ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಜಯಗಳಿಸಿದ ಬಳಿಕ ವಿರಾಟ್ ಕೊಹ್ಲಿ (Virat Kohli) ಇದು ನನ್ನ ಮೈದಾನ ಎಂದು ಹೇಳಿ ಕೆಎಲ್ ರಾಹುಲ್‌ಗೆ ಟಾಂಗ್ ನೀಡಿದ್ದಾರೆ.
6 ವಿಕೆಟ್‌ಗಳ ಜಯಗಳಿಸಿದ ಬಳಿಕ ರಾಹುಲ್ ಜೊತೆ ಕೊಹ್ಲಿ ಸಂತೋಷದಿಂದ ಮಾತನಾಡುತ್ತಿದ್ದರು. ಈ ವೇಳೆ ಕೊಹ್ಲಿ ನೆಲಕ್ಕೆ ಕೈ ತೋರಿಸುತ್ತಾ ಇದು ನನ್ನ ಮೈದಾನ ಹೇಳಿದರು. ಇದಕ್ಕೆ ರಾಹುಲ್, ಪೆವಿಲಿಯನ್‌ಗೆ ಕೊಹ್ಲಿ ಹೆಸರು ಇದೆ ಎಂದು ಸನ್ನೆ ಮಾಡಿದರು. ನಂತರ ಕೊಹ್ಲಿ ರಾಹುಲ್ ಅವರನ್ನು ಅಪ್ಪಿ ಮಾತನಾಡಿದರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂಲತ: ದೆಹಲಿಯವರಾದ ಕೊಹ್ಲಿ ಈ ಮೈದಾನದಲ್ಲೇ ಕ್ರಿಕೆಟ್ ಅಭ್ಯಾಸ ನಡೆಸಿದ್ದರು. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ಒಂದು ಸ್ಟ್ಯಾಂಡ್‌ಗೆ ‘ವಿರಾಟ್ ಕೊಹ್ಲಿ ಪೆವಿಲಿಯನ್’ ಎಂದು ಹೆಸರನ್ನು ಇಡಲಾಗಿದೆ.
Virat Kohli doing ‘This is my ground’ celebration in front of KL Rahul. 🤣#ViratKohli #RCBvDC #DCvRCB pic.twitter.com/ihGxGRJXPX
— ` (@18_akohli) April 27, 2025
ಟಾಂಗ್ ಕೊಟ್ಟಿದ್ದು ಯಾಕೆ?
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ (RCB) ವಿರುದ್ಧ ಗೆದ್ದ ಬಳಿಕ ಕನ್ನಡಿಗ ಕೆಎಲ್ ರಾಹುಲ್ (KL Rahul) ಕಾಂತಾರ ಶೈಲಿಯಲ್ಲಿ ವೃತ್ತ ಬರೆದು ಸಂಭ್ರಮಿಸಿದ್ದರು.
ಪಂದ್ಯಶ್ರೇಷ್ಠ ಗೌರಕ್ಕೆ ಪಾತ್ರರಾದ ರಾಹುಲ್, ಬೆಂಗಳೂರು (Bengaluru) ನನ್ನ ಮನೆ. ಈ ಮೈದಾನದ ಬಗ್ಗೆ ಎಲ್ಲರಿಗಿಂತ ಚೆನ್ನಾಗಿ ನನಗೆ ತಿಳಿದಿದೆ ಎಂದು ತಿಳಿಸಿದರು. ಈ ಡೈಲಾಗ್ ಹೊಡೆಯುವ ಮೂಲಕ ಹರಾಜಿನಲ್ಲಿ ತನ್ನನ್ನು ಪರಿಗಣಿಸದ ಆರ್‌ಸಿಬಿಗೆ ಟಾಂಗ್ ನೀಡಿದ್ದರು. ಇದನ್ನೂ ಓದಿ: `ಕಾಂತಾರ’ ನನ್ನ ಫೆವರಿಟ್ ಸಿನಿಮಾ, ಅದರಲ್ಲಿರುವಂತೆ ಮಾಡಿದೆ – ಆರ್‌ಸಿಬಿ ವಿರುದ್ಧ ಗೆದ್ದು ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದ ಕೆಎಲ್ ರಾಹುಲ್
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ್ದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 162 ರನ್ ಹೊಡೆಯಿತು. ಈ ಮೊತ್ತವನ್ನು ಪೇರಿಸಿದ ಆರ್‌ಸಿಬಿ ಇನ್ನೂ 9 ಎಸೆತ ಬಾಕಿ ಇರುವಂತೆಯೇ 165 ರನ್ ಹೊಡೆದಿ ಜಯಗಳಿಸಿತು.
ಕೃನಾಲ್ ಪಾಂಡ್ಯ ಔಟಾಗದೇ 73 ರನ್ (47 ಎಸೆತ, 5 ಬೌಂಡರಿ, 4 ಸಿಕ್ಸ್) ಹೊಡೆದರೆ ವಿರಾಟ್ ಕೊಹ್ಲಿ 51 ರನ್( 47 ಎಸೆತ, 4 ಬೌಂಡರಿ) ಹೊಡೆದು ಔಟಾದರು. ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಸಂಪಾದಿಸಿದ ಆರ್‌ಸಿಬಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.