ಬೆಂಗಳೂರು: ಮಹಿಳೆಯೊಬ್ಬಳು (Woman) ಕಾರು (Car) ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಇಂದಿರಾನಗರ ರಸ್ತೆಯ ನ್ಯೂ ತಿಪ್ಪಸಂದ್ರದಲ್ಲಿ ನಡೆದಿದೆ.
ಕಾರು ಟಚ್ ಮಾಡ್ತಿದ್ದಿರಿ ಎಂದು ಆರೋಪಿಸಿ ಮಹಿಳೆ ಗಲಾಟೆ ಆರಂಭಿಸಿದ್ದಾಳೆ. ಈ ವೇಳೆ ಕಾರು ಚಾಲಕನ ಕಾಲರ್ ಹಿಡಿದು, ನೆಲಕ್ಕುರುಳಿಸಿ ಥಳಿಸಿದ್ದಾಳೆ. ಅಷ್ಟೇ ಅಲ್ಲದೇ ಸಾರ್ವಜನಿಕರ ಮುಂದೆಯೇ ಕಾಲಿನಿಂದ ಒದ್ದು ನಿಂದಿಸಿದ್ದಾಳೆ ಎನ್ನಲಾಗಿದೆ.
ಗಲಾಟೆಯನ್ನು ವೀಡಿಯೋ ಮಾಡ್ತಿದ್ದ ಕ್ಯಾಬ್ ಚಾಲಕನ ಸಹೋದರನಿಗೂ ಮಹಿಳೆ ಕಾಲಿನಿಂದ ಒದ್ದಿದ್ದಾಳೆ. ಈ ದೃಶ್ಯ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದೆ. ಇಂದಿರಾನಗರ ರಸ್ತೆಯ ನ್ಯೂ ತಿಪ್ಪಸಂದ್ರದ ಇಂದು (ಏ.26) 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.