ಆನೇಕಲ್: ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬನ್ನೇರುಘಟ್ಟ (Bannerughatta) ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚಗಯ್ಯನದೊಡ್ಡಿಯಲ್ಲಿ ರಾತ್ರಿ ನಡೆದಿದೆ.
ಕೆಂಚಗಯ್ಯನದೊಡ್ಡಿ ನಿವಾಸಿ ಸುರೇಶ್ ಕೊಲೆಯಾದ ವ್ಯಕ್ತಿ. ಕಾಂತರಾಜು ಹಾಗೂ ಆತನ ಗ್ಯಾಂಗ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ – ರನ್ಯಾರಾವ್ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್, ಶುಕ್ರವಾರ ರಾತ್ರಿ ಮದ್ಯ ಸೇವಿಸಲು ಸ್ನೇಹಿತರ ಜೊತೆ ಶ್ಯಾನುಭೋಗನಹಳ್ಳಿ ತರಂಗಿಣಿ ಬಾರ್‌ಗೆ ತೆರಳಿದ್ದ. ಅದೇ ಬಾರ್‌ನಲ್ಲಿ ಆರೋಪಿ ಕಾಂತರಾಜು ಹಾಗೂ ಆತನ ಗ್ಯಾಂಗ್ ಜೋರಾಗಿ ಮಾತನಾಡುತ್ತಾ ಮದ್ಯಸೇವನೆ ಮಾಡುತ್ತಿದ್ದರು. ಇದನ್ನೂ ಓದಿ: ಕಲಬುರಗಿ| ಎಸ್‌ಬಿಐ ಎಟಿಎಂ ದರೋಡೆಕೋರರ ಕಾಲಿಗೆ ಪೊಲೀಸರ ಗುಂಡೇಟು
ಆಗ ಅಲ್ಲೇ ಮದ್ಯ ಸೇವಿಸುತ್ತಿದ್ದ ಸುರೇಶ್, ನಿಧಾನಕ್ಕೆ ಮಾತನಾಡಿ ಎಂದು ಹೇಳಿದ್ದ. ಆಗ ಕಾಂತರಾಜು ನೀನು ಯಾರು ಕೇಳೋಕೆ ಎಂದು ಹೇಳಿದ್ದ. ಈ ವೇಳೆ ಕಾಂತರಾಜು ಮತ್ತು ಸುರೇಶ್ ನಡುವೆ ನೂಕಾಟ-ತಳ್ಳಾಟ ನಡೆದಿದೆ.
ಇದಾದ ಬಳಿಕ ಸುರೇಶ್ ಮನೆಗೆ ತೆರಳಿದ್ದ. ಕಾಂತರಾಜು ಹಾಗೂ ಆತನ ಗ್ಯಾಂಗ್ ಸುರೇಶ್‌ನನ್ನು ಹಿಂಬಾಲಿಸಿಕೊಂಡು ಬಂದಿದ್ದು, ಆತನ ಮನೆಗೆ ನುಗ್ಗಿ ಪತ್ನಿ ಮುಂದೆಯೇ ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ
ಗಾಯಾಳು ಸುರೇಶನನ್ನು ಕೂಡಲೇ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ನಾಗೇಶ್ ಕುಮಾರ್, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಮತ್ತು ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಚಾಮರಾಜನಗರ| ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.