ರಾಯಚೂರು: ಸಿಡಿಲಿಗೆ (Lightning) ಬೊಲೆರೋ ವಾಹನ ಸುಟ್ಟು ಕರಕಲಾದ ಘಟನೆ ದೇವದುರ್ಗ (Devadurga) ತಾಲೂಕಿನ ಗಾಣದಾಳ ಗ್ರಾಮದಲ್ಲಿ ನಡೆದಿದೆ.
ಸೋಮನಮರಡಿ ಗ್ರಾಮದ ಹನುಮಂತ್ರಾಯ ಗಣಜಲಿ ಎಂಬುವವರಿಗೆ ಸೇರಿದ ಬೊಲೆರೋ ಇದಾಗಿದೆ. ತೆಂಗಿನ ಮರದ ಕೆಳಗೆ ಬೊಲೆರೋ ನಿಲ್ಲಿಸಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದೇ ವೇಳೆ, ಜಮೀನಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಹೈಕೋರ್ಟ್ ಮಧ್ಯಂತರ ತಡೆ
ಸಿಡಿಲು ಮೊದಲು ತೆಂಗಿನ ಮರಕ್ಕೆ ಬಡಿದಿದೆ. ಅದರ ಕಿಡಿಯಿಂದ ಪಕ್ಕದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ, ವಾಹನ ಸುಟ್ಟು ಕರಕಲಾಗಿದೆ.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: Pahalgam Attack | 11 ವರ್ಷದಿಂದ ದಿನದ 24 ಗಂಟೆ ಮುಸ್ಲಿಂ.. ಮುಸ್ಲಿಂ.. ಮುಸ್ಲಿಂ.. – ಕೇಂದ್ರದ ವಿರುದ್ಧ ಸಂತೋಷ್ ಲಾಡ್ ಸಿಡಿಮಿಡಿ