ನವದೆಹಲಿ: ಪಹಲ್ಗಾಮ್ (Pahalgam Terrorist Attack) ಉಗ್ರರ ಅಟ್ಟಹಾಸದ ಬೆನ್ನಲ್ಲೇ ಪಾಕ್ (Pakistan) ಜೊತೆ ಎಲ್ಲಾ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿರುವ ಭಾರತ (India), ಕಟ್ಟುನಿಟ್ಟಿನ ಸೂಚನೆ ಹೊರಡಿಸಿ ಅಲ್ಪಾವಧಿ ವೀಸಾ ಹೊಂದಿರುವ ಪಾಕ್ ಪ್ರಜೆಗಳ ಗಡೀಪಾರು ಮಾಡುವ ಕೆಲಸ ಮಾಡುತ್ತಿದೆ. ಹೀಗಿದ್ದು ಭಾರತದಲ್ಲಿ (India) ಇನ್ನೂ 55,000 ಪಾಕ್ ಪ್ರಜೆಗಳಿದ್ದಾರೆ ಎಂದು ತಿಳಿದು ಬಂದಿದೆ.
ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಕೇಂದ್ರ ಸರ್ಕಾರ ಭಾರತದಲ್ಲಿರುವ ಪಾಕ್ ಪ್ರಜೆಗಳ 14 ರೀತಿಯ ವೀಸಾಗಳನ್ನು ರದ್ದುಗೊಳಿಸಿತ್ತು. ಜೊತೆಗೆ 48 ಗಂಟೆಯೊಳಗೆ ಭಾರತ ಬಿಟ್ಟು ತೆರಳುವಂತೆ ಸೂಚನೆ ನೀಡಿತ್ತು.ಇದನ್ನೂ ಓದಿ: ಉಗ್ರರು ಗುಂಡು ಹಾರಿಸುವ ಹೊತ್ತಲ್ಲಿ 3 ಬಾರಿ ‘ಅಲ್ಲಾಹು ಅಕ್ಬರ್’ ಅಂತ ಕೂಗಿದ ಜಿಪ್‌ಲೈನ್ ಆಪರೇಟರ್
ಕೇಂದ್ರದ ಕಟ್ಟುನಿಟ್ಟಿನ ಸೂಚನೆ ಬಳಿಕ ದೇಶದಲ್ಲಿ ಇನ್ನೂ 55,000 ಪಾಕ್ ಪ್ರಜೆಗಳಿದ್ದಾರೆ. ಈ 55,000 ಪಾಕ್ ಪ್ರಜೆಗಳು ದೀರ್ಘಾವಧಿ ವೀಸಾ ಹೊಂದಿದ್ದು, ಈ ಪೈಕಿ 54 ಸಾವಿರ ಮಂದಿ ಜನ ರಾಜಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈಗಾಗಲೇ ಅಲ್ಪಾವಧಿ ವೀಸಾ ಹೊಂದಿದ್ದವರನ್ನು ರಾಜ್ಯ ಸರ್ಕಾರಗಳು ಹೊರಹಾಕಿವೆ. ಆದರೂ ಕೂಡ ಇನ್ನೂ ದೇಶದಲ್ಲಿ 55,000 ಪಾಕ್ ಪ್ರಜೆಗಳಿದ್ದಾರೆ.
ಪಾಕಿಸ್ತಾನದಿಂದ ಬಂದು ಭಾರತೀಯರನ್ನು ಮದುವೆಯಾದವರಿಗೆ ಭಾರತ ಸರ್ಕಾರ ದೀರ್ಘಾವಧಿ ವೀಸಾ ನೀಡಿದೆ. ರಾಜಸ್ಥಾನದ ಗಡಿಯ ಹಳ್ಳಿಗಳಲ್ಲಿ ಈಗಲೂ ಕೂಡ ಪಾಕಿಸ್ತಾನದಿಂದ ಹೆಣ್ಣು ತಂದು ಮದುವೆ ಮಾಡಿಕೊಳ್ಳುವ ಸಂಸ್ಕೃತಿಯಿದೆ. ಹೀಗಾಗಿ ದೀರ್ಘಾವಧಿ ವೀಸಾ ಹೊಂದಿದ ಪಾಕ್ ಪ್ರಜೆಗಳ ಗಡೀಪಾರು ಮಾಡಲು ಕಾನೂನು ತೊಡಕು ಉಂಟಾಗಿದೆ.ಇದನ್ನೂ ಓದಿ: ಉಡುಪಿಯ ಕಾರ್ಕಳದಲ್ಲಿ ಉದ್ಯಮಿ ಆತ್ಮಹತ್ಯೆ – ಕಾರಿನೊಳಗೆ ಗುಂಡು ಹಾರಿಸಿಕೊಂಡ ವ್ಯಕ್ತಿ