‘ಅನಿಮಲ್’ ಖ್ಯಾತಿಯ (Animal) ತೃಪ್ತಿ ದಿಮ್ರಿ (Triptii Dimri) ಅವರು ವೆಕೇಷನ್ ಮೂಡ್‌ನಲ್ಲಿದ್ದಾರೆ. ಬೀಚ್ ಬಳಿ ತೃಪ್ತಿ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಮೈಮಾಟ ನೋಡಿ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ:ನಿರ್ಮಾಪಕಿಯಾದ ರಾಕಿಂಗ್ ಸ್ಟಾರ್ ಯಶ್ ತಾಯಿ
ಸಿನಿಮಾ ಮತ್ತು ಸಾಮಾಜಿಕ ಜಾಲತಾಣದಲ್ಲಿ ತೃಪ್ತಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಈ ನಡುವೆ ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ವೆಕೇಷನ್‌ನಲ್ಲಿ ಅವರು ಬ್ಯುಸಿಯಾಗಿದ್ದಾರೆ. ಕಡಲ ತೀರದಲ್ಲಿ ನಟಿ ತುಂಡು ಬಟ್ಟೆ ಧರಿಸಿ ಸಖತ್ ಹಾಟ್ ಆ್ಯಂಡ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಥಾಮಾ’ ಚಿತ್ರಕ್ಕಾಗಿ ಊಟಿಯಲ್ಲಿ ಬೀಡುಬಿಟ್ಟ ರಶ್ಮಿಕಾ ಮಂದಣ್ಣ
ವಿವಿಧ ಭಂಗಿಯಲ್ಲಿ ಪೋಸ್ಟ್ ಕೊಟ್ಟಿರೋ ತೃಪ್ತಿ ದಿಮ್ರಿ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಸೂರ್ಯನ ಕಿರಣಕ್ಕೆ ನಟಿ ಮೈಯೊಡ್ಡಿ ನಿಂತಿದ್ದಾರೆ.
2017ರಲ್ಲಿ ‘ಮೋಮ್’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ‘ಲೈಲಾ ಮಜ್ನು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ‘ಅನಿಮಲ್’ (Animal) ಚಿತ್ರದಲ್ಲಿ ರಣಬೀರ್ ಕಪೂರ್‌ಗೆ (Ranbir Kapoor) 2ನೇ ನಾಯಕಿಯಾಗಿ ನಟಿಸಿದರು. ಬಾಬಿ 2 ಎಂದೇ ತೃಪ್ತಿ ಫೇಮಸ್ ಆದರು.
‘ಅನಿಮಲ್’ ಸಿನಿಮಾದಲ್ಲಿ ರಣಬೀರ್‌ಗೆ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ತೃಪ್ತಿ ನಾಯಕಿಯರಾಗಿ ನಟಿಸಿದ್ದರು. ಚಿತ್ರದಲ್ಲಿ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡು ಟಾಕ್ ಆಫ್ ದಿ ಟೌನ್ ಆಗಿದ್ದರು.
2024ರಲ್ಲಿ ‘ಭೂಲ್ ಭುಲೈಯಾ 3’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಕೂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಸದ್ಯ ಅವರು ‘ದಡಕ್ 2’ ಮತ್ತು ಬಾಲಿವುಡ್‌ನ ಮತ್ತೊಂದು ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ನಟಿಸುತ್ತಿದ್ದಾರೆ. ಸೌತ್‌ನಿಂದಲೂ ಅವರಿಗೆ ಆಫರ್ ಅರಸಿ ಬರುತ್ತಿದೆ.