ಇಸ್ಲಾಮಾಬಾದ್ ಕಾಲೋನಿ ಹೆಸರು ಬದಲಾವಣೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Public TV
1 Min Read
Kalaburagi Protest

ಕಲಬುರಗಿ: ಇಸ್ಲಾಮಾಬಾದ್ ಕಾಲೋನಿ (Islamabad Colony) ಹೆಸರು ಬದಲಾವಣೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆಯು ಕಲಬುರಗಿ (Kalaburagi) ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ಮಾಡಿದೆ.

ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಂದು ಕಾಲೋನಿಗೆ ಇಸ್ಲಾಮಾಬಾದ್ ಎಂಬ ಹೆಸರಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಆಗಿರುವ ಹಿನ್ನಲೆ ನಮ್ಮ ನಗರದಲ್ಲಿ ಅಂತಾ ಹೆಸರು ಬೇಡ ಎಂದು ಹಿಂದೂ ಜಾಗೃತಿ ಸೇನೆಯು ಘೋಷಣೆ ಕೂಗಿ ಪ್ರತಿಭಟನೆ ಮಾಡಿದರು. ಇದನ್ನೂ ಓದಿ: ಧರ್ಮ ನೋಡಿ ಹೊಡೆದಿಲ್ಲ ಎಂದು ನಾನು ಹೇಳಿಯೇ ಇಲ್ಲ: ಆರ್‌ಬಿ ತಿಮ್ಮಾಪುರ ಯೂ ಟರ್ನ್

ಪ್ರತಿಭಟನಾಕಾರರು ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದು, ತಕ್ಷಣವೇ ಹೆಸರು ಬದಲಾವಣೆ ಮಾಡುವಂತೆ ಒತ್ತಾಯಿಸಿದರು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – ಕೇಂದ್ರದ ನಿರ್ಧಾರಕ್ಕೆ ನಮ್ಮ ಸಹಕಾರವಿದೆ: ದೇವೇಗೌಡ

ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ (Pahalgam Terror Attack) ನಡೆಸಿದ್ದು, ಒಬ್ಬ ವಿದೇಶಿ ಪ್ರವಾಸಿಗ ಸೇರಿ 26 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ದಾಳಿಯ ಹಿಂದೆ ಪಾಕಿಸ್ತಾನದ (Pakistan) ಕೈವಾಡವಿದೆ ಎಂಬ ಶಂಕೆ ವ್ಯಕ್ತವಾದ ಬೆನ್ನಲ್ಲೇ ಕಲಬುರಗಿಯ ಕಾಲೋನಿಯೊಂದಕ್ಕೆ ಇಸ್ಲಾಮಾಬಾದ್ ಎಂದಿರುವ ಹೆಸರನ್ನು ಬದಲಾಯಿಸಿಬೇಕೆಂದು ಹಿಂದೂ ಜಾಗೃತಿ ಸೇನೆಯು ಪಟ್ಟುಹಿಡಿದಿದೆ.

Share This Article