ವ್ಯಾಟಿಕನ್ ಸಿಟಿ: ಕ್ಯಾಥೋಲಿಕ್ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ (Pope Francis) ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಸಮಾವೇಶ ಮೇ 7ರಿಂದ ಆರಂಭವಾಗಲಿದೆ.
ಅನಾರೋಗ್ಯದಿಂದ ಏ.21 ರಂದು ನಿಧನರಾದ ಕ್ರಿಶ್ಟಿಯನ್ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಏ.26ರಂದು ನೆರವೇರಿದೆ. ಅಂತ್ಯಕ್ರಿಯೆ ಬಳಿಕ ಸೋಮವಾರ ಕಾರ್ಡಿನಲ್‌ಗಳ ಅನೌಪಚಾರಿಕ ಸಭೆ ನಡೆಸಲಾಗಿತ್ತು. ಸಭೆಯಲ್ಲಿ 180ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಸಮಾವೇಶದ ದಿನಾಂಕ ಪ್ರಕಟಿಸಲಾಗಿದೆ.ಇದನ್ನೂ ಓದಿ:ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?
ಹೊಸ ಪೋಪ್ ಆಯ್ಕೆಗೆ ಮತದಾನ ನಡೆಯಲಿದ್ದು, ಕಾರ್ಡಿನಲ್ ಕಾಲೇಜು ಎಂದು ಕರೆಯಲ್ಪಡುವ 135 ಮಂದಿಯ ಸಣ್ಣ ಗುಂಪು ಮತದಾನ ಮಾಡಲಿದೆ.
ಹೊಸ ಪೋಪ್ ಆಯ್ಕೆ ಹೇಗೆ?
ಪೋಪ್ ನಿಧನರಾದ 15 ರಿಂದ 20 ದಿನಗಳ ಬಳಿಕ ನೂತನ ಪೋಪ್ ಆಯ್ಕೆಯ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವಿಶ್ವದ ವಿವಿಧೆಡೆಯಿಂದ ವ್ಯಾಟಿಕನ್‌ಗೆ ಆಗಮಿಸುತ್ತಾರೆ. ಬಳಿಕ ಪೋಪ್ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್‌ಗಳು ಚರ್ಚೆ ನಡೆಸುತ್ತಾರೆ. ಸಿಸ್ಟೀನ್ ಛಾಪೆಲ್‌ನಲ್ಲಿ ಈ ಮತದಾನ ಪ್ರಕ್ರಿಯೆಯು ನಡೆಯುತ್ತದೆ.
ಎಲ್ಲಾ ಕಾರ್ಡಿನಲ್‌ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ. ಅವರ ಧಾರ್ಮಿಕ ಜ್ಞಾನದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಇವರಲ್ಲಿ ಒಬ್ಬರು ಮೂರನೇ ಎರಡಷ್ಟು ಮತ ಪಡೆಯುವವರೆಗೂ ದಿನದಲ್ಲಿ 2 ಬಾರಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಇದು ಒಂದೇ ದಿನದಲ್ಲಿ ಮುಗಿಯುವ ಪ್ರಕ್ರಿಯೆಯಲ್ಲ.ಇದನ್ನೂ ಓದಿ:Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?
ಈ ಮತದಾನ ಪ್ರಕ್ರಿಯೆಯು ತುಂಬಾ ರಹಸ್ಯವಾಗಿ ನಡೆಯುತ್ತದೆ. ಈ ಉದ್ದೇಶದಿಂದ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದ ಸಂಪರ್ಕದಿಂದ ಅವರನ್ನು ದೂರ ಇಡಲಾಗುತ್ತದೆ. ಅಲ್ಲಿ ಫೋನ್ ಸೌಲಭ್ಯವೂ ಇರುವುದಿಲ್ಲ.
ಕಪ್ಪು, ಬಿಳಿ ಹೊಗೆಯ ಸಂಕೇತ:
ಜನರಿಗೆ ಪ್ರತಿದಿನವು ಪೋಪ್ ಆಯ್ಕೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಆಯ್ಕೆಯ ಮಾಹಿತಿಯನ್ನು ಕಪ್ಪು, ಬಿಳಿ ಹೊಗೆಯ ಸಂಕೇತದ ಮೂಲಕ ತಿಳಿಸಲಾಗುತ್ತದೆ. 3ನೇ 2ರಷ್ಟು ಮತ ಪಡೆದವರು ಪೋಪ್ ಆಗಿ ಆಯ್ಕೆ ಆಗುತ್ತಾರೆ. ಆಯ್ಕೆ ಆಗದೇ ಇರುವುದನ್ನು ಸೂಚಿಸಲು ಕಪ್ಪು ಹೊಗೆಯನ್ನು ಹೊರಬಿಡಲಾಗುತ್ತದೆ. ಆಯ್ಕೆ ಆಗಿರುವುದನ್ನು ಸೂಚಿಸಲು ಬಿಳಿ ಹೊಗೆಯನ್ನು ಹೊರಸೂಸಲಾಗುತ್ತದೆ. ಈ ಬಿಳಿ ಹೊಗೆ ಕ್ರೈಸ್ತ್ರರ ಅಧಿಕೃತ ಪೋಪ್ ಆಯ್ಕೆಯ ಸಂಕೇತವಾಗಿರುತ್ತದೆ.
ಒಣ ಹುಲ್ಲುಗಳನ್ನು ಸುಡುವ ಮೂಲಕ ಕಪ್ಪುಹೊಗೆಯು ಕಾಣಿಸುತ್ತದೆ. ಬಿಳಿ ಹೊಗೆ ಕಾಣಿಸಲು ಹಸಿ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಆದರೆ ಈಗ ರಾಸಾಯನಿಕಗಳನ್ನು ಬಳಸುವ ಮೂಲಕ ಕಪ್ಪು ಹಾಗೂ ಬಿಳಿ ಹೊಗೆಯನ್ನು ತೋರಿಸಲಾಗುತ್ತದೆ. ಈ ಮತದಾನ ಪ್ರಕ್ರಿಯೆಯು ರಹಸ್ಯವಾಗಿರುವುದರಿಂದ ಮತದಾನದ ಪತ್ರಗಳನ್ನು ಸುಡಲಾಗುತ್ತದೆ.ಇದನ್ನೂ ಓದಿ:ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಐಸ್‌ಕ್ರೀಮ್!