಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು. ಬಳಿಕ ಸಲೈನ್ ಹಚ್ಚಿ ಅದರಲ್ಲೇ ಇಂಜೆಕ್ಷನ್ ನೀಡಿದ್ದರು. ಇಂಜೆಕ್ಷನ್ ನೀಡಿದ ಕೂಡಲೇ ಬಾಲಕಿಯ ದೇಹದಲ್ಲಿ ರಿಯಾಕ್ಷನ್ ಆಗಿದ್ದು, ಮೈ ಕೆರೆತ, ಬಾಯಲ್ಲಿ ನೊರೆ ಬಂದು ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಭಯೋತ್ಪಾದಕರು ಎಂದಿಗೂ ಕಾಶ್ಮೀರದ ಪ್ರಗತಿ ನೋಡಲು ಬಯಸುವುದಿಲ್ಲ: ಸುನೀಲ್ ಶೆಟ್ಟಿ
ಬಾಲಕಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರ ಆರೋಪಿದ್ದಾರೆ. ಇತ್ತ ಬಾಲಕಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ವೈದ್ಯರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು
ವಿಷಯ ತಿಳಿಯುತ್ತಿದ್ದಂತೆ ತಾಲೂಕು ವೈದ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಆಸ್ಪತ್ರೆಗೆ ದೌಡಾಯಿಸಿದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಾವಿನ ಕುರಿತು ಸಮಗ್ರ ಮಾಹಿತಿ ಪಡೆದಿದ್ದು, ಆಸ್ಪತ್ರೆಯನ್ನು ಸದ್ಯಕ್ಕೆ ಸೀಜ್ ಮಾಡಲಾಗುತ್ತದೆ. ಸಮಗ್ರ ವರದಿ ನಂತರ ಹಿರಿಯ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಮಗುವಿನ ಕಾಲಿಗೆ ಪೆಟ್ಟು – ಮಗುಗೆ ಏನಾಗುತ್ತೋ ಅನ್ನೋ ಆತಂಕದಲ್ಲಿ 12ರ ಬಾಲಕ ಆತ್ಮಹತ್ಯೆ
ಬಾಲಕಿಯ ಕುಟುಂಬಸ್ಥರು ಆಸ್ಪತ್ರೆಯ ಮುಂಭಾಗದಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದ್ದು, ಆಸ್ಪತ್ರೆಯ ಗಾಜು ಒಡೆದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ನಿರೀಕ್ಷಕ ಎಲ್.ಎಸ್.ಶಿರಕೋಳ ಹಾಗೂ ನಗರ ಸಿಪಿಐ ಮೋಲಿಲಾಲ್ ಪವಾರ ಭೇಟಿ ನೀಡಿದರು.