ಬೆಂಗಳೂರು: ರೈಲ್ವೇ ನೇಮಕಾತಿ ಪರೀಕ್ಷೆ ವೇಳೆ ಮಂಗಳಸೂತ್ರ ಧರಿಸಿದ್ರೆ ಪರೀಕ್ಷೆಗೆ ಅವಕಾಶವಿಲ್ಲ ಎಂಬ ನಿರ್ಬಂಧವನ್ನು ರೈಲ್ವೆ ಸಚಿವಾಲಯ ವಾಪಸ್ ಪಡೆದಿದೆ.
ಜನಿವಾರ ವಿವಾದದಿಂದಾಗಿ ತೀವ್ರ ಟೀಕೆ, ಅಸಮಾಧಾನ ವ್ಯಕ್ತವಾಗಿದ್ದ ಬೆನ್ನಲ್ಲೇ ಈಗ ನಿರ್ಬಂಧ ಸಡಿಲಿಸಲಾಗಿದೆ. ಮಾರ್ಗಸೂಚಿಯಲ್ಲಿ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂದು ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ
ಈ ಬಗ್ಗೆ ಸಂಸದರು, ಶಾಸಕರು ಮನವಿ ಮಾಡಿದ ಹಿನ್ನೆಲೆ ಟ್ವೀಟ್ ಮೂಲಕ ಕೇಂದ್ರ ಸಚಿವ ಸೋಮಣ್ಣ ಗೊಂದಲಕ್ಕೆ ಇತಿಶ್ರೀ ಹಾಡಿದ್ದಾರೆ. ಜನಿವಾರ, ಮಾಂಗಲ್ಯ, ಸಂಸ್ಕೃತಿ ಬಿಂಬಿಸುವ ಯಾವುದೇ ವಸ್ತು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ವೈಭವ್ ʻಯಶಸ್ವಿʼ ಶತಕ – ಚಿರಯುವಕನ ಆಟಕ್ಕೆ ಗುಜರಾತ್ ಧೂಳಿಪಟ, ರಾಜಸ್ಥಾನ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ