ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್‌ ಅಫ್ರಿದಿ

Public TV
1 Min Read
Shahid Afridi

– ಪಹಲ್ಗಾಮ್‌ ಉಗ್ರರ ದಾಳಿಗೆ ಭಾರತದ ಭದ್ರತಾ ವೈಫಲ್ಯ ಕಾರಣ ಎಂದ ಮಾಜಿ ಕ್ರಿಕೆಟಿಗ

ಇಸ್ಲಾಮಾಬಾದ್: ಭಾರತದಲ್ಲಿ ಪಟಾಕಿ ಸಿಡಿದರೂ, ಅದಕ್ಕೆ ಪಾಕಿಸ್ತಾನವನ್ನೇ ದೂಷಿಸುತ್ತಾರೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಬೇಸರ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್‌ ದಾಳಿಗೆ ಪಾಕಿಸ್ತಾನ ಕಾರಣ ಅಲ್ಲ ಎಂದು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ನಾಗರಿಕರು ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿಯ ಹಿಂದೆ ಭಾರತೀಯ ಸೇನೆಯ ಭದ್ರತಾ ಲೋಪವಿದೆ ಎಂದು ಭಾರತೀಯ ಸೇನೆಯತ್ತ ಅಫ್ರಿದಿ ಬೊಟ್ಟು ಮಾಡಿ ತೋರಿಸಿದ್ದಾರೆ.

ಕಾಶ್ಮೀರದಲ್ಲಿ 8,00,000 ಸೈನಿಕರು ಇದ್ದರೂ, ಇಂತಹ ದಾಳಿಗಳು ಇನ್ನೂ ಸಂಭವಿಸುತ್ತಿವೆ. ಜನರಿಗೆ ಭದ್ರತೆ ಒದಗಿಸಲು ಸಾಧ್ಯವಾಗದಿದ್ದರೆ, ನೀವು ಅಸಮರ್ಥರು ಮತ್ತು ನಿಷ್ಪ್ರಯೋಜಕರು ಎಂದರ್ಥ ಎಂದು ಅಫ್ರಿದಿ ಮಾತನಾಡಿದ್ದಾರೆ.

ಭಾರತೀಯ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡಿದ ರೀತಿಯನ್ನು ಅಫ್ರಿದಿ ಟೀಕಿಸಿದ್ದಾರೆ. ದಾಳಿ ನಡೆದ ಒಂದು ಗಂಟೆಯೊಳಗೆ ಭಾರತದ ಮಾಧ್ಯಮ ಬಾಲಿವುಡ್ ಆಗಿ ಬದಲಾಯಿತು ಎಂಬುದು ಆಶ್ಚರ್ಯಕರ ಎಂದಿದ್ದಾರೆ.

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ 26 ಪ್ರವಾಸಿಗರು ಹತ್ಯೆಯಾದರು. ದಾಳಿ ಬೆನ್ನಲ್ಲೇ ಭಾರತೀಯ ಸೇನೆ ಅಲರ್ಟ್‌ ಆಗಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ಹೆಚ್ಚಿಸಿದೆ.

Share This Article