– ಅನಿವಾರ್ಯ ಇದ್ದರೆ ಯುದ್ಧ ಮಾಡಬೇಕು ಎಂದ ಸಿದ್ದರಾಮಯ್ಯ
ಬೆಂಗಳೂರು: ಪಾಕಿಸ್ತಾನದ (Pakistan) ಜೊತೆ ಯುದ್ಧದ ಅನಿವಾರ್ಯತೆ ಇಲ್ಲ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.
ಪಾಕ್ ಜೊತೆ ಯುದ್ಧ ಅನಿವಾರ್ಯತೆ ಇಲ್ಲ ಎಂಬ ಸಿಎಂ ಹೇಳಿಕೆ ಪಾಕ್ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇದರ ಬೆನ್ನಲ್ಲೇ ಸಿಎಂ ಹೇಳಿಕೆ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದಾರೆ. ‘ಪಾಕಿಸ್ತಾನ ರತ್ನ ಸಿದ್ದರಾಮಯ್ಯ’ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ: ಸಿದ್ದರಾಮಯ್ಯ
ಯುದ್ಧ ಅನಿವಾರ್ಯ ಆದಾಗ ಮಾತ್ರ ಮಾಡಬೇಕು. ಯದ್ದದಿಂದ ಪರಿಹಾರ ಅಲ್ಲ. ಯುದ್ದ ಬೇಡವೇ ಬೇಡ ಅಂತಾ ಹೇಳಲಿಲ್ಲ. ಯುದ್ಧನೇ ಮಾಡೋದು ಬೇಡ ಅಂತಾ ಹೇಳಲಿಲ್ಲ. ಭದ್ರತೆ ಕೊಡಬೇಕು ಎಂದು ತಿಳಿಸಿದ್ದಾರೆ.
ಭದ್ರತೆ ವೈಫಲ್ಯ ಇದೆ ಅಂತಾ ಹೇಳಿದ್ದೀನಿ. ಇಂಟೆಲಿಜೆನ್ಸ್ ಫೇಲ್ಯೂರ್ ಅಂತಾ ಹೇಳಿದ್ದೀನಿ. ಯುದ್ಧ ಅನಿವಾರ್ಯ ಆದರೆ ಮಾಡಬೇಕು. ಯುದ್ಧ ಬೇಡ ಅಂತಾ ಹೇಳಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಾಕ್ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ
ಪಾಕಿಸ್ತಾನದವರ ಜೊತೆ ಯುದ್ಧ ಮಾಡುವುದೇ ಬೇಡ ಅಂತಾ ಹೇಳಿಲ್ಲ. ಆದರೆ, ಯುದ್ಧನೇ ಪರಿಹಾರ ಅಲ್ಲ. ಕಾಶ್ಮೀರಕ್ಕೆ ಸಾಕಷ್ಟು ಜನ ಪ್ರವಾಸಕ್ಕೆ ಹೋಗುತ್ತಾರೆ. ಅವರಿಗೆ ಭದ್ರತೆ ಕೊಡಬೇಕಲ್ವಾ? ಭದ್ರತೆ ಕೊಡಬೇಕಾದ್ದು ಕೇಂದ್ರ ಸರ್ಕಾರದ ಜವಾಬ್ದಾರಿ ಅಲ್ವ? ಹೀಗಾಗಿ, ಭದ್ರತೆಯಲ್ಲಿ ವೈಫಲ್ಯ ಇದೆ ಅಂತಾ ಹೇಳಿದ್ದೀನಿ ಎಂದು ಸಿಎಂ ಮಾತನಾಡಿದ್ದಾರೆ.
ಪಹಲ್ಗಾಮ್‌ನಲ್ಲಿ 26 ಜನ ಮೃತಪಟ್ಟಿದ್ದಾರೆ. ಪುಲ್ವಾಮಾ ದಾಳಿಯಲ್ಲಿ 40 ಜನ ಸೈನಿಕರು ಹುತಾತ್ಮರಾಗಿದ್ದರು. ಇದು ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ವೈಫಲ್ಯ. ಸೆಕ್ಯುರಿಟಿಯನ್ನು ಸರಿಯಾದ ರೀತಿಯಲ್ಲಿ ಕೊಟ್ಟಿರಲಿಲ್ಲ ಅಂತಾ ಹೇಳಿದ್ದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರ | ಉಗ್ರರ ಗುಂಡೇಟಿಗೆ ಸಾಮಾಜಿಕ ಕಾರ್ಯಕರ್ತ ಬಲಿ