– ಪಾಕ್ ಬಳಿಯೂ ನ್ಯೂಕ್ಲಿಯರ್ ಇದೆ, ವಿಶ್ವಾಸಕ್ಕೆ ತೆಗೆದುಕೊಂಡು ಯುದ್ಧ ಮಾಡಲಿ ಎಂದ ಸಚಿವ
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ನಾವಿದ್ದೇವೆ, ಎಲ್ಲ ರಾಜಕೀಯ ಪಕ್ಷಗಳೂ ಇವೆ. ಪಾಕಿಸ್ತಾನದ ವಿರುದ್ಧ ಇಂದಿರಾ ಗಾಂಧಿ ಅವರು ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ (Pakistan) ವಿರುದ್ಧ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಮುಖ್ಯಮಂತ್ರಿಗಳು ಯುದ್ಧ ಬೇಡವೇ ಬೇಡ ಎಂದು ಹೇಳಿಲ್ಲ. ಆದ್ರೆ ಯುದ್ಧವೇ ಪರಿಹಾರವಲ್ಲ ಅನ್ನುವ ಅರ್ಥದಲ್ಲಿ ಹೇಳಿದ್ದಾರೆ. ಅವರ ಬಳಿಯೂ ನ್ಯೂಕ್ಲಿಯರ್ ಇದೆ, ಅಣುಬಾಂಬ್ ದಾಳಿಯ ಬೆದರಿಕೆ ಹಾಕ್ತಿದ್ದಾರೆ. ಹಾಗಾಗಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಯುದ್ಧ ಮಾಡಲಿ ಅಂತ ಸಿಎಂ ಹೇಳಿದ್ದಾರೆಂದು ತಿಳಿಸಿದರು.
ಶತ್ರು ರಾಷ್ಟ್ರದ ವಿರುದ್ಧ ಯುದ್ಧ (War) ಆಗಲೇಬೇಕು, ಪಾಕ್‌ಗೆ ತಕ್ಕ ಶಾಸ್ತಿ ಮಾಡಬೇಕು. ಹಾಗಾಗಿ ಇಂದಿರಾ ಗಾಂಧಿ (Indira Gandhi) ಅವರು ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ಆಗಬೇಕು. ಮೋದಿ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳೂ ಇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಗಡಿಯಲ್ಲಿ ಯುದ್ಧ ಕಾರ್ಮೋಡ – ಭಾರತೀಯ ಸೈನಿಕರ ಯಶಸ್ಸಿಗಾಗಿ ಪರಶುರಾಮನ ಕೊಡಲಿಯಿಟ್ಟು ಮಹಾಯಾಗ
ಇನ್ನೂ ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಎಎಸ್ಪಿ ಮೇಲೆ ಕೈಎತ್ತಿದ ಸಿಎಂ ನಡೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೊಡೆಯಲು ಹೋಗಿಲ್ಲ. ಯಾರು ಎಸ್ಪಿ ಅಂತ ಆ ಕಡೆ ಕೈ ತೋರಿಸಿದ್ದಾರೆ ಅಷ್ಟೇ ಎಂದರು. ಇದನ್ನೂ ಓದಿ: ಪಹಲ್ಗಾಮ್ ಅಟ್ಟಹಾಸದ ಬಳಿಕ ಪಾಕ್ ಪ್ರಜೆಗಳ ಗಡೀಪಾರು – 55,000 ಮಂದಿಗಿಲ್ಲ ಗಡೀಪಾರಿನ ಆತಂಕ!
ಬಿಜೆಪಿಯವರು ಬೇಕಾದ್ದು ಮಾಡಬಹುದು ಅಂದುಕೊಂಡಿದ್ದಾರೆ. ನಾಳೆ ದಿನ ಮೋದಿ ಕಾರ್ಯಕ್ರಮದಲ್ಲಿ ನಾವು 50 ಜನ ಹೋಗಿ ಗಲಾಟೆ ಮಾಡಿದ್ರೆ ಅಥವಾ ಹೆಣ್ಣು ಮಕ್ಕಳನ್ನ ಮುಂದೆ ಬಿಟ್ಟು ಗಲಾಟೆ ಮಾಡಿಸಿದ್ರೆ ಹೇಗಿರುತ್ತೆ? ಬಿಜೆಪಿಯಲ್ಲಿ ಗಂಡಸರು ಬರಬೇಕಾಗಿತ್ತಲ್ವಾ? ಅವರ ಪಕ್ಷದಲ್ಲಿ ಗಂಡಸರು ಇರಲಿಲ್ವಾ ಅಂತ ಲೇವಡಿ ಮಾಡಿದರು. ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್’ ಅಂತ ಕೂಗಿದ ಜಿಪ್‌ಲೈನ್ ಆಪರೇಟರ್