ಶ್ರೀನಗರ: ಪಲಹ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿ (Pahalgam Terror Attack) ಸಂಬಂಧ ಮತ್ತೊಂದು ವೀಡಿಯೋ ರಿಲೀಸ್ ಆಗಿದ್ದು, ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ತೆರಳುತ್ತಿದ್ದ ಪ್ರವಾಸಿಗರೊಬ್ಬರ (Tourist) ಮೊಬೈಲ್‌ನಲ್ಲಿ ಉಗ್ರರ ದಾಳಿಯ ಭೀಕರ ದೃಶ್ಯಗಳು ಸೆರೆಯಾಗಿವೆ.
ಅಹಮದಾಬಾದ್‌ನ ರಿಷಿ ಭಟ್ ಅವರ ಮೊಬೈಲ್‌ನಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ. ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ಹೋಗುವಾಗಲೇ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದೂ ಕೇಳಿದೆ. ಆದರೆ ಪ್ರವಾಸಿಗ ರಿಷಿ ಭಟ್‌ಗೆ ಇದರ ಅರಿವೇ ಇರಲಿಲ್ಲ. ತಮಗೆ ಅರಿವೇ ಇಲ್ಲದೇ ದಾಳಿಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಭಾರತ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು, ನಮ್ಮ ಪಡೆಗಳನ್ನೂ ಬಲಪಡಿಸಿದ್ದೇವೆ: ಪಾಕ್ ಸಚಿವ
ರಿಷಿ ಜಿಪ್‌ಲೈನ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಕೆಳಗಡೆ ಪ್ರವಾಸಿಗರು ಏಕಾಏಕಿ ಓಡಲು ಶುರುಮಾಡುತ್ತಾರೆ. ಬಳಿಕ ಉಗ್ರನೊಬ್ಬ ಪ್ರವಾಸಿಗನ ತಲೆಗೆ ಗುಂಡು ಹೊಡೆಯುತ್ತಾನೆ. ಆ ಪ್ರವಾಸಿಗ ಅಲ್ಲೇ ಕುಸಿದು ಬಿದ್ದು ಉಸಿರು ಚೆಲ್ಲುತ್ತಾನೆ. ಈ ವೇಳೆ ದಾಳಿಯ ಅರಿವಾಗಿ ಜಿಪ್‌ಲೈನ್‌ನಲ್ಲಿದ್ದ ರಿಷಿ ಭಟ್ 15 ಫೀಟ್ ಎತ್ತರದಿಂದ ಕೆಳಗೆ ಹಾರಿ ಪತ್ನಿ ಮತ್ತು ಮಗುವಿನೊಂದಿಗೆ ಓಡುತ್ತಾರೆ. ಇದಕ್ಕೂ ಮುನ್ನ ರಿಷಿ ಭಟ್ ಅವರ ಪತ್ನಿ ಜೊತೆ ಇನ್ನೂ ಒಂದು ದಂಪತಿ ಇದ್ದರು. ಅವರ ಬಳಿ ಬಂದ ಉಗ್ರ ಅವರ ಧರ್ಮ ಕೇಳಿ ಅವರನ್ನು ಗುಂಡಿಕ್ಕಿ ಸಾಯಿಸುತ್ತಾನೆ. ಈ ವೇಳೆ ಜಿಪ್‌ಲೈನಲ್ಲಿದ್ದ ಕಾರಣ ನಾನು ಜೀವಂತವಾಗಿ ಉಳಿದಿದ್ದೇನೆ. ನನ್ನ ಕಣ್ಣಮುಂದೆಯೇ 16ರಿಂದ 18 ಜನ ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಸಾಯಿಸುವುದನ್ನು ನೋಡಿದ್ದೇನೆ ಎಂದು ಸ್ವತಃ ರಿಷಿ ಭಟ್ ಹೇಳಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ಎಗರಿಸಿದ ಖದೀಮರು