– ಮೋದಿ 100% ಹ್ಯಾಂಡಲ್ ಮಾಡ್ತಾರೆ ಎಂದ ನಿರ್ದೇಶಕ
ಬೆಂಗಳೂರು: ಪಾಕಿಸ್ತಾನದ ಉಗ್ರರು ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು ಎಂದು ನಿರ್ದೇಶಕ ಪ್ರೇಮ್ (Director Prem) ಪೆಹಲ್ಗಾಮ್ ಉಗ್ರರ ದಾಳಿಯನ್ನು (Pahalgam Terror Attack) ತೀವ್ರವಾಗಿ ಖಂಡಿಸಿದ್ದಾರೆ.
ಉಗ್ರರ ದಾಳಿಯ ಕುರಿತು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಉಗ್ರರಿಗೆ ಸೆಂಟಿಮೆಂಟ್ ತೊರಿಸಲು ಹೋಗಲೇಬಾರದು. ಏನಿದ್ರೂ ಹೊಡಿ, ಕಡಿ ಅಷ್ಟೇ. ಅಮಾಯಕ ಜೀವಗಳನ್ನ ತೆಗೆದಿದ್ದಾರೆ ಅಂದ್ರೆ ಅವರನ್ನೆಲ್ಲ ಕತ್ತರಿಸಿ, ಪೀಸ್ ಮಾಡಿ ಎಸೆಯಬೇಕು ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಗನ್ ಹಿಡಿದು ‘ಕಿಲ್ಲರ್’ ಕಥೆ ಹೇಳೋಕೆ ಸಜ್ಜಾದ ಜ್ಯೋತಿ ರೈ
ಅವರದ್ದು ಹೇಡಿತನ, ಅವರ ಮೇಲೆ ಎಮೋಷನ್ಸ್ ಬೇಡ. ಕೆಲವರು ಯುದ್ಧ ಬೇಡ ಅಂತಾ ಹೇಳ್ತಾರಲ್ಲ. ಆದರೆ ಸ್ವಾಮಿ ಯುದ್ಧ ಮಾಡ್ಬೇಕು. ನಾವು ಬದುಕಬೇಕು ಅಂದ್ರೆ ಯುದ್ಧ ಮಾಡಲೇಬೇಕು. ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವು ಯುದ್ಧ ಮಾಡಬೇಕು. ಇದು ಉಗ್ರರ ಹೀನಕೃತ್ಯ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಂತ್ರವಾದಿ ಗೆಟಪ್‌ನಲ್ಲಿ ಬಂದ ಸಮಂತಾ- ಏನಿದು ಹೊಸ ಅವತಾರ?
ಪ್ರಧಾನಿ ಮೋದಿಯವ್ರು (Narendra Modi) ಇದ್ದಾರೆ. 100% ಅವರು ಇದನ್ನು ಹ್ಯಾಂಡಲ್ ಮಾಡ್ತಾರೆ. ನಮ್ಮವರು ಏನೂ ಕಮ್ಮಿ ಇಲ್ಲ. ಆ ಉಗ್ರರನ್ನು ಸುಮ್ನೆ ಬಿಡಲ್ಲ, ಹೊಡಿತಾರೆ. ಹೊಡಿಲಿ ಅಂತಾನೇ ನಾನು ಕಾಯ್ತಿದ್ದೀನಿ ಎಂದು ಹೇಳಿದರು. ಇದನ್ನೂ ಓದಿ: ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್
ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದು, 1 ವಿದೇಶಿ ಪ್ರವಾಸಿಗ ಸೇರಿ 26 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದರು. ಈ ದಾಳಿಗೆ ದೇಶದಾದ್ಯಂತ ಭಾರೀ ಖಂಡನೆ ವ್ಯಕ್ತವಾಗಿದ್ದು, ಎಲ್ಲೆಡೆ ಪ್ರತೀಕಾರದ ಕೂಗು ಕೇಳಿಬರುತ್ತಿದೆ.