ನವದೆಹಲಿ: ಕೇಂದ್ರ ಸರ್ಕಾರವು ಪಾಕಿಸ್ತಾನದ 16 ನ್ಯೂಸ್ ಚಾನಲ್ ಸೇರಿ ಯುಟ್ಯೂಬ್ ಬ್ಲಾಕ್ ಮಾಡಿದ ಬೆನ್ನಲ್ಲೇ ಇಂದು ಪಾಕ್ ರಕ್ಷಣಾ ಸಚಿವ (Pakistan Defence Minister) ಖವಾಜಾ ಆಸಿಫ್ (Khawaja Asif) ಅವರ ಎಕ್ಸ್ ಖಾತೆಯನ್ನು ನಿರ್ಬಂಧಿಸಿದೆ.
ಖವಾಜಾ ಆಸಿಫ್ ಖಾಸಗಿ ಮಾಧ್ಯಮವೊಂದರಲ್ಲಿ ಸಂದರ್ಶನದ ವೇಳೆ ಪಾಕಿಸ್ತಾನವು ಜಾಗತಿಕ ಭಯೋತ್ಪಾದನೆಗೆ ಬೆಂಬಲ ನೀಡುತ್ತದೆ ಎಂದು ಬಹಿರಂಗ ಹೇಳಿಕೆ ನೀಡಿದ ನಂತರ ಭಾರತದಲ್ಲಿ ಅವರ ಎಕ್ಸ್ ಖಾತೆಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ: ಬಾಂಗ್ಲಾ ಅಕ್ರಮ ವಲಸಿಗರ ವಿರುದ್ಧ ಬೃಹತ್ ಕಾರ್ಯಾಚರಣೆ – 74 ಬುಲ್ಡೋಜರ್, 200 ಟ್ರಕ್, 1800 ಕಾರ್ಮಿಕರು, 3000 ಪೊಲೀಸರ ಬಳಕೆ
ಪಾಕ್‌ನ 16 ಯೂಟ್ಯೂಬ್ ಚಾನಲ್ ಬ್ಯಾನ್
ಪಹಲ್ಗಾಮ್‌ನ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತದ ವಿರುದ್ಧ ಪ್ರಚೋದನಕಾರಿ ಹಾಗೂ ನಕಲಿ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದ ಪಾಕಿಸ್ತಾನದ ನ್ಯೂಸ್ ಚಾನೆಲ್ ಸೇರಿ 16 ಯೂಟ್ಯೂಬ್, 29 ಎಕ್ಸ್ ಖಾತೆಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ಸೋಮವಾರ ಬ್ಯಾನ್ ಮಾಡಿದೆ. ಇದನ್ನೂ ಓದಿ: Pahalgam Terrorist Attack | ನಾಳೆ ಮೋದಿ ನೇತೃತ್ವದಲ್ಲಿ 2ನೇ ಸುತ್ತಿನ ಹೈವೋಲ್ಟೇಜ್ ಸಭೆ
ಡಾನ್, ಸಮಾ ಟಿವಿ, ಎಆರ್‌ವೈ ನ್ಯೂಸ್, ಬೋಲ್ ನ್ಯೂಸ್, ರಫ್ತಾರ್, ಜಿಯೋ ನ್ಯೂಸ್ ಮತ್ತು ಸುನೋ ನ್ಯೂಸ್ ಸುದ್ದಿ ವಾಹಿನಿಗಳನ್ನ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಪತ್ರಕರ್ತರಾದ ಇರ್ಷಾದ್ ಭಟ್ಟಿ, ಅಸ್ಮಾ ಶಿರಾಜಿ, ಉಮರ್ ಚೀಮಾ ಮತ್ತು ಮುನೀಬ್ ಫಾರೂಕ್ ಅವರ ಯೂಟ್ಯೂಬ್ ಚಾನೆಲ್‌ಗಳನ್ನು ಸಹ ನಿಷೇಧಿಸಲಾಗಿದೆ. ದಿ ಪಾಕಿಸ್ತಾನ್ ರೆಫರೆನ್ಸ್, ಸಮಾ ಸ್ಪೋರ್ಟ್ಸ್, ಉಜೈರ್ ಕ್ರಿಕೆಟ್ ಮತ್ತು ರಾಜಿ ನಾಮಾ ಸೇರಿದಂತೆ ಇತರ ಖಾತೆಗಳನ್ನು ಕೇಂದ್ರ ಗೃಹಸಚಿವಾಲಯದ ಶಿಫಾರಸ್ಸಿನ ಮೇಲೆ ನಿರ್ಬಂಧಿಸಿತ್ತು. ಇದನ್ನೂ ಓದಿ: ಚೀನಾದ ಹೋಟೆಲ್‌ನಲ್ಲಿ ಭಾರೀ ಬೆಂಕಿ – 22 ಮಂದಿ ಸಾವು, ಮೂವರಿಗೆ ಗಾಯ
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಭಾರತ ಹಾಗೂ ಪಾಕ್ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ದಾಳಿಯಲ್ಲಿ ಪಾಕಿಸ್ತಾನವು ಪ್ರಮುಖ ಪಾತ್ರವಹಿಸಿದೆ ಎಂದು ಶಂಕಿಸಿ ಭಾರತ ಪಾಕ್ ವಿರುದ್ಧ ತೀವ್ರ ಕ್ರಮ ಕೈಗೊಂಡಿದೆ. ನವದೆಹಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿಟ್ಟು ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಪಾಕ್ ಕೂಡಾ ಶಿಮ್ಲಾ ಗಡಿ ಒಪ್ಪಂದ ಸೇರಿ ಎಲ್ಲಾ ರೀತಿಯ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ.