– ಭಯೋತ್ಪಾದನೆಗೆ ಧರ್ಮ, ದೇಶ ಇಲ್ಲ ಅನ್ನೋ ರಾಜಕಾರಣಿಗಳ ಬಾಯಿಗೆ ಬೂಟು ಇಡಬೇಕು: ಮುತಾಲಿಕ್ ವಾಗ್ದಾಳಿ
ಬೆಂಗಳೂರು: ಪಹಲ್ಗಾಮ್‌ಗೆ ವಿಶ್ರಾಂತಿಗಾಗಿ ಜಮೀರ್, ಖಾದರ್ ಜೊತೆ ಸಿದ್ದರಾಮಯ್ಯ ಹೋಗಿದ್ರೆ, ಅವರಿಬ್ಬರನ್ನೂ ಬಿಟ್ಟು ಉಗ್ರರು ನಿಮಗೇ ಗುಂಡು ಹೊಡೆಯುತ್ತಿದ್ದರು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಸಿಎಂ ಕಾಲೆಳೆದಿದ್ದಾರೆ.
ರಾಮಮಂದಿರ ಮುಂಭಾಗದಿಂದ ನಡೆದ ಶೋಭಯಾತ್ರೆಯಲ್ಲಿ ಮಾತನಾಡಿದ ಮುತಾಲಿಕ್, ಸ್ವಲ್ಪ ರೆಸ್ಟ್ ಮಾಡೋಣ ಅಂತ ಜಮೀರ್, ಯುಟಿ ಖಾದರ್ ಜೊತೆ ಸಿದ್ದರಾಮಯ್ಯ ಪಹಲ್ಗಾಮ್‌ಗೆ ಹೋಗಿದ್ರೆ, ಮೊದಲು ಜಮೀರ್ ಕೇಳಿ ಬಿಟ್ಟು ಬಿಡುತ್ತಿದ್ದರು. ಬಳಿಕ ಯು.ಟಿ ಖಾದರ್ ಕೇಳಿ ಮುಸ್ಲಿಂ ಅಂತ ಅವರನ್ನೂ ಬಿಡುತ್ತಿದ್ದರು. ಆದರೆ ನಿಮ್ಮನ್ನ ಕೇಳಿದಾಗ ಸಿದ್ದರಾಮಯ್ಯ ಅಂದಿದ್ರೆ 10 ಗುಂಡು ಹೊಡೆಯುತ್ತಿದ್ರು ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಯುದ್ಧ ಕಾರ್ಮೋಡ – ಭಾರತೀಯ ಸೈನಿಕರ ಯಶಸ್ಸಿಗಾಗಿ ಪರಶುರಾಮನ ಕೊಡಲಿಯಿಟ್ಟು ಮಹಾಯಾಗ
ನೀವು ಎಷ್ಟೇ ಮಸೀದಿ ಕಟ್ಟಿ, ಹಜ್ ಯಾತ್ರೆಗೆ ಕಳಿಸಿದ್ರೂ ಹಿಂದೂ ಎನ್ನುವ ಕಾರಣಕ್ಕೆ ನಿಮಗೆ ಗುಂಡಿಕ್ಕುತ್ತಿದ್ರು. ಸೆಕ್ಯುರಿಟಿ ಲ್ಯಾಪ್ಸ್ ಬಗ್ಗೆ ಮಾತನಾಡುತ್ತೀರಿ. ಮುಂದೇನು. ಹೀಗೆ ಮಾತನಾಡುತ್ತಲೇ ಇರುತ್ತೀರಾ? ಮುಸ್ಲಿಮರಿಗಾಗಿ ಮೋದಿಯನ್ನ ಬೈಯುತ್ತಲೇ ಇರುತ್ತೀರಾ? ಕೇಂದ್ರ ಜೊತೆ ಇರ್ತಿವಿ ಅನ್ನೋದು ಬಿಟ್ಟು ಬೈಯುತ್ತಲೇ ಇದ್ದಾರೆ. ಪಾಕಿಸ್ತಾನ ನಿರ್ಮಾಣ ಮಾಡಿದ್ದು ಕಾಂಗ್ರೆಸ್. ದೇಶದಲ್ಲಿ ಭಯೋತ್ಪಾದನೆ ಹುಟ್ಟು ಹಾಕಿದ್ದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶಕ್ಕೆ ಸ್ವಾತಂತ್ರ‍್ಯ ಬಂದು 78 ವರ್ಷ ಆದ್ರೂ ಹಿಂದೂ ಎಂಬ ವ್ಯಕ್ತಿಗೆ ಅಪಮಾನ, ಅಪ್ರಚಾರ ಆಗುತ್ತಲೇ ಇದೆ. ನಮ್ಮ ಭೂಮಿಯಲ್ಲೇ ನಮಗೆ ಅವಮಾನ. ಇದಕ್ಕೆ ಕಾರಣ ನಾವೇ. ನಾವೇ ದುರ್ಬಲರು, ಅಸಂಘಟಿತವಾಗಿದ್ದೇವೆ, ಹೇಡಿಗಳಾಗಿದ್ದೇವೆ. ಧೈರ್ಯ, ಸ್ಥೈರ್ಯ ಬರಬೇಕು ಅನ್ನೋದಕ್ಕೆ ಈ ಕಾರ್ಯಕ್ರಮ. ಸ್ವಾತಂತ್ರ‍್ಯ ಮುಂಚೆ ಬ್ರಿಟಿಷರೇ ಭಾರತ ಬಿಟ್ಟು ಹೋಗಿ ಅನ್ನೋ ಘೋಷಣೆ ಇತ್ತು. ಈಗ ನಾವು ಭಾರತ ಅಪಾಯದಲ್ಲಿದೆ. ಹಿಂದೂ ಅಪಾಯದಲ್ಲಿದ್ದಾನೆ, ಹಿಂದೂ ಧರ್ಮ ಅಪಾಯದಲ್ಲಿದೆ ಅಂತ ಘೋಷಣೆಯೊಂದಿಗೆ ಜೀವಿಸಬೇಕಿದೆ. ದೇಶ, ಧರ್ಮ ಉಳಿಸಬೇಕಿದೆ. ಎಷ್ಟೋ ಧರ್ಮ ಅವಹೇಳನ, ಎಷ್ಟೋ ಭೂಮಿ ಕಳೆದುಕೊಂಡಿದ್ದೇವೆ. ಅವಲೋಕನ ಮಾಡಿಕೊಳ್ಳಬೇಕಿದೆ. ಇರಾನ್, ಇರಾಕ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಇವೆಲ್ಲವು ನಮ್ಮವು. ಎಲ್ಲವನ್ನ ಕಳೆದುಕೊಂಡಿದ್ದೇವೆ ಎಂದು ಬೇಸರಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ಅಟ್ಟಹಾಸದ ಬಳಿಕ ಪಾಕ್ ಪ್ರಜೆಗಳ ಗಡೀಪಾರು – 55,000 ಮಂದಿಗಿಲ್ಲ ಗಡೀಪಾರಿನ ಆತಂಕ!
ಯಾರೋ ಮಿಲ್ಟ್ರಿ ಪೊಲೀಸ್, ರಾಜಕಾರಣಿಗಳು ರಕ್ಷಣೆ ಮಾಡ್ತಾರೆ ಅನ್ನೋದನ್ನ ಬಿಟ್ಟು ದೇಶಕ್ಕಾಗಿ ಕೆಲಸ ಮಾಡಬೇಕಿದೆ. ದೇಶ ಇದ್ರೆ ನಾನು, ನನ್ನ ಹೆಂಡ್ತಿ, ಮಕ್ಕಳು, ವ್ಯಾಪಾರ ಎಲ್ಲಾವು ಉಳಿಯುತ್ತೆ. ದೇಶ ಮೊದಲು ಅನ್ನೋ ಸಂಕಲ್ಪ ಮಾಡಲೇಬೇಕು. ಇಲ್ಲದಿದ್ದರೆ ಇರಾನ್, ಇರಾಕ್, ಪಾಕಿಸ್ತಾನದ ಪರಿಸ್ಥಿತಿ ಬರಲಿದೆ. ಪೆಹಲ್ಗಾಮ್ ಘಟನೆ ನೆನಪು ಮಾಡಿಕೊಳ್ಳೋಣ. ಇದನ್ನೆಲ್ಲ ಮಾಡಿದ್ದು ಇಸ್ಲಾಮಿಕ್ ಟೆರರಿಸಮ್. ಭಯೋತ್ಪಾದನೆಗೆ ಧರ್ಮ ಇಲ್ಲ ದೇಶ ಇಲ್ಲ ಅನ್ನೋ ರಾಜಕಾರಣಿಗಳ ಬಾಯಗೆ ಬೂಟು ಇಡಬೇಕು. ಅಲ್ಲೇ ಇದ್ದ ಮುಸ್ಲಿಂ ವ್ಯಾಪಾರಿಗಳಿಗೆ ಏನು ಮಾಡಿಲ್ಲ. ಧರ್ಮ ಕೇಳಿ ಹೊಡೆದಿದ್ದಾರೆ. ರಾಜಕಾರಣಿಗಳದ್ದು ಬಾಯಲ್ಲ ಬಚ್ಚಲು. ಮುಖ್ಯಮಂತ್ರಿಯಿಂದ ಹಿಡಿದು ಬೇರೆ ಬೇರೆ ನಾಯಕರು ಏನೇನೋ ಮಾತಾನಾಡುತ್ತಿದ್ದಾರೆ. 27 ಅಮಾಯಕರು ಮುಸ್ಲಿಮರ ಬೈಲಿಲ್ಲ. ರಾಜಕಾರಣಿಗಳ ಬೈದಿಲ್ಲ. ಪ್ರವಾಸಕ್ಕೆ ಹೋದವರು ಸತ್ತರು. ರಾಜಕಾರಣಿಗಳು ಸತ್ತವರ ಮನೆಗೆ ಹೋಗಿ ಬನ್ನಿ ಎಂದು ಕಿಡಿಕಾರಿದ್ದಾರೆ.
ನಾವು ಪೂಜೆ ಮಾಡುವ ಗೋಮಾತೆಯನ್ನ ಇವತ್ತಿಗೂ ಭಕ್ಷಿಸುತ್ತಿದ್ದಾರೆ. ನಾವು ಪೆಹಲ್ಗಾಮ್‌ನಲ್ಲಿ ಅವರು ಮಾಡಿದ ಹಾಗೇ, ಇಲ್ಲಿನ ವ್ಯಾಪಾರದಲ್ಲಿ ಹೆಸರು ಕೇಳಿ ವ್ಯವಹಾರ ಮಾಡಬೇಕು ಎಂದು ಕರೆಕೊಟ್ಟಿದ್ದಾರೆ.