ಶ್ರೀನಗರ: ಪಹಲ್ಗಾಮ್ ದಾಳಿಯಲ್ಲಿ (Pahalgam Attack) ಭಾಗಿಯಾಗಿರುವ ಶಂಕೆಯ ಮೇಲೆ ಮತ್ತೊಬ್ಬ ಭಯೋತ್ಪಾದಕ (Terrorist) ಎಹ್ಸಾನ್ ಉಲ್ ಹಕ್‌ನ ಮನೆಯನ್ನು ಭದ್ರತಾ ಪಡೆಯು ಧ್ವಂಸ ಮಾಡಿದೆ. ಸೇನೆಯು ಈವರೆಗೆ 24 ಗಂಟೆಯಲ್ಲಿ ಮೂವರು ಉಗ್ರರ ಮನೆಯನ್ನು ಉಡೀಸ್ ಮಾಡಿದೆ.
ಪುಲ್ವಾಮದಲ್ಲಿರುವ (Pulwama) ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಎಹ್ಸಾನ್‌ನ ಮನೆಯನ್ನು ಸೇನೆಯು ಕೆಡವಿದೆ. ಪೆಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಮನೆ ನಾಶ ಮಾಡಲಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ನಡೆದಿದ್ದು ಘೋರ ದುರಂತ – ಭಾರತ, ಪಾಕ್ ಉದ್ವಿಗ್ನತೆ ಬಗೆಹರಿಸಿಕೊಳ್ಳಲಿವೆ: ಟ್ರಂಪ್
ಉಗ್ರ ಎಹ್ಸಾನ್ 2018ರಲ್ಲಿ ಪಾಕಿಸ್ತಾನದಿಂದ ತರಬೇತಿ ಪಡೆದಿದ್ದನೆಂದು ಹೇಳಲಾಗಿದ್ದು, ಇತ್ತೀಚೆಗೆ ಕಾಶ್ಮೀರದ ಕಣಿವೆಯನ್ನು ಮತ್ತೆ ಪ್ರವೇಶಿಸಿದ್ದನು. ಇದನ್ನೂ ಓದಿ: ಬಲೂಚ್ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – ಆಕ್ರಮಿತ ಪಾಕಿಸ್ತಾನಿ ಸೇನೆಯ 10 ಸಿಬ್ಬಂದಿ ಹತ್ಯೆ
ಶುಕ್ರವಾರ ಅನಂತನಾಗ್ ಜಿಲ್ಲೆಯ ಬಿಜ್‌ಬೆಹರಾದ ಟ್ರಾಲ್‌ನ ಗೋರಿ ಪ್ರದೇಶದಲ್ಲಿ ಸೇನೆಯು ಸಕ್ರಿಯ ಭಯೋತ್ಪಾದಕನ ಮನೆಯನ್ನು ಬಾಂಬ್‌ನಿಂದ ಸ್ಫೋಟಿಸಿತ್ತು. ಮತ್ತೊಬ್ಬ ಶಂಕಿತ ಉಗ್ರನ ಮನೆಯನ್ನು ಬುಲ್ಡೋಜರ್‌ನಿಂದ ಕೆಡವಲಾಗಿತ್ತು. ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಸ್ಥಿತಿ – ಜಮ್ಮು ಸರ್ಕಾರ ಅಲರ್ಟ್; ವೈದ್ಯಕೀಯ ಸಿಬ್ಬಂದಿ ರಜೆ ರದ್ದು
ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ನಿವಾಸಿ ಲಷ್ಕರ್ ಭಯೋತ್ಪಾದಕ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟಾಯ ಮನೆಯನ್ನೂ ಸಹ ಧ್ವಂಸ ಮಾಡಲಾಗಿದೆ. ಈತ ಕಳೆದ ನಾಲ್ಕು ವರ್ಷಗಳಿಂದ ಉಗ್ರ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ. ಅಲ್ಲದೇ ದೇಶ ವಿರೋಧಿ ಕಾರ್ಯಗಳಿಗೆ ಬೆಂಬಲಿಸುತ್ತಿದ್ದನು ಎಂದು ಮೂಲಗಳು ತಿಳಿಸಿವೆ.