‘ಕೆಜಿಎಫ್ 2′ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಮತ್ತು ಜ್ಯೂ.ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ರಿಲೀಸ್ ಆಗೋದು ಯಾವಾಗ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಮಾಡೋದಾಗಿ ಜ್ಯೂ.ಎನ್‌ಟಿಆರ್ ತಿಳಿಸಿದ್ದಾರೆ. ಇದನ್ನೂ ಓದಿ:ಹೊಸ ಚಿತ್ರಕ್ಕಾಗಿ ಕುಮಟಾದಲ್ಲಿ ಬೀಡುಬಿಟ್ಟ ಜ್ಯೂ.ಎನ್‌ಟಿಆರ್, ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ಜೊತೆಗಿನ ತಾರಕ್ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಂದಿನ ವರ್ಷ ಜೂನ್ 25ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಜ್ಯೂ.ಎನ್‌ಟಿಆರ್ (Jr.NTR) ಎಕ್ಸ್ ಖಾತೆಯಲ್ಲಿ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಯಶ್ ತಾಯಿ ನಿರ್ಮಾಣದ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ನ್ಯೂಸ್
See you in cinemas on 25 June 2026…. #NTRNeel pic.twitter.com/SkMhyaF71c
— Jr NTR (@tarak9999) April 29, 2025
ಈ ಸಿನಿಮಾಗೆ ತಾತ್ಕಾಲಿಕವಾಗಿ #NTRNeel ಎಂದು ಟೈಟಲ್ ಇಡಲಾಗಿದೆ. ಸದ್ಯ ಈ ಚಿತ್ರದ ಶೂಟಿಂಗ್ ಕರ್ನಾಟಕದ ಕುಮಟಾದಲ್ಲಿ ನಡೆಯುತ್ತಿದೆ. ಅದಕ್ಕಾಗಿ ಚಿತ್ರತಂಡದ ಜೊತೆ ಜ್ಯೂ.ಎನ್‌ಟಿಆರ್ ಕುಮಟಾದಲ್ಲಿ ತಂಗಿದ್ದಾರೆ.
ಅಂದಹಾಗೆ, ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ‘ಜನ ನಾಯಗನ್’ ಎದುರು 2026ರ ಸಂಕ್ರಾಂತಿಯಂದು ತಾರಕ್ ಸಿನಿಮಾ ಕೂಡ ಬರಲಿದೆ ಎನ್ನಲಾಗಿತ್ತು. ಈ ಚಿತ್ರದ ಮುಂದೆ ಕ್ಲ್ಯಾಶ್ ಆಗಲಿದೆ ಎಂದು ವರದಿ ಆಗಿತ್ತು. ಇದೀಗ ಜ್ಯೂ.ಎನ್‌ಟಿಆರ್ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.