ಚಾಮರಾಜನಗರ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ (Chamarajanagara) ಜಿಲ್ಲೆಯ ಯಳಂದೂರು (Yalanduru) ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಂಬಳ್ಳಿ ಗ್ರಾಮದ ಅಭಯಗೌಡ (13), ಕೃಷ್ಷಾಪುರದ ವೃಷಬೇಂದ್ರ (14) ಮೃತ ದುರ್ದೈವಿಗಳು. ಇದನ್ನೂ ಓದಿ: ಸಿಂಧೂ ನೀರು ಪಾಕ್‌ಗೆ ಹರಿಯಬೇಕು, ಇಲ್ಲದಿದ್ರೆ ಭಾರತೀಯರ ರಕ್ತ ಹರಿಯುತ್ತೆ: ಬಿಲಾವಲ್ ಭುಟ್ಟೋ
ಬಾಲಕರಿಬ್ಬರು ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಕೋರನ ಮನೆ ಧ್ವಂಸ – 24 ಗಂಟೆಗಳಲ್ಲಿ 3ನೇ ಮನೆ ಉಡೀಸ್
ವೃಷಬೇಂದ್ರ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಮತೋರ್ವ ಬಾಲಕ ಅಭಯ್‌ಗೌಡನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.